

ಕೊಲಂಬೊ:ವಿಶ್ವ ಕ್ರಿಕೆಟ್ನ ಅತ್ಯಂತ ರೋಚಕಕದನವಾದ ಭಾರತ ಮತ್ತು ಪಾಕಿಸ್ತಾನ( India-Pakistan)ನಡುವಿನ ಪಂದ್ಯಕ್ಕೆ ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂಸಜ್ಜಾಗಿದೆ. ಆದರೆ ಈ ಬಾರಿಕೇವಲ ಮೈದಾನದ ಒಳಗಿನ ಆಟವಷ್ಟೇ ಅಲ್ಲ, ಮೈದಾನದ ಹೊರಗೆ ನಡೆಯಲಿರುವ 'ರಾಜತಾಂತ್ರಿಕ ಸಂಧಾನ' ವಿಶ್ವದ ಗಮನ ಸೆಳೆದಿದೆ.
ಹೌದು, ಪಾಕಿಸ್ತಾನಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ಐಸಿಸಿ ಅಧ್ಯಕ್ಷಜಯ್ ಶಾ ಅವರನ್ನು ಭೇಟಿಯಾಗಿ,ಇತ್ತೀಚಿನ ಬಿಕ್ಕಟ್ಟುಗಳನ್ನು ಶಮನಗೊಳಿಸಲು ಲಂಕೆಗೆ ಆಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆನಡೆದ 'ಬಾಯ್ಕಾಟ್' (ಬಹಿಷ್ಕಾರ) ವಿವಾದದಿಂದಾಗಿ ಐಸಿಸಿ ಮತ್ತು ಪಿಸಿಬಿ ನಡುವಿನ ಸಂಬಂಧ ತೀವ್ರ ಹದಗೆಟ್ಟಿತ್ತು. ಬಾಂಗ್ಲಾದೇಶದ ಭದ್ರತಾ ಕಾಳಜಿಯನ್ನು ಬೆಂಬಲಿಸಿ ಪಾಕಿಸ್ತಾನ ಸರ್ಕಾರವು ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವಂತೆ ತಂಡಕ್ಕೆ ಸೂಚಿಸಿತ್ತು. ಇದು ಕ್ರಿಕೆಟ್ ಜಗತ್ತಿನಲ್ಲಿದೊಡ್ಡ ಸಂಚಲನ ಸೃಷ್ಟಿಸಿತ್ತು. ನಂತರ ಐಸಿಸಿ ಮತ್ತುಇತರ ಏಷ್ಯಾದ ಮಂಡಳಿಗಳ ಮಧ್ಯಸ್ಥಿಕೆಯಿಂದ ಪಾಕಿಸ್ತಾನ ತನ್ನ ನಿರ್ಧಾರ ಬದಲಿಸಿತು.ಈಗ ಅದೇ 'ಹಿಮ'ವನ್ನುಕರಗಿಸಲು (Break theice) ನಖ್ವಿ ಅವರು ಜಯ್ ಶಾಅವರನ್ನು ಭೇಟಿಯಾಗುತ್ತಿದ್ದಾರೆ.
ನಖ್ವಿಅವರ ಮಹತ್ವದ ಭೇಟಿ: ಮೊಹ್ಸಿನ್ ನಖ್ವಿ ಅವರೊಂದಿಗೆ ಪಿಸಿಬಿ ಅಧಿಕಾರಿಗಳಾದ ಸಲ್ಮಾನ್ ನಸೀರ್ ಮತ್ತು ಸುಮೈರ್ ಅಹ್ಮದ್ ಕೂಡ ಕೊಲಂಬೊಗೆ ಬರಲಿದ್ದಾರೆ.ಕೇವಲ ಪಂದ್ಯ ನೋಡುವುದು ಇವರ ಗುರಿಯಲ್ಲ, ಬದಲಾಗಿಜಯ್ ಶಾ ಅವರೊಂದಿಗೆ ದ್ವಿಪಕ್ಷೀಯಮಾತುಕತೆ ನಡೆಸುವುದು ಇವರ ಪ್ರಮುಖ ಉದ್ದೇಶ.
ಏಷ್ಯಾದಐದು ರಾಷ್ಟ್ರಗಳ ಒಕ್ಕೂಟ: ಐಸಿಸಿಯ ಪ್ರಮುಖ ಪಾಲುದಾರರಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಯುಎಇ ರಾಷ್ಟ್ರಗಳ ಪ್ರತಿನಿಧಿಗಳನ್ನುಒಂದೇ ಕಡೆ ಸೇರಿಸಲು ಐಸಿಸಿಪ್ಲಾನ್ ಮಾಡಿದೆ. ಈ ಪಂದ್ಯದ ಮೂಲಕಏಷ್ಯನ್ ಕ್ರಿಕೆಟ್ನ ಐಕ್ಯತೆಯನ್ನು ಪ್ರದರ್ಶಿಸುವುದುಐಸಿಸಿಯ ಹಿರಿಯ ಅಧಿಕಾರಿಗಳ ಆಶಯವಾಗಿದೆ.
