ಇಂದು ಸಂಜೆ 7 ಗಂಟೆಗೆ ಸರಿಯಾಗಿ ಪಂದ್ಯ ಆರಂಭ ಆಗಬೇಕಿತ್ತು. ಆದ್ರೆ, ಟೀಮ್ ಇಂಡಿಯಾ ಆಟಗಾರರನ್ನು ಕರೆದುಕೊಂಡು ಬರುತ್ತಿದ್ದ ಬಸ್ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ಕಾರಣವೇ ಪಂದ್ಯ ಅರ್ಧ ಗಂಟೆ ವಿಳಂಬಗೊಂಡಿದೆ. ಹೊಸ ಅಪ್ಡೇಟ್ ಪ್ರಕಾರ, ಭಾರತ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಹ್ಯಾರಿ ಬ್ರೂಕ್ ಪಡೆಗೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿದೆ.
ಬ್ರಿಸ್ಟಲ್ನಲ್ಲಿ ನಡೆದ ನಾಲ್ಕನೇ ಟಿ20 ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದು ಐದು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ 3-0 ಅಂತರದಿಂದ ಗೆದ್ದಿರುವ ಇಂಗ್ಲೆಂಡ್, ಇಂದು ಸೌತಾಂಪ್ಟನ್ನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತಕ್ಕೆ ಬಹುದಿನಗಳ ಬಳಿಕ ಕ್ಲೀನ್ ಸ್ವೀಪ್ ರುಚಿ ತೋರಿಸಲು ಸಜ್ಜಾಗಿದೆ. ಈ ಮೂಲಕ ಭಾರತವನ್ನು ಕೆಳಕ್ಕೆ ತಳ್ಳಿ ಅಂತಾರಾಷ್ಟ್ರೀಯ ಟಿ20 ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನವನ್ನು ವಶಪಡಿಸಿಕೊಳ್ಳುವುದು ಇಂಗ್ಲೆಂಡ್ನ ಗುರಿಯಾಗಿದೆ.