ಈಗಾಗಲೇ ಸೂಪರ್-8 ಹಂತಕ್ಕೆ ಒಟ್ಟು 8 ತಂಡಗಳು ಪ್ರವೇಶಿಸಿದ್ದು, ಯಾವ್ಯಾವ ದೇಶಗಳು ತಲುಪಿವೆ ಎಂಬುದರ ಪಟ್ಟಿಯನ್ನು ಇದೀಗ ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಭಾರತ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಜಿಂಬಾಬ್ವೆ, ಶ್ರೀಲಂಕಾ, ಇಂಗ್ಲೆಂಡ್, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ಸೂಪರ್-8ಗೆ ಅರ್ಹತೆ ಪಡೆದಿವೆ. ಈ ಮಧ್ಯೆ, ತಮ್ಮ ಗ್ರೂಪ್ನಲ್ಲಿ ಅಗ್ರಸ್ಥಾನ ಗಳಿಸಿದ ತಂಡಗಳನ್ನು ಒಂದು ಗುಂಪಿಗೆ ಹಾಕಿದರೆ, ಎರಡನೇ ಸ್ಥಾನದಲ್ಲಿದ್ದ ಕ್ವಾಲಿಫೈರ್ಗಳನ್ನು ಇನ್ನೊಂದು ಗ್ರೂಪ್ಗೆ ಸೇರಿಸಲಾಗಿದೆ. ಈ ನಿರ್ಧಾರವು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.