6, 6, 2, 4, 6... ಒಂದೇ ಓವರ್​ನಲ್ಲಿ ಬೆಥಲ್​ನ ಹೀರೋ ಮಾಡಿದ ರವಿ ಬಿಷ್ಣೋಯಿ​! 2 ಬಿಗ್​ ಮಿಸ್ಟೇಕ್​ ಆಂಗ್ಲರಿಗೆ ರೋಚಕ ಜಯ

IND vs ENG 2ನೇ ಟಿ20 ಸರಣಿ
IND vs ENG 2ನೇ ಟಿ20 ಸರಣಿ
Published on

ಪ್ರಮುಖ ಮುಖ್ಯಾಂಶಗಳು

  • ಎರಡನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್​ಗೆ ರೋಚಕ ಜಯ
  • 17ನೇ ಓವರ್​ನಲ್ಲಿ ರವಿ ಬಿಷ್ಣೋಯಿ ಮಾಡಿದ ಬಿಗ್ ಮಿಸ್ಟೇಕ್​
  • ಸಿಕ್ಸರ್​, ಬೌಂಡರಿಗಿಂತ ಆ ಎರಡು ತಪ್ಪೇ ಆಂಗ್ಲರ ಗೆಲುವಿಗೆ ಕಾರಣ
IND vs ENG: ಪ್ರಸಕ್ತ ಆಂಗ್ಲರ ನಾಡಿನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್​ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಜಾಕಬ್​ ಬೆಥಲ್​ ಪಡೆ 4 ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್​ ನಷ್ಟಕ್ಕೆ 190 ರನ್​ಗಳನ್ನು ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪಡೆಗೆ ಆರಂಭಿಕ ಬ್ಯಾಟರ್​ ಜಾಕಬ್​ ಬೆಥೆಲ್ ಅವರ ಸ್ಫೋಟಕ ಇನ್ನಿಂಗ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಇಂಗ್ಲೆಂಡ್​ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವಲ್ಲಿ ಎಡವಿದ ಟೀಮ್ ಇಂಡಿಯಾ ವೇಗಿಗಳ ಪೈಕಿ 17ನೇ ಓವರ್‌ ಮಾಡಿದ ಸ್ಪಿನ್ನರ್​ ರವಿ ಬಿಷ್ಣೋಯಿ ಕೇವಲ ಒಂದೇ ಓವರ್‌ನಲ್ಲಿ 29 ರನ್​ ಹೊಡೆಯಲು ಬಿಟ್ಟಿದ್ದೇ ತಂಡವನ್ನು ಸೋಲಿಗೆ ದೂಡಿತು.
17ನೇ ಓವರ್​ ವರೆಗೂ ಗೆಲುವು ಯಾರಿಗೆ ಒಲಿಯಲಿದೆ ಎಂಬ ಕೌತುಕ, ಕುತೂಹಲ ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಆದರೆ, ರವಿ ಬಿಷ್ಣೋಯಿ ಅವರ ಬೌಲಿಂಗ್​ನಲ್ಲಿ ಇಂಗ್ಲೆಂಡ್​ 2ನೇ ಟಿ20 ಪಂದ್ಯ ಎಂಬುದು ಖಚಿತವಾಯಿತು. ಇದಕ್ಕೆ ಬಲವಾದ ಕಾರಣವೇ, ಎರಡು ನೋ ಬಾಲ್‌ಗಳು ಮತ್ತು ಫ್ರೀ ಹಿಟ್‌ಗಳು. ಮೊದಲೇ ಮೂರು ಸಿಕ್ಸರ್​ ಮತ್ತು ಬೌಂಡರಿ ಹೊಡೆಸಿಕೊಂಡ ರವಿ, ಎರಡು ನೋಬಾಲ್​ ಮಾಡಿದ್ದು ಇಡೀ ಪಂದ್ಯದ ಲೆಕ್ಕಾಚಾರವನ್ನೇ ತಲೆಕೆಳಗಾಗಿಸಿತು.
ಕೇವಲ ಅದೊಂದು ಓವರ್​ನಲ್ಲಿ 3 ಸಿಕ್ಸರ್‌, 1 ಬೌಂಡರಿ ಮತ್ತು ಅದೃಷ್ಟದಂತೆ ಸಿಕ್ಕ ಎರಡು ನೋ-ಬಾಲ್‌ಗಳನ್ನು ಬೆಥಲ್​ ಉತ್ತಮವಾಗಿ ಬಳಸಿಕೊಂಡರು. ಕೇವಲ 46 ಎಸೆತಗಳಲ್ಲಿ 76 ರನ್‌ಗಳನ್ನು ಸಿಡಿಸುವ ಮೂಲಕ ಬೆಥಲ್ ಅಜೇಯರಾಗಿ​ ಇಂಗ್ಲೆಂಡ್​ಗೆ ರೋಚಕ ಜಯ ತಂದುಕೊಟ್ಟರು. ಇನ್ನು, ಕೊನೆಯಲ್ಲಿ, ಸ್ಯಾಮ್ ಕರನ್ (7) ವೈಭವ್​ ಸೂರ್ಯವಂಶಿಗೆ ಕ್ಯಾಚ್​ ಕೊಟ್ಟು ಔಟ್​ ಆದರು. ಈ ಪಂದ್ಯದಲ್ಲಿ ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಆಂಗ್ಲರು 4 ವಿಕೆಟ್‌ಗಳಿಂದ ಎರಡನೇ ಟಿ20 ಪಂದ್ಯವನ್ನು ಗೆದ್ದು, ಭಾರತಕ್ಕೆ ಸೋಲುಣಿಸಿತು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net