ಫೆರಾರಿ, ಬೆನ್ಜ್​... ಶೋಕಿಗೂ ಸೈ, ಪವರ್​ಹಿಟ್ಟಿಂಗ್​ಗೂ ಜೈ! 35 ದಿನಕ್ಕೆ ಪಾಂಡ್ಯ ಮಾಡಿದ ಖರ್ಚು ಕೇಳಿದ್ರೆ ದಂಗಾಗ್ತೀರಾ

ಟೀಮ್ ಇಂಡಿಯಾ ಕ್ರಿಕೆಟರ್​ ಹಾರ್ದಿಕ್ ಪಾಂಡ್ಯ
ಟೀಮ್ ಇಂಡಿಯಾ ಕ್ರಿಕೆಟರ್​ ಹಾರ್ದಿಕ್ ಪಾಂಡ್ಯ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ಐಪಿಎಲ್​ 19ನೇ ಆವೃತ್ತಿಯಲ್ಲಿ ಹಾರ್ದಿಕ್ ಪಾಂಡ್ಯ ಬಿಜಿ
  • ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಮುನ್ನಡೆಸುತ್ತಿರುವ ಪಾಂಡ್ಯ
  • ಕಳೆದ 35 ದಿನಗಳಲ್ಲಿ ಹಾರ್ದಿಕ್ ಮಾಡಿದ ಖರ್ಚು ಕೇಳಿದ್ರೆ ಹುಬ್ಬೇರೋದು ಖಚಿತ
ಮುಂಬೈ: ಪ್ರಸ್ತುತ, ಐಪಿಎಲ್​ 19ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ, ಮೈದಾನದಲ್ಲಿ ಮಾತ್ರವಲ್ಲ, ಅದರಾಚೆಗೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುತ್ತಾರೆ. ತಮ್ಮ ಮಾಜಿ ಪತ್ನಿ, ಗೆಳತಿ ಮಹಿಕಾ ಮತ್ತು ಐಷಾರಾಮಿ ಕಾರುಗಳ ಖರೀದಿ ವಿಚಾರ ಸೇರಿದಂತೆ ಒಂದಲ್ಲ, ಒಂದು ವಿಷಯದಿಂದ ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಚರ್ಚೆಗೆ ಗ್ರಾಸವಾಗುತ್ತಾರೆ. ಸದ್ಯ ಈಗ ಮತ್ತೊಂದು ವಿಚಾರದಿಂದ ನೆಟ್ಟಿಗರ ಗಮನ ಸೆಳೆದಿರುವ ಹಾರ್ದಿಕ್​, 35 ದಿನಗಳಲ್ಲಿ ಮಾಡಿರುವ ಖರ್ಚು ತಿಳಿದು ದಂಗಾಗಿದ್ದಾರೆ.  
ಇತ್ತೀಚೆಗಷ್ಟೇ ಫೆರಾರಿ 12 ಸಿಲಿಂಡ್ರಿ ಕಾರನ್ನು ಖರೀದಿ ಮಾಡಿದ ಹಾರ್ದಿಕ್​, ತಮ್ಮ ಗ್ಯಾರೇಜ್‌ಗೆ ಮತ್ತೊಂದು ದುಬಾರಿ ವಾಹನವನ್ನು ಸೇರಿಸಿದ್ದಾರೆ. ಈಗಾಗಲೇ ಹಾರ್ದಿಕ್ ಅವರ ಗ್ಯಾರೆಜ್​ನಲ್ಲಿ ರೋಲ್ಸ್ ರಾಯ್ಸ್ ಫ್ಯಾಂಟಮ್, ಲಂಬೋರ್ಘಿನಿ ಹುರಾಕನ್ EVO, ಲಂಬೋರ್ಘಿನಿ ಉರಸ್, ಮರ್ಸಿಡಿಸ್-AMG G63, ರೇಂಜ್ ರೋವರ್ ಮತ್ತು ಆಡಿ A6 ಕಾರುಗಳಿವೆ. ಇದರ ಬೆನ್ನಲ್ಲೇ ತನ್ನ ಗೆಳತಿ ಮಹಿಕಾ ಶರ್ಮಗೆ 1.7 ಕೋಟಿ ರೂ. ಮೌಲ್ಯದ ಮರ್ಸಿಡೀಸ್​ ಬೆಂಜ್​ ವಿ-ಕ್ಲಾಸ್​ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. 

