ಪುರುಷ ಮತ್ತು ಮಹಿಳಾ ಐಸಿಸಿ ಕ್ರಿಕೆಟ್ ಟೂರ್ನಿಗಳಿಗೆ ಹ್ಯುಂಡೈ ಮೋಟಾರ್ ಪ್ರೀಮಿಯರ್ ಪಾರ್ಟ್​ನರ್

ಪುರುಷ ಮತ್ತು ಮಹಿಳಾ ಐಸಿಸಿ ಕ್ರಿಕೆಟ್ ಟೂರ್ನಿಗಳಿಗೆ ಹ್ಯುಂಡೈ ಮೋಟಾರ್ ಪ್ರೀಮಿಯರ್ ಪಾರ್ಟ್​ನರ್
ಪುರುಷ ಮತ್ತು ಮಹಿಳಾ ಐಸಿಸಿ ಕ್ರಿಕೆಟ್ ಟೂರ್ನಿಗಳಿಗೆ ಹ್ಯುಂಡೈ ಮೋಟಾರ್ ಪ್ರೀಮಿಯರ್ ಪಾರ್ಟ್​ನರ್
Published on
ಬೆಂಗಳೂರು: ಪ್ರತಿಷ್ಠಿತ ಅಟೋಮೊಬೈಲ್ ಕಂಪನಿ ಆಗಿರುವ ಹ್ಯುಂಡೈ (HYUNDAI) ಮೋಟಾರ್ ಕಂಪನಿ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೊತೆಗೆ ಪಾಲುದಾರಿಕೆ ಮಾಡಿರುವುದಾಗಿ ಘೋಷಿಸಿದೆ. 2026ರಿಂದ 2027ರವರೆಗೆ ನಡೆಯುವ ಐಸಿಸಿಯ ಪ್ರತಿಷ್ಠಿತ ಟೂರ್ನಮೆಂಟ್‌ಗಳಿಗೆ ಹ್ಯುಂಡೈ ಸಂಸ್ಥೆಯು ಪ್ರೀಮಿಯರ್ ಪಾರ್ಟನರ್ ಆಗಿ ಕಾರ್ಯನಿರ್ವಹಿಸಲಿದೆ.
ಪ್ರೀಮಿಯರ್ ಪಾರ್ಟನರ್ ಆಗಿ ಹ್ಯುಂಡೈ ಮೋಟಾರ್, ಐಸಿಸಿ‌ಯ ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗಳ ವಿಶೇಷ ಹಕ್ಕುಗಳು ಮತ್ತು ಅವಕಾಶಗಳನ್ನು ಪಡೆದುಕೊಂಡಿದೆ. ಇದರಲ್ಲಿ 2027ರ ಪುರುಷರ ಕ್ರಿಕೆಟ್ ವಿಶ್ವಕಪ್ ಪಂದ್ಯಾವಳಿ ಕೂಡ ಸೇರಿದೆ. ಟಾಸ್ ಹಾಕುವುದು, ಸ್ಟೇಡಿಯಂನಲ್ಲಿ ಬ್ರ್ಯಾಂಡಿಂಗ್ ಮಾಡುವುದು ಮತ್ತು ಅಭಿಮಾನಿಗಳಿಗೆ ವಿಶೇಷ ಅನುಭವಗಳನ್ನು ನೀಡುವುದು ಸೇರಿದಂತೆ ವಿಶೇಷ ಹಕ್ಕುಗಳನ್ನು ಹ್ಯುಂಡೈ ಸಂಸ್ಥೆಯು ತನ್ನದಾಗಿಸಿಕೊಂಡಿದೆ.
ಕ್ರೀಡೆಯ ಮೂಲಕ ವಿವಿಧ ರೀತಿಯ ಜಾಗತಿಕ ಮಟ್ಟದ ಪ್ರೇಕ್ಷಕರ ಜೊತೆಗೆ ಗಾಢವಾದ ಸಂಪರ್ಕವನ್ನು ಸಾಧಿಸುವ ಹ್ಯುಂಡೈ ಮೋಟಾರ್‌ನ ಬದ್ಧತೆಗೆ ಪೂರಕವಾಗಿ ಈ ಪಾಲುದಾರಿಕೆಯು ಮೂಡಿಬಂದಿದೆ. ಸಹಯೋಗವು ಕ್ರಿಕೆಟ್ ಅತ್ಯಂತ ಪ್ರಮುಖವಾಗಿರುವ ಭಾರತದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಬ್ರ್ಯಾಂಡ್‌ನ ಉಪಸ್ಥಿತಿಯನ್ನು ಬಲಪಡಿಸುತ್ತದೆ. ಕ್ರಿಕೆಟ್ ಸಾಂಸ್ಕೃತಿಕ ವಿದ್ಯಮಾನವಾಗಿದೆ.
