ನವದೆಹಲಿ: ಏಕದಿನ ಕ್ರಿಕೆಟ್ (ODI Cricket) ಪಂದ್ಯವನ್ನು 50ರಿಂದ 40 ಓವರ್ಗಳಿಗೆ ಇಳಿಸುವ ಬಗ್ಗೆ ಐಸಿಸಿ (ICC) ಯಾವುದೇ ಆಸಕ್ತಿಯನ್ನು ತೋರಿಲ್ಲ. ಸ್ಕಾಟ್ಲೆಂಡ್ನ ಎಡಿನ್ರ್ಬಗ್ನಲ್ಲಿ ಇತ್ತೀಚೆಗೆ ನಡೆದ ಐಸಿಸಿ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸಮ್ಮತಿಸಲಾಗಿಲ್ಲ.
ಏಕದಿನ ಪಂದ್ಯದಲ್ಲಿ ಓವರ್ ಕಡಿತಗೊಳಿಸಲು ಐಸಿಸಿ ಆಸಕ್ತಿ ಹೊಂದಿದೆ ಎಂದು ಸಭೆಗೆ ಮುನ್ನ ವರದಿಯಾಗಿತ್ತು. ಆದರೆ ಸಭೆಯಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆದಿಲ್ಲ ಮತ್ತು ಏಕದಿನ ಪಂದ್ಯಗಳ ಓವರ್ ಕಡಿತಕ್ಕೆ ಹೆಚ್ಚಿನ ಒಲವು ಮೂಡಿಬಂದಿಲ್ಲ ಎನ್ನಲಾಗಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ (ಡಬ್ಲ್ಯುಟಿಸಿ) ಆಡುವ ತಂಡಗಳ ಸಂಖ್ಯೆ 9ರಿಂದ 12ಕ್ಕೆ ಏರಿಕೆಯಾಗಲಿದ ಎಂದೂ ಸಭೆಗೆ ಮುನ್ನ ವರದಿಯಾಗಿತ್ತು. ಆದರೆ ಡಬ್ಲ್ಯುಟಿಸಿಯಲ್ಲೂ ಬದಲಾವಣೆ ಮಾಡಲು ಐಸಿಸಿ ಮುಂದಾಗಿಲ್ಲ. ಇದರಿಂದ ಅ್ಘಾನಿಸ್ತಾನ, ಐರ್ಲೆಂಡ್, ಜಿಂಬಾಬ್ವೆ ಡಬ್ಲ್ಯುಟಿಸಿಯಿಂದ ಹೊರಗೆ ಉಳಿಯಲಿದೆ.