"ಗರ್ಭಧಾರಣೆಯ ನಂತರ ಆಟಕ್ಕೆ ಮರಳಲು ಮಾರ್ಗಸೂಚಿ' (Return to Play Post-Pregnancy) ಹೆಸರಿನಲ್ಲಿ ಐಸಿಸಿ ಮಹಿಳಾ ಕ್ರಿಕೆಟಿಗರಿಗೆ ಸಿದ್ಧ, ವಿಮರ್ಶೆ, ಮರುಸ್ಥಾಪನೆ, ಮರುಪರಿಶೀಲನೆ, ವಾಪಸ್ ಮತ್ತು ಪರಿಷರಣೆ (ರೆಡಿ, ರಿವೀವ್, ರಿಸ್ಟೋರ್, ರಿಕಂಡೀಷನ್, ರಿರ್ಟನ್, ರಿಫೈನ್) ಸಹಿತ "ಆರು ಆರ್' ಒಳಗೊಂಡ ರೂಪುರೇಷೆ ರೂಪಿಸಿದೆ. ಇದು ಮಹಿಳಾ ಕ್ರಿಕೆಟಿಗರು ಮಗುವಿಗೆ ಜನ್ಮ ನೀಡಿದ ಬಳಿಕ ಆರಂಭಿಕ ಚೇತರಿಕೆ, ವೈದ್ಯಕಿಯ ಮತ್ತು ಯೋಗಕ್ಷೇಮ ವಿಮರ್ಶೆ, ರಚನಾತ್ಮಕ ತರಬೇತಿಗೆ ಕ್ರಮೇಣ ಮರಳುವಿಕೆ, ಕ್ರಿಕೆಟ್ ನಿರ್ದಿಷ್ಟ ಕಂಡೀಷನಿಂಗ್, ಆಟಕ್ಕೆ ಮರಳುವಿಕೆ ಮತ್ತು ಆಟಗಾರ್ತಿ ಕ್ರಿಕೆಟ್ ಪರಿಸರಕ್ಕೆ ಮರಳಿದಾಗ ನಿರಂತರ ಮೇಲ್ವಿಚಾರಣೆಯ ವಿಧಾನವನ್ನು ಒಳಗೊಂಡಿದೆ ಎಂದು ಐಸಿಸಿ ತಿಳಿಸಿದೆ.