ಈ ಕುರಿತು ಮಾತನಾಡಿದ ಹ್ಯುಂಡೈ ಮೋಟಾರ್ ಕಂಪನಿಯ ಅಧ್ಯಕ್ಷ ಮತ್ತು ಸಿಇಓ ಜೋಸ್ ಮುನೋಜ್ ಅವರು, “ಕ್ರಿಕೆಟ್ ಮತ್ತು ಹ್ಯುಂಡೈ ಇಬ್ಬರೂ ಅತ್ಯುತ್ತಮವಾಗಿ ಡ್ರೈವ್ ಮಾಡುತ್ತಿದ್ದು, ಪ್ರತೀ ಸವಾಲನ್ನು ಎದುರಿಸಿ ಎದ್ದೇಳುವ ಸ್ಥೈರ್ಯವನ್ನು ಹೊಂದಿವೆ. ಐಸಿಸಿ‌ ಜೊತೆಗಿನ ಪಾಲುದಾರಿಕೆಯನ್ನು ಗೌರವಿಸುತ್ತೇವೆ ಮತ್ತು ಜಾಗತಿಕವಾಗಿ ಎರಡು ಬಿಲಿಯನ್‌ಗೂ ಹೆಚ್ಚು ಉತ್ಸಾಹಿ ಅಭಿಮಾನಿಗಳ ಜೊತೆ ಗಾಢ ಸಂಪರ್ಕ ಹೊಂದುತ್ತೇವೆ. ಕ್ರಿಕೆಟ್ ಜೀವನಶೈಲಿಯೇ ಆಗಿರುವ ಭಾರತದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಈ ಪಾಲುದಾರಿಕೆಯು ನಮ್ಮ ಗ್ರಾಹಕರು ಮತ್ತು ಪ್ರೇಕ್ಷಕರ ಜೊತೆ ನಮ್ಮ ಸಂಪರ್ಕವನ್ನು ಗಾಢಗೊಳಿಸುತ್ತದೆ. ಈ ಮಹತ್ವದ ಪಂದ್ಯಾವಳಿಗಳಲ್ಲಿ ಒಟ್ಟಿಗೆ ಅವಿಸ್ಮರಣೀಯ ಅನುಭವಗಳನ್ನು ಸೃಷ್ಟಿಸಲು ಎದುರುನೋಡುತ್ತಿದ್ದೇವೆ” ಎಂದು ಹೇಳಿದರು.
ಐಸಿಸಿ ಚೇರ್ ಮನ್ ಜಯ್ ಷಾ ಅವರು ಮಾತನಾಡಿ, “ಕ್ರಿಕೆಟ್ ಜಾಗತಿಕವಾಗಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ. ಎರಡು ಬಿಲಿಯನ್‌ಗೂ ಹೆಚ್ಚು ಅಭಿಮಾನಿಗಳು ಐಸಿಸಿ‌ಯ ಪ್ರಮುಖ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾರೆ. ಈ ಜಾಗತಿಕ ಮಟ್ಟದ ಪಂದ್ಯಾವಳಿಗಳು ಡಿಜಿಟಲ್ ಮತ್ತು ಸ್ಟೇಡಿಯಂಗಳಲ್ಲಿ ಅಭಿಮಾನಿಗಳ ಜೊತೆ ತೊಡಗಿಸಿಕೊಳ್ಳಲು ಅತ್ಯುತ್ತಮ ಅವಕಾಶ ನೀಡುತ್ತವೆ. ಹ್ಯುಂಡೈಯನ್ನು ಪ್ರೀಮಿಯರ್ ಪಾರ್ಟನರ್ ಆಗಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಮತ್ತು ಜೊತೆಯಾಗಿ ಅದ್ಭುತ ಕಾರ್ಯಕ್ರಮಗಳನ್ನು ಆಯೋಜಿಸಲು ಎದುರುನೋಡುತ್ತಿದ್ದೇವೆ. ಹ್ಯುಂಡೈ ಜಾಗತಿಕ ಬ್ರ್ಯಾಂಡ್ ಆಗಿದ್ದು, ದೀರ್ಘಕಾಲದಿಂದ ಕ್ರೀಡೆಗಳನ್ನು ಬೆಂಬಲಿಸುತ್ತಾ ಬಂದಿದೆ. ಇದೀಗ ನಾವು ಒಗ್ಗಟ್ಟಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ಉತ್ಸುಕರಾಗಿದ್ದೇವೆ” ಎಂದು ಹೇಳಿದರು.
ಈ ಪಾಲುದಾರಿಕೆ ಏಕೆ ಮಹತ್ವದ್ದು?
ಈ ಪಾಲುದಾರಿಕೆಯು ಕ್ರಿಕೆಟ್ ಜಗತ್ತಿನಲ್ಲಿ ಹ್ಯುಂಡೈ ಮೋಟಾರ್‌ ಹೊಂದಿರುವ ಸ್ಥಾನವನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. 2011ರಿಂದ 2015ರವರೆಗೆ ಐಸಿಸಿ ಜೊತೆಗೆ ಪಾಲುದಾರಿಕೆ ಮಾಡಿಕೊಂಡಿದ್ದ ಕಂಪನಿಯು, ಇದೀಗ ಮತ್ತೆ ಐಸಿಸಿ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.
