ನರೇಂದ್ರ ಮೋದಿ ಸ್ಟೇಡಿಯಂ ನ್ಯೂಜಿಲೆಂಡ್ಗೆ ವರದಾನ ಆಗಲಿದೆ. ಕಾರಣ, ಅವರ ಉತ್ತಮ ಫಾರ್ಮ್ ಇಲ್ಲಿ ವರ್ಕ್ ಆಗಲಿದೆ. ಕಿವೀಸ್ ಪಡೆಯ ಬೌಲಿಂಗ್ ಯೂನಿಟ್ ಭಾರತಕ್ಕಿಂತ ಬಲಿಷ್ಠವಾಗಿದೆ. ಅಷ್ಟಕ್ಕೂ, ಬುಮ್ರಾ ಬಿಟ್ಟರೆ ಇನ್ಯಾರು ಆ ತಂಡದಲ್ಲಿ ಒಳ್ಳೆಯ ಫಾರ್ಮ್ನಲ್ಲಿದ್ದಾರೆ? ವರುಣ್ ಚಕ್ರವರ್ತಿ ಮತ್ತು ಹಾರ್ದಿಕ್ ಪಾಂಡ್ಯ ಒದ್ದಾಡುತ್ತಿದ್ದಾರೆ. ಎರಡು ತಂಡದಲ್ಲಿಯೂ ಒಳ್ಳೆಯ ಬ್ಯಾಟಿಂಗ್ ಲೈನ್ಅಪ್ ಇದೆ. ಆದ್ರೆ, ಬೌಲಿಂಗ್ನಲ್ಲಿ ನ್ಯೂಜಿಲೆಂಟ್ ಒಂದು ಕೈಮೇಲಿದೆ. ಹೀಗಾಗಿ, ಸ್ಯಾಟ್ನರ್ ಪಡೆ ಟಿ20 ವಿಶ್ವಕಪ್ ಅನ್ನು ಗೆದ್ದು ಬೀಗಲಿದೆ ಎಂದು ಅಮೀರ್ ಹೇಳಿದ್ದಾರೆ,(ಏಜೆನ್ಸೀಸ್).