ಪಾಕ್​ ತಂಡದಲ್ಲಿ ಆ ಕೊರತೆ ಇದೆ... ವಾಸಿಮ್ ಅಕ್ರಂ​, ಯೂಸಫ್​, ಇಂಜಮಾಮ್​ ಹೆಸರು ನೆನಪಿಸಿದ ಗಂಗೂಲಿ | IND vs PAK

ಇಂಡೋ-ಪಾಕ್​ ಕದನ
ಇಂಡೋ-ಪಾಕ್​ ಕದನ
Published on

ಪ್ರಮುಖ ಮುಖ್ಯಾಂಶಗಳು

  • ಇಂದು (ಫೆ.15) ಕೊಲೊಂಬಾದಲ್ಲಿ ಇಂಡೋ-ಪಾಕ್​ ಕದನ
  • ಪಾಕಿಸ್ತಾನ ತಂಡಕ್ಕೆ ಮಣ್ಣು ಮುಕ್ಕಿಸಲು ಟೀಮ್ ಇಂಡಿಯಾ ಸನ್ನದ್ಧ
  • ಪಾಕ್​ ಮಾಜಿ ಆಟಗಾರರು ಹಾಗೂ ತಂಡವನ್ನು ನೆನೆದ ಗಂಗೂಲಿ
ಶ್ರೀಲಂಕಾ: ಟಿ20 ವಿಶ್ವಕಪ್​ ಟೂರ್ನಿಯ ಬಹುನಿರೀಕ್ಷಿತ ಹಾಗೂ ಕುತೂಹಲಕಾರಿ ಪಂದ್ಯಕ್ಕೆ ಇನ್ನೇನು ಕೆಲವೇ ಗಂಟೆಗಳು ಬಾಕಿ ಉಳಿದಿದ್ದು, ರೋಚಕತೆಗೆ ಸಾಕ್ಷಿಯಾಗಲಿದೆ ಎಂದೇ ತೀವ್ರ ಕಾತರದಿಂದ ಕಾಯುತ್ತಿರುವ ಕ್ರಿಕೆಟ್​ ಅಭಿಮಾನಿಗಳು ಪಂದ್ಯಕ್ಕೆ ವರುಣನ ಅಡ್ಡಿ ಕಾಡದಿರಲಿ ಹಾಗೂ ಟೀಮ್ ಇಂಡಿಯಾ ಜಯ ಶಾಲಿಯಾಗಲಿ ಎಂದು ಶುಭ ಹಾರೈಸುತ್ತಿದ್ದಾರೆ. ಈ ಮಧ್ಯೆ, ಟೀಮ್ ಇಂಡಿಯಾ ದಿಗ್ಗಜ, ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅವರ ಹೇಳಿಕೆಗಳು ಸದ್ಯ ಹಲವರ ಗಮನ ಸೆಳೆಯುತ್ತಿದೆ.
ಈ ಮೊದಲು ಪಾಕಿಸ್ತಾನದ ಮಿಸ್ಟರಿ ಸ್ಪಿನ್ನರ್​ ಬಗ್ಗೆ ಮಾತನಾಡಿದ ಕ್ರಿಕೆಟ್​ 'ದಾದಾ', ಯಾವುದು ಕಷ್ಟವೇನಲ್ಲ. ತಾರಿಕ್ ಒಬ್ಬ ಸಾಮಾನ್ಯ ಆಫ್​-ಸ್ಪಿನ್ನರ್. ಏನು ಒಂದು ಪಾಜ್​ ಕೊಟ್ಟು ಬೌಲಿಂಗ್ ಮಾಡ್ತಾರೆ ಅಷ್ಟೇ. ನಮ್ಮ ತಂಡ (ಟೀಮ್ ಇಂಡಿಯಾ) ಚೆನ್ನಾಗಿಯೇ ಆಡಲಿದೆ ಎಂದರು. ಇನ್ನು ತಂಡದಲ್ಲಿ ಒಂದಷ್ಟು ಬದಲಾವಣೆಯ ಅಗತ್ಯವಿದೆ ಎಂದ ಗಂಗೂಲಿ, ಅಕ್ಸರ್​, ವರುಣ್​, ಬುಮ್ರಾ ಮತ್ತು ಅರ್ಷದೀಪ್​ ಸಿಂಗ್​ ಫ್ರಂಟ್​ಲೈನ್​ ಬೌಲರ್​ಗಳ ಸ್ಥಾನದಲ್ಲಿರಬೇಕು. ತಂಡದ ಮೇಲೆ ನನಗೆ ಭರವಸೆಯಿದೆ ಎಂದು ಹೇಳಿದರು.

ಇಂಜಮಾಮ್​, ಸೈಯಿದ್​ ಅನ್ವರ್​....

ಈಗಿರುವ ಪಾಕಿಸ್ತಾನ ತಂಡ ಆಗಿನಂತೆ ಬಲಿಷ್ಠತೆಯಿಂದ ಕೂಡಿಲ್ಲ. ಒಟ್ಟಾರೆ, ಮೊದಲಿನಂತೆ ಇಲ್ಲ. ಆಗ ಇಂಜಮಾಮ್​ ಉಲ್​ ಉಕ್​, ಸೈಯಿದ್​ ಅನ್ವರ್​, ಮೊಹಮ್ಮದ್​ ಯೂಸಫ್​, ವಾಸಿಮ್​ ಅಕ್ರಂ, ವಾಖರ್​ ಯೂನಿಸ್​ ಅವರಂತಹ ಆಟಗಾರರಿಂದ ಪಾಕ್​ ಬ್ಯಾಟಿಂಗ್​ ಯೂನಿಟ್​ ಗಟ್ಟಿಯಾಗಿತ್ತು. ಈಗ ಅದ್ಯಾವುದೂ ಇಲ್ಲ ಎಂದರು,(ಏಜೆನ್ಸೀಸ್).

ಭಾರತ ತಂಡ

ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ (ಉಪನಾಯಕ), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net