ಐಸಿಸಿ ಪಂದ್ಯಗಳಲ್ಲಿ ಬಾಗವಹಿಸಲಿರುವ ಕ್ರಿಕೆಟ್ ಅಭಿಮಾನಿಗಳು ಹ್ಯುಂಡೈನ ಸಂವಾದಾತ್ಮಕ ಫ್ಯಾನ್ ಝೋನ್‌ಗಳು, ವಾಹನ ಪ್ರದರ್ಶನಗಳು ಮತ್ತು ಡಿಜಿಟಲ್ ಫ್ಯಾನ್ ತೊಡಗಿಸಿಕೊಳ್ಳುವಿಕೆ ಕಾರ್ಯಕ್ರಮಗಳ ಮೂಲಕ ಹ್ಯುಂಡೈ ಮೋಟಾರ್‌ ನ ನವೀನ ವಿಧಾನವನ್ನು ನೇರವಾಗಿ ಅನುಭವಿಸಲಿದ್ದಾರೆ.
ಈ ಒಪ್ಪಂದವು ವಿವಿಧ ಸ್ವರೂಪಗಳ ಪ್ರತಿಷ್ಠಿತ ಐಸಿಸಿ ಪಂದ್ಯಾವಳಿಗಳನ್ನು ಒಳಗೊಂಡಿದ್ದು, ಈ ಪಂದ್ಯಾವಳಿಗಳು ಅತ್ಯಂತ ಉತ್ಸಾಹಿ ಕ್ರಿಕೆಟ್ ಆಡುವ ರಾಷ್ಟ್ರಗಳಲ್ಲಿ ನಡೆಯಲಿವೆ.
ಹ್ಯುಂಡೈ ಮೋಟಾರ್ ತನ್ನ ಜಾಗತಿಕ ಕ್ರೀಡಾ ತಂತ್ರದ ಭಾಗವಾಗಿ ಕ್ರಿಕೆಟ್‌ ಮೇಲೆ ಏಕೆ ಗಮನ ಹರಿಸುತ್ತಿದೆ?
ಹ್ಯುಂಡೈ ಮೋಟಾರ್‌ನ ಐಸಿಸಿ ಪಾಲುದಾರಿಕೆಯು ಪ್ರತೀ ದೇಶದಲ್ಲಿ ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವ ಕ್ರೀಡೆಗಳೊಂದಿಗೆ ತೊಡಗಿಸಿಕೊಳ್ಳುವ ಸಂಸ್ಥೆಯ ಕ್ರೀಡಾ ಪಾಲುದಾರಿಕೆ ಯೋಜನೆಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ. ಅಂದಾಜು ಎರಡು ಬಿಲಿಯನ್‌ಗೂ ಹೆಚ್ಚು ಜಾಗತಿಕ ಪ್ರೇಕ್ಷಕರನ್ನು ಹೊಂದಿರುವ ಕ್ರಿಕೆಟ್ ಬ್ರ್ಯಾಂಡ್‌ ನ ವಿಶಾಲ ಮತ್ತು ಉತ್ಸಾಹಿ ಪ್ರೇಕ್ಷಕರೊಂದಿಗೆ ಸಂಪರ್ಕ ಹೊಂದುವ ವಿಶಿಷ್ಟ ಅವಕಾಶವನ್ನು ಈ ಪಾಲುದಾರಿಕೆ ಒದಗಿಸಲಿದೆ.
ಈ ಪಾಲುದಾರಿಕೆಯನ್ನು ಭಾರತದ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ಘೋಷಿಸಲಾಯಿತು. ಹ್ಯುಂಡೈ ಮೋಟಾರ್ ಮತ್ತು ಐಸಿಸಿ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಸಿಇಓ ಆಗಿ ನೇಮಕಗೊಂಡಿರುವ ತರುಣ್ ಗಾರ್ಗ್ ಅವರು ಮಾತನಾಡಿ, “ಈ ಪಾಲುದಾರಿಕೆಯು ಭಾರತದಲ್ಲಿ ಹ್ಯುಂಡೈ ಹೊಂದಿರುವ ಉತ್ತಮ ಬದ್ಧತೆಯನ್ನು ಮತ್ತು ಹ್ಯುಂಡೈನ ಜಾಗತಿಕ ಕಾರ್ಯಾಚರಣೆಗಳಲ್ಲಿ ಭಾರತ ಮಾರುಕಟ್ಟೆಯ ಬೆಳವಣಿಗೆಯ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ರೋಚಕ ಕ್ರಿಕೆಟ್ ಪಂದ್ಯಾವಳಿಗಾಗಿ ಎದುರು ನೋಡುತ್ತಿದ್ದೇವೆ ಮತ್ತು 360 ಡಿಗ್ರಿ ಸಂವಾದ ವಿಧಾನದ ಮೂಲಕ ದೇಶಾದ್ಯಂತ ಈ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಸಜ್ಜಾಗಿದ್ದೇವೆ” ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net