ಭಾರತ ತಂಡದಲ್ಲಿ ಇವರು ಇದ್ದಾಗಲೆಲ್ಲ ವಿಶ್ವಕಪ್​ ಗೆದ್ದಿದೆ... ಈ ಮಾತಿಗೆ ಹರ್ಭಜನ್ ಕೂಡ ಒಪ್ಪಿಗೆ! World Cup ​

ಭಾರತ ತಂಡದಲ್ಲಿ ಇವರು ಇದ್ದಾಗಲೆಲ್ಲ ವಿಶ್ವಕಪ್​ ಗೆದ್ದಿದೆ... ಈ ಮಾತನ್ನು ಹರ್ಭಜನ್ ಕೂಡ ಒಪ್ಪಿಕೊಂಡರು! World Cup ​
ಭಾರತ ತಂಡದಲ್ಲಿ ಇವರು ಇದ್ದಾಗಲೆಲ್ಲ ವಿಶ್ವಕಪ್​ ಗೆದ್ದಿದೆ... ಈ ಮಾತನ್ನು ಹರ್ಭಜನ್ ಕೂಡ ಒಪ್ಪಿಕೊಂಡರು! World Cup ​
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್​ ಇಂಡಿಯಾ ವಿವಿಧ ಸ್ವರೂಪಗಳಲ್ಲಿ ಐದು ವಿಶ್ವಕಪ್ ( World Cup )​ ಗೆದ್ದಿದೆ
  • 1983 ಹಾಗೂ 2011 ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಭಾರತ ತಂಡ ಗೆಲುವು ಸಾಧಿಸಿತು
  • 2007, 2024 ಮತ್ತು 2026 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ಟ್ರೋಫಿ ಎತ್ತಿಹಿಡಿದಿದೆ
  • ಈ ಐದೂ ಪ್ರಶಸ್ತಿಗಳಲ್ಲಿಯೂ ಮಲಯಾಳಿ ಆಟಗಾರ ತಂಡದ ಭಾಗವಾಗಿದ್ದರು
ಅಹಮದಾಬಾದ್: ಟೀಮ್​ ಇಂಡಿಯಾ ವಿವಿಧ ಸ್ವರೂಪಗಳಲ್ಲಿ ಐದು ವಿಶ್ವಕಪ್ ( World Cup )​ ಗೆದ್ದಿದೆ. 1983 ಹಾಗೂ 2011 ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಗೆಲುವು ಮತ್ತು 2007, 2024 ಮತ್ತು 2026 ರಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲಿ ಭಾರತ ಟ್ರೋಫಿ ಎತ್ತಿಹಿಡಿದಿದೆ. ಇಲ್ಲಿನ ವಿಶೇಷವೆಂದರೆ ಈ ಐದೂ ಪ್ರಶಸ್ತಿಗಳಲ್ಲಿಯೂ ಕೇರಳದ ಅಂದರೆ ಮಲಯಾಳಿ ಆಟಗಾರ ತಂಡದ ಭಾಗವಾಗಿದ್ದರು. ಮಲಯಾಳಿ ಇಲ್ಲದ ಭಾರತ ತಂಡ, ಒಂದೇ ಒಂದು ವಿಶ್ವಕಪ್ ಅನ್ನು ಗೆದ್ದಿಲ್ಲ. 
1983ರಲ್ಲಿ ಭಾರತ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ, ಸುನಿಲ್ ವಾಲ್ಸನ್ ಎಂಬ ಮಲಯಾಳಿ, ತಂಡದ ಭಾಗವಾಗಿದ್ದರು. ವಾಲ್ಸನ್​ ಅವರು ರಣಜಿ ಟ್ರೋಫಿಯಲ್ಲಿ ತಮಿಳುನಾಡು, ರೈಲ್ವೇಸ್ ಮತ್ತು ದೆಹಲಿ ಪರ ಆಡಿದ್ದರು. ಅಚ್ಚರಿ ಸಂಗತಿ ಏನೆಂದರೆ, ವಿಶ್ವಕಪ್‌ ತಂಡದಲ್ಲಿ ಸ್ಥಾನ ಪಡೆದರು ಕೂಡ ವಾಲ್ಸನ್​ ಅವರು ಒಂದೇ ಒಂದು ಪಂದ್ಯವನ್ನು ಆಡಲಿಲ್ಲ. 