ಅಬ್ಬಬ್ಬಾ! 

ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪತ್ನಿ ಮತ್ತು ಪುತ್ರನಿಗೆ 4 ಕೋಟಿ ರೂ. ಮೌಲ್ಯದ ಲ್ಯಾಂಡ್​ ರೋವರ್​ ಕಾರು ಉಡುಗೊರೆ ನೀಡಿದ್ದರು. ಈ ಮಧ್ಯೆ, ಐಪಿಎಲ್​ ಶುರುವಾದ ಕಾರಣ, ತಮ್ಮ ಹೋಮ್​ ಗ್ರೌಂಡ್​ ಆದ ವಾಂಖೆಡೆ ಸ್ಟೇಡಿಯಂನ ಸಿಬ್ಬಂದಿಗಳಿಗೆ ತಲಾ 10 ಲಕ್ಷ ರೂ. ಹಣವನ್ನು ಸಹಾಯ ಧನವಾಗಿ ನೀಡಿದರು. ಇದೆಲ್ಲವೂ 35 ದಿನಗಳಲ್ಲಿ ಆಗಿರುವುದು ಎಂಬುದು ಇಲ್ಲಿ ಗಮನಾರ್ಹ. ಅಲ್ಲಿಗೆ ಶೋಕಿ ಮಾಡೋದಕ್ಕೂ ಸೈ, ಮೈದಾನದಲ್ಲಿ ಪವರ್​ಹಿಟ್ಟಿಂಗ್​ಗೂ ಜೈ ಅನ್ನೋದು ಹಾರ್ದಿಕ್​ ಮಂತ್ರ ಎಂದರೆ ಖಂಡಿತ ತಪ್ಪಾಗಲಾರದು. 
ಫೆಬ್ರವರಿ 22: ಮಗ ಮತ್ತು ಮಾಜಿ ಪತ್ನಿಗೆ 4 ಕೋಟಿ ರೂ. ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರು ಉಡುಗೊರೆ
ಮಾರ್ಚ್ 15: 12 ಕೋಟಿ ರೂ. ಮೌಲ್ಯದ ಫೆರಾರಿ ಖರೀದಿ
ಮಾರ್ಚ್ 25: ವಾಂಖೆಡೆ ಮೈದಾನದ ಸಿಬ್ಬಂದಿಗೆ ತಲಾ 10 ಲಕ್ಷ ರೂ. ಸಹಾಯ ಧನ
ಮಾರ್ಚ್ 29: ಗೆಳತಿಗೆ ಮಹಿಕಾಗೆ 1.7 ಕೋಟಿ ರೂ. ಮೌಲ್ಯದ ಮರ್ಸಿಡಿಸ್-ಬೆನ್ಜ್ ವಿ ಕ್ಲಾಸ್ ಕಾರು ಗಿಫ್ಟ್​. ಇದನ್ನೆಲ್ಲ ಬಹಳ ಸೂಕ್ಮ್ಮವಾಗಿ ಗಮನಿಸಿರುವ ಕ್ರಿಕೆಟ್​ ಪ್ರಿಯರು ಹಾಗೂ ಹಾರ್ದಿಕ್ ಅಭಿಮಾನಿಗಳು, ಸ್ಟಾರ್​ ಕ್ರಿಕೆಟಿಗ ಬಳಿ ಎಷ್ಟು ಆಸ್ತಿ ಇರಬಹುದು? ನಿಜಕ್ಕೂ ಈತ ಲಕ್ಕಿ ಕಣಪ್ಪ ಎಂದೆಲ್ಲ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net