ಭಾರತೀಯಪದಾಧಿಕಾರಿಗಳ ಉಪಸ್ಥಿತಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (BCCI) ಪರವಾಗಿ ಅಧ್ಯಕ್ಷ ಮಿಥುನ್ ಮನ್ಹಾಸ್, ಕಾರ್ಯದರ್ಶಿ ದೇವಜಿತ್ ಸೈಕಿಯಾ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಮೈದಾನದಲ್ಲಿ ಇರಲಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಾಜತಾಂತ್ರಿಕಬಿಕ್ಕಟ್ಟು ಮತ್ತು ಹಿನ್ನೆಲೆ
ಬಾಂಗ್ಲಾದೇಶವುಭದ್ರತಾ ಕಾರಣ ನೀಡಿ ಭಾರತಕ್ಕೆಪ್ರಯಾಣಿಸಲು ನಿರಾಕರಿಸಿದಾಗ, ಅವರ ಸ್ಥಾನಕ್ಕೆ ಸ್ಕಾಟ್ಲೆಂಡ್ತಂಡವನ್ನು ಸೇರಿಸಲಾಗಿತ್ತು. ಈ ವೇಳೆ ಪಾಕಿಸ್ತಾನವುಬಾಂಗ್ಲಾದೇಶದ ಪರ ನಿಂತು ಬಹಿಷ್ಕಾರದಮಾತುಗಳನ್ನಾಡಿತ್ತು. ಇದು ಐಸಿಸಿಯನ್ನು ಕೆರಳಿಸಿತ್ತು.ಈಗ ಜಯ್ ಶಾ ಅವರುಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆಇಂತಹ ಗಂಭೀರ ಸಭೆ ನಡೆಯುತ್ತಿದ್ದು, ಭವಿಷ್ಯದಏಷ್ಯಾ ಕಪ್ ಮತ್ತು ಚಾಂಪಿಯನ್ಸ್ಟ್ರೋಫಿ ಬಗ್ಗೆಯೂ ಇಲ್ಲಿ ಚರ್ಚೆಯಾಗುವ ಸಾಧ್ಯತೆಯಿದೆ.
ಏಷ್ಯನ್ಕ್ರಿಕೆಟ್ ಕೌನ್ಸಿಲ್ನ ಶಕ್ತಿ ಪ್ರದರ್ಶನ
ಬಾಂಗ್ಲಾದೇಶಕ್ರಿಕೆಟ್ ಮಂಡಳಿ ಮುಖ್ಯಸ್ಥ ಅಮೀನುಲ್ ಇಸ್ಲಾಂ ಬುಲ್ಬುಲ್ ಪ್ರಕಾರ, "ಏಷ್ಯಾದ ಐದು ಪ್ರಮುಖ ಕ್ರಿಕೆಟ್ರಾಷ್ಟ್ರಗಳು ಒಟ್ಟಾಗಿ ಕುಳಿತು ಪಂದ್ಯ ನೋಡುವುದರಿಂದ ಜಾಗತಿಕ ಕ್ರಿಕೆಟ್ನಲ್ಲಿ ಏಷ್ಯಾದ ಹಿಡಿತ ಗಟ್ಟಿಯಾಗುತ್ತದೆ. ಪರಸ್ಪರ ಮಾತನಾಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲುಇದು ಉತ್ತಮ ವೇದಿಕೆ."
ರವಿವಾರದಈ ಪಂದ್ಯ ಕೇವಲ 22 ಗಜಗಳ ಪಿಚ್ ಮೇಲಿನಹೋರಾಟವಲ್ಲ. ಇದು ಭಾರತ ಮತ್ತುಪಾಕಿಸ್ತಾನದ ನಡುವಿನ ಕ್ರೀಡಾ ರಾಜತಾಂತ್ರಿಕತೆಯ ಅಗ್ನಿಪರೀಕ್ಷೆ. ಮೊಹ್ಸಿನ್ ನಖ್ವಿ ಮತ್ತು ಜಯ್ ಶಾ ಅವರಭೇಟಿ ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ ನೀಡುತ್ತದೆಯೇಎಂದು ಕಾದು ನೋಡಬೇಕಿದೆ,(ಏಜೆನ್ಸೀಸ್).