ಆಡುವುದಾಗಿ ಹೇಳಿದ್ದರೂ ಹೈವೋಲ್ಟೇಜ್​ ಇಂಡೋ-ಪಾಕ್ ಕದನ​ ನಡೆಯೋದು ಡೌಟ್​! ಹೀಗಿದೆ ಕಾರಣ | IND vs PAK

ಇಂಡೋ-ಪಾಕ್​ ಕದನ
ಇಂಡೋ-ಪಾಕ್​ ಕದನ
Published on

ಪ್ರಮುಖ ಮುಖ್ಯಾಂಶಗಳು

  • ಫೆ.15ರಂದು ಕೊಲೊಂಬೊದಲ್ಲಿ ಇಂಡೋ-ಪಾಕ್​ ಕದನ
  • ಭಾರತ ವಿರುದ್ಧ ಆಡುವುದಾಗಿ ಹೇಳಿದ್ದರೂ ಹೈವೋಲ್ಟೇಜ್ ಪಂದ್ಯ ನಡೆಯೋದು ಅನುಮಾನ
  • ಇದಕ್ಕೆ ಕಾರಣವೇನು? ಎಂಬುದಕ್ಕೆ ಇಲ್ಲಿದೆ ನೋಡಿ ಉತ್ತರ
ಶ್ರೀಲಂಕಾ: ಇದೇ ಭಾನುವಾರ (ಫೆ.15) ಕೊಲೊಂಬಾ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಟಿ20 ವಿಶ್ವಕಪ್ ಪಂದ್ಯಕ್ಕೆ ಇಡೀ ಜಗತ್ತೇ ಕುತೂಹಲದಿಂದ ಕಾಯುತ್ತಿದೆ. ಆರಂಭದಲ್ಲಿ ಬಾಂಗ್ಲಾಗೆ ಬೆಂಬಲ ಸೂಚಿಸುವ ನೆಪದಲ್ಲಿ ಟೀಮ್ ಇಂಡಿಯಾ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಿದ್ದ ಪಾಕಿಸ್ತಾನ, ದಿಢೀರ್​ ಯು-ಟರ್ನ್​ ಹೊಡೆಯುವ ಮೂಲಕ ಆಡ್ತೇವೆ ಎಂದು ತಿಳಿಸಿತು. ಪಾಕ್​ ಏನೋ ಆಡುತ್ತೇವೆ ಎಂದಿದ್ದೇ ಆದರೂ ಮ್ಯಾಚ್​ಗೆ ವರುಣ ಒಪ್ಪುವುದು ಅನುಮಾನ ಎನ್ನುವಂತಾಗಿದೆ.
ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇದೀಗ ವರುಣನ ಭೀತಿ ಎದುರಾಗಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಭಾನುವಾರ ಕೊಲಂಬೊದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಹಗಲಿನಲ್ಲಿ ಶೇ.93ರಷ್ಟು ಮಳೆ ಬೀಳಲಿದ್ದು, ಸಂಜೆಯ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಶೇ.26 ರಷ್ಟಿದೆ ಎಂದು ವರದಿಯಾಗಿದೆ.
ಈ ಪಂದ್ಯಕ್ಕೆ ನಿಜಕ್ಕೂ ವರುಣನಿಂದ ಅಡಚಣೆ ಉಂಟಾಗಲಿದೆಯೇ ಎಂಬುದಕ್ಕೆ ಭಾನುವಾರ ಸ್ಪಷ್ಟ ಸಿಗಲಿದೆ. ಅಕಸ್ಮಾತ್​, ಇಂಡೋ-ಪಾಕ್ ಪಂದ್ಯ ಮಳೆಯಿಂದ ರದ್ದಾದರೆ, ಶ್ರೀಲಂಕಾ ಕ್ರಿಕೆಟ್​ಗೆ ದೊಡ್ಡ ಆರ್ಥಿಕ ಹೊಡೆತ ಬೀಳುವುದು ಖಚಿತ. ಇದರೊಟ್ಟಿಗೆ, ಅಪಾರ ಸಂಖ್ಯೆಯಲ್ಲಿ ಮ್ಯಾಚ್ ನೋಡಲು ಬರುವ ಕ್ರಿಕೆಟ್​ ಅಭಿಮಾನಿಗಳಿಗೆ ಭಾರೀ ನಿರಾಸೆ ಆಗುವುದಂತು ನಿಶ್ಚಿತ,(ಏಜೆನ್ಸೀಸ್).

ಭಾರತ ತಂಡ

ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ (ಉಪನಾಯಕ), ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net