ಇಂಗ್ಲೆಂಡ್​ ವಿರುದ್ಧದ ಸೆಮೀಸ್​ ಪಂದ್ಯಕ್ಕೂ ಮುನ್ನವೇ ತಂಡದಿಂದ ಹೊರನಡೆದ ಗೌತಿ! ಹೀಗಿದೆ ಅಸಲಿ ಕಾರಣ

ಟೀಮ್ ಇಂಡಿಯಾ ಹೆಡ್​ಕೋಚ್ ಗೌತಮ್ ಗಂಭೀರ್
ಟೀಮ್ ಇಂಡಿಯಾ ಹೆಡ್​ಕೋಚ್ ಗೌತಮ್ ಗಂಭೀರ್
Published on

ಪ್ರಮುಖ ಮುಖ್ಯಾಂಶಗಳು

  • ಇಂದು ಭಾರತ ಮತ್ತು ಇಂಗ್ಲೆಂಡ್​ ನಡುವಿನ ಟಿ20 ವಿಶ್ವಕಪ್​ ಸೆಮಿಫೈನಲ್ ಪಂದ್ಯ
  • ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಬಹುನಿರೀಕ್ಷಿತ ಪಂದ್ಯ
  • ಪಂದ್ಯ ಶುರುವಿಗೂ ಮೊದಲೇ ಟೀಮ್ ಇಂಡಿಯಾ ಬಿಟ್ಟು ಹೊರನಡೆದ ಹೆಡ್​ಕೋಚ್ ಗೌತಮ್ ಗಂಭೀರ್
ಮುಂಬೈ: ಇಂದು (ಮಾ.05) ಟೀಮ್ ಇಂಡಿಯಾ ಮತ್ತು ಇಂಗ್ಲೆಂಡ್​ ನಡುವೆ ಟಿ20 ವಿಶ್ವಕಪ್​ ಟೂರ್ನಿಯ ಬಹುನಿರೀಕ್ಷಿತ ಸೆಮಿಫೈನಲ್ ಪಂದ್ಯವು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಕ್ರಿಕೆಟ್​ ಪ್ರಿಯರು ತೀವ್ರ ಕುತೂಹಲದಿಂದ ಕಾಯುತ್ತಿದ್ದು, ಫೈನಲ್​ನಲ್ಲಿ ಯಾರು ನ್ಯೂಜಿಲೆಂಡ್​ ಎದುರು ಚಾಂಪಿಯನ್ಸ್ ಪಟ್ಟಕ್ಕಾಗಿ ಸೆಣಸಲಿದ್ದಾರೆ ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಇಂದು ಸಂಜೆ 7 ಗಂಟೆಗೆ ಪಂದ್ಯ ಆರಂಭವಾಗಲಿದೆ ಎಂದು ಗೊತ್ತಿದ್ದರೂ, ಈ ಮಧ್ಯೆಯೇ ಟೀಮ್ ಇಂಡಿಯಾ ಹೆಡ್​ ಕೋಚ್​ ಗೌತಮ್ ಗಂಭೀರ್​ ತಂಡವನ್ನು ಬಿಟ್ಟು ಹೊರನಡೆದಿದ್ದಾರೆ. ಈ ವಿಷಯ ಹೊರಬೀಳುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರಿದಾಡ ತೊಡಗಿವೆ. ಆದರೆ, ಇಲ್ಲಿ ಯಾವುದೇ ಭಿನ್ನ ಅಥವಾ ಮನಸ್ತಾಪಗಳು ನಡೆದಿಲ್ಲ. ಬದಲಿಗೆ ಅಸಲಿ ಕಾರಣ ಬೇರೆಯೇ ಇದೆ.
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಅದ್ಧೂರಿ ವಿವಾಹ ಮುಂಬೈನಲ್ಲಿ ನಡೆಯಿತು. ಸಾನಿಯಾ ಚಂದೋಕ್​ರ ಕೈಹಿಡಿದ ಸಚಿನ್​ ಪುತ್ರನ ಮದುವೆಗೆ ಬಾಲಿವುಡ್​ ನಟರು, ರಾಜಕೀಯ ಮತ್ತು ಕ್ರೀಡಾ ಜಗತ್ತಿನ ಗಣ್ಯರು ಸಮಾರಂಭಕ್ಕೆ ಆಗಮಿಸಿದ್ದರು. ವಾಂಖೆಡೆಯಲ್ಲೇ ಪಂದ್ಯವಿರುವ ಕಾರಣ, ಪಂದ್ಯ ಶುರುವಾಗುವ ಮೊದಲೇ ನವದಂಪತಿಗಳಿಗೆ ಶುಭ ಹಾರೈಸಿ ಬರೋಣ ಎಂದು ಗೌತಿ ಮದುವೆಗೆ ತೆರಳಿದ್ದಾರೆ. ಈ ಫೋಟೋ, ವಿಡಿಯೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿವೆ.
ಟಿ20 ವಿಶ್ವಕಪ್‌ನ ಸೆಮಿಫೈನಲ್ ಪಂದ್ಯಗಳಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗುತ್ತಿರುವುದು ಇದು ಸತತ ಮೂರನೇ ಬಾರಿ ಎಂಬುದು ಇಲ್ಲಿ ಗಮನಾರ್ಹ. ಒಟ್ಟಾರೆಯಾಗಿ, ಈ ವಿಶ್ವಕಪ್ ಇತಿಹಾಸದಲ್ಲಿ ಭಾರತ ಮತ್ತು ಇಂಗ್ಲೆಂಡ್ ಐದು ಬಾರಿ ಬಿರುಸಿನ ಪೈಪೋಟಿಯಲ್ಲಿ ಎದುರಾಗಿವೆ. ಈ ಪೈಕಿ, ಟೀಮ್ ಇಂಡಿಯಾ ಮೂರು ಪಂದ್ಯಗಳನ್ನು ಗೆದ್ದರೆ, ಇಂಗ್ಲೆಂಡ್ ಎರಡು ಪಂದ್ಯಗಳನ್ನು ಗೆದ್ದಿದೆ. ಇಂದಿನ ಸೆಮೀಸ್ ಪಂದ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡೋಣ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net