ಇನ್ನು ಎರ್ನಾಕುಲಂ ಮೂಲದ ಎಸ್. ಶ್ರೀಶಾಂತ್, 2007 (ಟಿ 20) ಮತ್ತು 2011 (ಏಕದಿನ) ರಲ್ಲಿ ವಿಶ್ವಕಪ್ ಗೆದ್ದ ಭಾರತೀಯ ತಂಡದಲ್ಲಿ ಭಾಗಿಯಾಗಿದ್ದರು. 2007 ರಲ್ಲಿ, ಕೊನೆಯ ವಿಕೆಟ್ ಅನ್ನು ಶ್ರೀಶಾಂತ್ ಪಡೆದಿದ್ದರು. ಅಂದರೆ, ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನಿ ಆಟಗಾರ ಮಿಸ್ಬಾ-ಉಲ್-ಹಕ್ ಅವರ ಕ್ಯಾಚ್ ಅನ್ನು ಶ್ರೀಶಾಂತ್​ ಹಿಡಿದರು. ಇದೇ ಕ್ಯಾಚ್ ಟೀಮ್​ ಇಂಡಿಯಾಗೆ ಗೆಲುವು ತಂದುಕೊಟ್ಟಿತು. ಅಂದಹಾಗೆ, ಶ್ರೀಶಾಂತ್ 2011 ರಲ್ಲಿ ಏಕದಿನ ತಂಡದ ಭಾಗವಾಗಿದ್ದರು.
ಇದೀಗ ತಿರುವನಂತಪುರದ ಸಂಜು ವಿಶ್ವನಾಥ್ ಸ್ಯಾಮ್ಸನ್, 2024 ಮತ್ತು 2026 ರ ಟಿ20 ವಿಶ್ವಕಪ್‌ಗಳಲ್ಲಿ ತಂಡದಲ್ಲಿ ಮಲಯಾಳಿ ಆಟಗಾರನಾಗಿ ಪ್ರತಿನಿಧಿಸಿದರು. ಅತ್ಯಂತ ಹೆಮ್ಮೆಯ ವಿಷಯವೆಂದರೆ ಈ ಬಾರಿ ಮಲಯಾಳಿ ಆಟಗಾರನೊಬ್ಬ ಟೂರ್ನಮೆಂಟ್‌ನ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದಾರೆ. ಈ ಬಾರಿ ವಿಶ್ವಕಪ್​ ಗೆಲ್ಲುವಲ್ಲಿ ಸಂಜು ನಿರ್ಣಾಯಕ ಪಾತ್ರವಹಿಸಿದರು. ಮಾಡು ಇಲ್ಲವೇ ಮಡಿ ಪಂದ್ಯಗಳಲ್ಲಿ ಸಂಜು ಬ್ಯಾಟಿಂಗ್​ ಭಾರತಕ್ಕೆ ಆಸರೆಯಾಯಿತು.
ಇತ್ತೀಚೆಗೆ ಶ್ರೀಶಾಂತ್ ಮತ್ತು ಹರ್ಭಜನ್ ಸಿಂಗ್ ನಡುವಿನ ಪಾಡ್‌ಕ್ಯಾಸ್ಟ್‌ನಲ್ಲಿ ಈ ಕುತೂಹಲಕಾರಿ ಸಂಗತಿಯನ್ನು ಉಲ್ಲೇಖಿಸಲಾಯಿತು. ಇಬ್ಬರೂ ಚರ್ಚಿಸಿದ ಅಂಶವೆಂದರೆ ಪಂಜಾಬಿ ಮತ್ತು ಮಲಯಾಳಿ ಆಟಗಾರರು ತಂಡದಲ್ಲಿದ್ದಾಗಲೆಲ್ಲಾ ಟೀಮ್​ ಇಂಡಿಯಾ ಕಪ್ ಗೆದ್ದಿದೆ ಎಂದು ಇಬ್ಬರು ಹೇಳಿದರು. ಅಂಕಿಅಂಶಗಳನ್ನು ನೋಡಿದರೆ, ಈ ಮಾತು ನಿಜ ಅನಿಸುತ್ತಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net