ಅಭಿಷೇಕ್ ಶರ್ಮಾ ಮಾಡಿದಂತೆ ವೈಭವ್ ಬಹುಶಃ ಇನ್ನೂ ಸ್ವಲ್ಪ ಉತ್ತಮವಾಗಿ ಆಡಬೇಕಾಗುತ್ತದೆ. ವಿಶೇಷವಾಗಿ ಮೊದಲ ಆರು ಓವರ್‌ಗಳ ಪವರ್‌ಪ್ಲೇನಲ್ಲಿ ಅವರು ತಮ್ಮ ಆಟವನ್ನು ಸುಧಾರಿಸಿಕೊಳ್ಳುವ ಅಗತ್ಯವಿದೆ. ಆರಂಭಿಕ ಓವರ್‌ಗಳಲ್ಲಿ ವೈಭವ್ ಸಿಕ್ಸರ್‌ಗಳನ್ನು ಸಿಡಿಸಿದರೆ, ನಂತರ ಬರುವ ಬ್ಯಾಟರ್‌ಗಳಿಗೆ ರನ್ ಗಳಿಸುವುದು ಸುಲಭವಾಗುತ್ತದೆ. ಆದರೆ ಡಂಬುಲ್ಲಾದಲ್ಲಿ ನಡೆದ ತ್ರಿಕೋನ ಸರಣಿಯಲ್ಲಿ ನಾವು ನೋಡಿದಂತೆ, ಅವರಿಗೆ ಆರಂಭದಲ್ಲೇ ಸುಲಭವಾಗಿ ಸಿಕ್ಸರ್ ಬಾರಿಸಲು ಸಾಧ್ಯವಾಗುತ್ತಿಲ್ಲ ಎಂದು ಮಂಜ್ರೇಕರ್ ವಿಶ್ಲೇಷಿಸಿದ್ದಾರೆ, (ಏಜೆನ್ಸೀಸ್).