ಡ್ಯಾರಿಲ್​, ಫಿಲಿಪ್ಸ್​ ಅಮೋಘ ಶತಕದಾಟ! ಮೊದಲ ಇನ್ನಿಂಗ್ಸ್ ಮುಕ್ತಾಯ; ಗಿಲ್​ ಪಡೆಗೆ 338 ರನ್​ಗಳ ಬೃಹತ್​ ಗುರಿ | IND vs NZ ODI

ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯ
ಭಾರತ ಮತ್ತು ನ್ಯೂಜಿಲೆಂಡ್​ ವಿರುದ್ಧದ 3ನೇ ಏಕದಿನ ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಇಂದೋರ್​ನಲ್ಲಿ 3ನೇ ಏಕದಿನ ಪಂದ್ಯ, ಮೊದಲ ಇನ್ನಿಂಗ್ಸ್​ ಮುಕ್ತಾಯ
  • ಟೀಮ್ ಇಂಡಿಯಾಗೆ 338 ರನ್​ಗಳ ಬೃಹತ್​ ಗುರಿ
  • ಕಿವೀಸ್ ಪರ ಗ್ಲೆನ್​ ಫಿಲಿಪ್ಸ್​ ಮತ್ತು ಡ್ಯಾರಿಲ್ ಮಿಚೆಲ್​ ಸ್ಫೋಟಕ ಇನ್ನಿಂಗ್ಸ್​
ಇಂದೋರ್​: ​ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಮೂರು ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್​ ಪಡೆಗೆ ಡ್ಯಾರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಶತಕದಾಟ ತಂಡದ ಮೊತ್ತವನ್ನು 300ರ ಗಡಿದಾಟಿಸಿತು. 50 ಓವರ್​ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡ ನ್ಯೂಜಿಲೆಂಡ್​ 337 ರನ್​ ಕಲೆಹಾಕಿದೆ.
ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಶುಭಮನ್ ಗಿಲ್ ಪಡೆ, ಕಿವೀಸ್​ಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಕ್ರೀಸ್​ಗಿಳಿದ ನ್ಯೂಜಿಲೆಂಡ್​ನ ಸ್ಟಾರ್​ ಓಪನರ್ಸ್​ಗಳಾದ ಡೆವಾನ್​ ಕಾನ್ವೆ ಮತ್ತು ಹೆನ್ರಿ ನಿಕೋಲ್ಸ್​ ಟೀಮ್ ಇಂಡಿಯಾ ವೇಗಿಗಳ ಆರ್ಭಟಕ್ಕೆ ತತ್ತರಿಸಿದರು. ಇದು ತಂಡಕ್ಕೆ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿತು. ಆದರೆ, ಎಂದಿನಂತೆ ಕಿವೀಸ್​ಗೆ ಆಪತ್ಬಾಂಧವನಾಗಿ ನಿಲ್ಲುವ ಡ್ಯಾರಿಲ್ ಮಿಚೆಲ್​ ಸರಣಿಯಲ್ಲಿ ಎರಡನೇ ಬಾರಿಗೆ ಶತಕ ಬಾರಿಸಿ, ತಮ್ಮ ಮೇಲಿರುವ ವಿಶ್ವಾಸವನ್ನು ದ್ವಿಗುಣಗೊಳಿಸಿದ್ದಾರೆ.
ಇನ್ನು ಟೀಮ್ ಇಂಡಿಯಾ ಪರ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾ ತಲಾ ಎರಡು ವಿಕೆಟ್ ಕಬಳಿಸಿದರೆ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್ ತಲಾ ಒಂದು ವಿಕೆಟ್​ ಪಡೆದರು. ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದ್ದು, ಕಿವೀಸ್​ ಪಡೆ ನೀಡಿರುವ 338 ರನ್​ಗಳ ಬೃಹತ್ ಗುರಿಯನ್ನು ಭಾರತ ತಲುಪಲಿದೆಯೇ? ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳಲಿದೆಯೇ? ಎಂಬುದನ್ನು ದ್ವಿತೀಯ ಇನ್ನಿಂಗ್ಸ್​ನಲ್ಲಿ ಕಾದು ನೋಡಬೇಕಿದೆ.

ಮೊದಲ ಇನ್ನಿಂಗ್ಸ್​ ಬ್ಯಾಟಿಂಗ್ ವಿವರ

ಹೆನ್ರಿ ನಿಕೋಲ್ಸ್​ (0)
ಡೆವಾನ್ ಕಾನ್ವೆ (5 ರನ್​)
ವಿಲ್ ಯಂಗ್ (30 ರನ್​, 41 ಎಸೆತ)
ಡ್ಯಾರಿಲ್ ಮಿಚೆಲ್​ (137 ರನ್​, 131 ಎಸೆತ)
ಗ್ಲೆನ್ ಫಿಲಿಪ್ಸ್​ (106 ರನ್​, 88 ರನ್​)

ಬೌಲಿಂಗ್ ವಿವರ

ಹರ್ಷಿತ್ ರಾಣಾ - 2 ವಿಕೆಟ್
ಅರ್ಷದೀಪ್ ಸಿಂಗ್ - 2 ವಿಕೆಟ್​
ಮೊಹಮ್ಮದ್ ಸಿರಾಜ್ - 1 ವಿಕೆಟ್​
ಕುಲದೀಪ್​ ಯಾದವ್​ - 1 ವಿಕೆಟ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net