ಪ್ರಸ್ತುತ, ಐಪಿಎಲ್ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿರುವ ಸಿಎಸ್ಕೆ, ಇಂದಿನ ಪಂದ್ಯಕ್ಕಾಗಿ ತಂಡದಲ್ಲಿ ಎರಡು ಮಹತ್ವದ ಬದಲಾವಣೆಗಳನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಮತ್ತೊಂದೆಡೆ, ಐಪಿಎಲ್ ಆರಂಭದಿಂದಲೂ ಫಿಟ್ನೆಸ್ ಸಮಸ್ಯೆಗಳಿಂದ ತಂಡದ ಪರ ಆಡದ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ, ತಮ್ಮ ದರ್ಶನ ಪಡೆಯಲು ತೀವ್ರ ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ ಪದೇ ಪದೇ ನಿರಾಶೆ ಉಂಟಾಗುತ್ತಿದೆ. ಇದರಿಂದ ಸಿಎಸ್ಕೆ ಪಂದ್ಯ ಗೆದ್ದರೂ ಅಭಿಮಾನಿಗಳಲ್ಲಿ ಅಂತಹ ಖುಷಿ ಕಾಣುತ್ತಿಲ್ಲ. ತಮ್ಮ ನೆಚ್ಚಿನ ಕ್ಯಾಪ್ಟನ್ ಕೂಲ್ರನ್ನು ನೋಡದೆ, ಫ್ಯಾನ್ಸ್ಗಳು ಅತೀವ ಬೇಸರಕ್ಕೀಡಾಗಿದ್ದಾರೆ. ಇಂದಿನ ಪಂದ್ಯದಲ್ಲಿಯೂ ತಂಡದಲ್ಲಿ ಅವರ ಅನುಪಸ್ಥಿತಿ ಕಾಡಲಿದೆ ಎಂದು ಕೆಲವು ವರದಿಗಳು ಸೂಚಿಸಿವೆ.