ಒಂದೇ ಒಂದು ಬದಲಾವಣೆ! ಇದೇ ನೋಡಿ ನ್ಯೂಜಿಲೆಂಡ್​ ವಿರುದ್ಧದ ಫೈನಲ್​ ಪಂದ್ಯಕ್ಕೆ ಟೀಮ್ ಇಂಡಿಯಾ ಅಂತಿಮ ತಂಡ

ಟೀಮ್ ಇಂಡಿಯಾ
ಟೀಮ್ ಇಂಡಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ
  • ಭಾರತ ತಂಡ ಸತತ ಎರಡನೇ ಬಾರಿಗೆ ಟಿ20 ವಿಶ್ವಕಪ್‌ನ ಫೈನಲ್​ಗೆ ಲಗ್ಗೆ
  • ತಂಡದಲ್ಲಿ ಒಂದೇ ಒಂದು ಬದಲಾವಣೆಗೆ ಮ್ಯಾನೇಜ್​ಮೆಂಟ್​ ನಿರ್ಧಾರ
IND vs NZ Final: ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್​ ಟೂರ್ನಿ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಇದೇ ಭಾನುವಾರ (ಮಾ.08) ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ಸ್​ ಪಟ್ಟಕ್ಕಾಗಿ ಸೆಣಸಲಿವೆ. ಈ ನಿಟ್ಟಿನಲ್ಲಿ, ಕ್ರಿಕೆಟ್​ ಪ್ರಿಯರಿಂದ ಹಲವು ಮಹತ್ವದ ಸಲಹೆಗಳು ಟೀಮ್ ಇಂಡಿಯಾಗೆ ಬಂದಿದ್ದು, ತಂಡದಲ್ಲಿ ಕೆಲವು ಬದಲಾವಣೆಗಳು ಬೇಕೇ ಬೇಕು ಎಂದು ಫ್ಯಾನ್ಸ್​ ಆಗ್ರಹಿಸಿದ್ದಾರೆ.      
ಮತ್ತೊಂದೆಡೆ, ನ್ಯೂಜಿಲೆಂಡ್​ ವಿರುದ್ಧ ಆಡಲು ಸಜ್ಜಾಗಿರುವ ಟೀಮ್ ಇಂಡಿಯಾದ ಅಂತಿಮ ತಂಡವನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂದು ವರದಿಗಳು ಸೂಚಿಸಿವೆ. ಟೀಮ್ ಇಂಡಿಯಾ ಕೇವಲ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಸಿದ್ಧವಾಗಿದೆ. ಬಹುತೇಕರು, ಕಳಪೆ ಪ್ರದರ್ಶನ ತೋರಿರುವ ಓಪನರ್​ ಅಭಿಷೇಕ್​ ಶರ್ಮರನ್ನು ಕೈಬಿಡಲಾಗಿದೆ ಎಂದು ಭಾವಿಸಿದ್ದಾರೆ. ಆದ್ರೆ, ಅದು ಸುಳ್ಳು. ಇಲ್ಲಿ ಆಗಿರುವುದು ಬ್ಯಾಟರ್​ ಬದಲು ಅಲ್ಲ! ಬೌಲರ್​ ಎಂಬುದು ಗಮನಾರ್ಹ. 
ತಮ್ಮ ಸ್ಪಿನ್​ ದಾಳಿಯಿಂದ ತಂಡದ ಪರ ಉತ್ತಮ ಬೌಲಿಂಗ್​ ಮಾಡುತ್ತಿದ್ದ ವರುಣ್​ ಚಕ್ರವರ್ತಿ, ಮಿಡಲ್​ ಓವರ್​ಗಳಲ್ಲಿ ಫುಲ್​ ಕಂಟ್ರೋಲ್​ ಮಾಡುತ್ತಿದ್ದ ಮಿಸ್ಟರಿ ಸ್ಪಿನ್ನರ್​. ಆದರೆ, ಅದ್ಯಾಕೋ ಸೂಪರ್​-8 ಹಂತಕ್ಕೆ ಹೋಗುತ್ತಿದ್ದಂತೆ ತಮ್ಮ ಲಯ ಕಳೆದುಕೊಂಡಿರುವ ಚಕ್ರವರ್ತಿ, ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ರನ್​ಗಳ ಹೊಳೆಯನ್ನೇ ಹರಿಯಲು ಬಿಟ್ಟರು. ಇದರಿಂದ ಕುಪಿತಗೊಂಡಿರುವ ಅಭಿಮಾನಿಗಳು, ವರುಣ್​ ಬದಲಿಗೆ ಕುಲದೀಪ್​ಗೆ ಅವಕಾಶ ಕೊಡಿ ಎಂದು ಟೀಮ್​ ಮ್ಯಾನೇಜ್​ಮೆಂಟ್​ಗೆ ಸೋಷಿಯಲ್ ಮೀಡಿಯಾ ಮೂಲಕ ಸಲಹೆ ನೀಡಿದ್ದಾರೆ.
ವರುಣ್​ಗೆ ವಿಶ್ರಾಂತಿ ಕೊಟ್ಟು ಫೈನಲ್​ ಪಂದ್ಯದಲ್ಲಿ ಕುಲದೀಪ್ ಯಾದವ್​ಗೆ ಸ್ಥಾನ ಕೊಡಲು ಬಿಸಿಸಿಐ ನಿರ್ಧರಿಸಿದೆ ಎಂದು ಒಂದಷ್ಟು ಕ್ರಿಕೆಟ್​ ವರದಿಗಳು ತಿಳಿಸಿವೆ. ಅಹಮದಾಬಾದ್ ಪಿಚ್​ನಲ್ಲಿ ಉತ್ತಮ ಟ್ರ್ಯಾಕ್ ರೆಕಾರ್ಡ್ ಹೊಂದಿರುವ ಬೌಲರ್​ ಕುಲದೀಪ್​. ಹೀಗಾಗಿ, ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ವರುಣ್​ಗೆ ರೆಸ್ಟ್​ ನೀಡಲು ನಿರ್ಧರಿಸಲಾಗಿದೆ. ಇದರೊಂದು ಬದಲಾವಣೆ ಬಿಟ್ಟರೆ ಉಳಿದೆಲ್ಲ ಆಟಗಾರರು ಎಂದಿನಂತೆ ಅಖಾಡಕ್ಕಿಳಿಯಲಿದ್ದಾರೆ. 

ಟೀಮ್ ಇಂಡಿಯಾ ಅಂತಿಮ ತಂಡದ (ಅಧಿಕೃತವಲ್ಲ)

ಸೂರ್ಯಕುಮಾರ್ ಯಾದವ್ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಇಶಾನ್ ಕಿಶನ್, ಶಿವಂ ದುಬೆ, ಅಭಿಷೇಕ್ ಶರ್ಮಾ, ಅರ್ಷದೀಪ್ ಸಿಂಗ್, ತಿಲಕ್ ವರ್ಮಾ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net