ಭಾರತ ತಂಡವು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ ಈ ಸುಸಂದರ್ಭದಲ್ಲಿ ಈ ದಂಡದ ಸುದ್ದಿ ಅಭಿಮಾನಿಗಳಿಗೆ ಸ್ವಲ್ಪ ಬೇಸರ ತಂದಿದೆ. ಆದಾಗ್ಯೂ, ಮೈದಾನದಲ್ಲಿ ಆಟಗಾರರು ತಮ್ಮ ಸಂಯಮವನ್ನು ಕಳೆದುಕೊಳ್ಳಬಾರದು ಎಂಬುದು ಐಸಿಸಿಯ ಕಟ್ಟುನಿಟ್ಟಿನ ಸಂದೇಶವಾಗಿದೆ. ಅರ್ಶ್‌ದೀಪ್ ಈ ಟೂರ್ನಿಯುದ್ದಕ್ಕೂ ಭಾರತದ ಪರ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದು, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಈ ಒಂದು ಸಣ್ಣ ತಪ್ಪು ಅವರ ಪಂದ್ಯದ ಸಂಭಾವನೆಯಲ್ಲಿ ಕಡಿತಕ್ಕೆ ಕಾರಣವಾಗಿದೆ,(ಏಜೆನ್ಸೀಸ್).