ನಾನು ಸ್ಪಿನ್ ಬೌಲಿಂಗ್ ಅನ್ನು ಚೆನ್ನಾಗಿ ಆಡಬಲ್ಲೆ ಎಂದು ಹಲವರು ಭಾವಿಸುತ್ತಾರೆ. ಆದರೆ, ವಾಸ್ತವವಾಗಿ ನನಗೆ ವೇಗದ ಬೌಲಿಂಗ್ ಆಡಲು ತುಂಬಾ ಇಷ್ಟ. ಅಲ್ಲಿ ನಾನು ಆರಾಮವಾಗಿ ಆಡಬಲ್ಲೆ. ಈ ಪಿಚ್‌ನಲ್ಲಿ ವೇಗಿಗಳನ್ನು ಎದುರಿಸುವುದು ಅದ್ಭುತವಾಗಿದೆ ಎನ್ನುವ ಮೂಲಕ ಎಲ್ಲರ ಹುಬ್ಬೇರಿಸಿದರು. ವಾಸ್ತವವಾಗಿ ರಜತ್, ಸ್ಪಿನ್ನರ್ಗಳಿಗೆ ಉತ್ತಮ ಬ್ಯಾಟ್ಸ್ಮನ್ ಎಂದು ಕ್ರಿಕೆಟ್ ಪಂಡಿತರು ಹೇಳುತ್ತಾರೆ. ಆದರೆ, ಅವರ ಪ್ರಕಾರ ತಾವು ವೇಗಿಗಳಿಗೆ ಒಳ್ಳೆಯ ಬಾಟ್ಸ್ಮನ್ ಅಂತೆ. ರಜತ್ ಅವರ ಮಾತುಗಳನ್ನು ನೋಡಿದರೆ, ತಂಡದ ಪ್ರದರ್ಶನದ ಬಗ್ಗೆ ಅವರಿಗೆ ತುಂಬಾ ತೃಪ್ತಿ ಇದೆ. ಅವರು ತಂಡವನ್ನು ಭಯವಿಲ್ಲದೆ ಬ್ಯಾಟಿಂಗ್ ಮಾಡಲು ಪ್ರೋತ್ಸಾಹಿಸುತ್ತಿದ್ದಾರೆ.