ಸಾಕಷ್ಟು ಬಾರಿ ವಂಚನೆಗೊಳಗಾದ್ರೂ ಸುಮ್ಮನಿದ್ದೆ! ಪೃಥ್ವಿ ಶಾ ಭಾವಿ ಪತ್ನಿಯ ನಿಗೂಢ ಇನ್‌ಸ್ಟಾ ಸ್ಟೋರಿ ವೈರಲ್...Prithvi Shaw

ಸಾಕಷ್ಟು ಬಾರಿ ವಂಚನೆಗೊಳಗಾದ್ರೂ ಸುಮ್ಮನಿದ್ದೆ! ಪೃಥ್ವಿ ಶಾ ಭಾವಿ ಪತ್ನಿಯ ನಿಗೂಢ ಇನ್‌ಸ್ಟಾ ಸ್ಟೋರಿ ವೈರಲ್...Prithvi Shaw
ಸಾಕಷ್ಟು ಬಾರಿ ವಂಚನೆಗೊಳಗಾದ್ರೂ ಸುಮ್ಮನಿದ್ದೆ! ಪೃಥ್ವಿ ಶಾ ಭಾವಿ ಪತ್ನಿಯ ನಿಗೂಢ ಇನ್‌ಸ್ಟಾ ಸ್ಟೋರಿ ವೈರಲ್...Prithvi Shaw
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟಿಗ ಪೃಥ್ವಿ ಶಾ ಭಾವಿ ಪತ್ನಿಯ ನಿಗೂಢ ಇನ್‌ಸ್ಟಾ ಸ್ಟೋರಿ ವೈರಲ್
  • ಪೋಸ್ಟ್ ಡಿಲೀಟ್ ಮಾಡಿದ್ರೂ ಅಸಲಿ ಮ್ಯಾಟರ್ ಲೀಕ್ ಮಾಡಿದ ನೆಟ್ಟಿಗರು
  • ಆಕೃತಿ ಅಗರ್ವಾಲ್ ಪೋಸ್ಟ್‌ನಿಂದ ಪೃಥ್ವಿ ಶಾ ಲೈಫ್‌ನಲ್ಲಿ ಹೊಸ ಬಿರುಗಾಳಿ?
  • ಕಳಪೆ ಫಾರ್ಮ್ ನಡುವೆ ಪೃಥ್ವಿ ಶಾ ವೈಯಕ್ತಿಕ ಜೀವನದಲ್ಲೂ ಸಂಕಷ್ಟ
Prithvi Shaw : ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರೆನ್ನಲಾದ ನಿಗೂಢ ಸ್ಟೋರಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಪ್ರಸ್ತುತ ಇನ್​ಸ್ಟಾ ಸ್ಟೋರಿ ಡಿಲೀಟ್ ಆಗಿದ್ದರೂ ಅದರ ಸ್ಕ್ರೀನ್​ಶಾಟ್​ಗಳು ಮಾತ್ರ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಷ್ಟಕ್ಕೂ ಆ ಪೋಸ್ಟ್​ನಲ್ಲಿ ಏನಿದೆ ಅಂತ ನೋಡುವುದಾದರೆ, ನಾನು ಸಾಕಷ್ಟು ಬಾರಿ ವಂಚನೆಗೆ ಒಳಗಾಗಿದ್ದರೂ ಸಹ, ಎಂದಿಗೂ ಒಂದೇ ಒಂದು ಮಾತನ್ನೂ ಆಡಲಿಲ್ಲ, ಆದರೆ ಒಂದು ಹೆಜ್ಜೆ ಮುಂದೆ ಇಟ್ಟ ಮೇಲೂ ಇದೆಲ್ಲಾ ನಡೆಯುತ್ತಿರುವುದನ್ನು ಇನ್ನು ನಂಬಲು ಸಾಧ್ಯವಾಗುತ್ತಿಲ್ಲ. ಎಲ್ಲವೂ ನಿಜ, ಪ್ರತಿಯೊಂದು ವದಂತಿಯೂ ನಿಜ. ಆತನ ಬಗ್ಗೆ ನೀವು ಸಾಮಾಜಿಕ ಜಾಲತಾಣಗಳಲ್ಲಿ ಏನೆಲ್ಲಾ ನೋಡುತ್ತಿದ್ದೀರೋ ಅದೆಲ್ಲವೂ ಸತ್ಯ ಎಂದು ಆಕೃತಿ ಅಗರ್ವಾಲ್ ಅವರು ಡಿಲೀಟ್ ಮಾಡುವ ಮುನ್ನ ತಮ್ಮ ಸೋಶಿಯಲ್ ಮೀಡಿಯಾ ಸ್ಟೋರಿಯಲ್ಲಿ ಬರೆದುಕೊಂಡಿದ್ದರು ಎನ್ನಲಾಗಿದೆ.
ಅಂದಹಾಗೆ, ಪೋಸ್ಟ್‌ನಲ್ಲಿ ಪೃಥ್ವಿ ಶಾ ಅವರ ಹೆಸರನ್ನು ಎಲ್ಲೂ ಉಲ್ಲೇಖಿಸದಿದ್ದರೂ ಸಹ, ನೆಟ್ಟಿಗರು ಮಾತ್ರ ಇದು ಪೃಥ್ವಿ ಶಾ ಅವರನ್ನು ಉದ್ದೇಶಿಸಿಯೇ ಹಾಕಿರುವ ಪೋಸ್ಟ್ ಎಂದು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಆದರೆ, ಆಕೃತಿ ಅವರು ಈಗಲೂ ಸಾಮಾಜಿಕ ಜಾಲತಾಣದಲ್ಲಿ ಪೃಥ್ವಿ ಶಾ ಅವರನ್ನು ಫಾಲೋ ಮಾಡುತ್ತಿದ್ದಾರೆ. ಈ ವದಂತಿಗಳ ಬಗ್ಗೆ ಆಕೃತಿಯಾಗಲಿ ಅಥವಾ ಪೃಥ್ವಿಯಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇನ್ನೂ ಆಕೃತಿ ಅಗರ್ವಾಲ್ ಮತ್ತು ಪೃಥ್ವಿ ಶಾ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಅದ್ಧೂರಿ ಸಮಾರಂಭವೊಂದರಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ಜೋಡಿ ದೀರ್ಘಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆಕೃತಿ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿರುವ ಇನ್‌ಫ್ಲುಯೆನ್ಸರ್ ಮತ್ತು ನಟಿಯಾಗಿದ್ದಾರೆ.
ಮತ್ತೊಂದೆಡೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಉತ್ತರಾಧಿಕಾರಿಯಾಗಬಲ್ಲ ಅದ್ಭುತ ಕ್ರಿಕೆಟ್ ಪ್ರತಿಭೆ ಎಂದು ಗುರುತಿಸಲ್ಪಟ್ಟಿದ್ದ ಪೃಥ್ವಿ ಶಾ ಅವರ ವೃತ್ತಿಜೀವನ ಈಗ ತೀರಾ ಕೆಳಮಟ್ಟಕ್ಕೆ ತಲುಪಿದೆ. ಸಾಲು ಸಾಲು ಗಾಯದ ಸಮಸ್ಯೆಗಳು, ಕಳಪೆ ಫಿಟ್‌ನೆಸ್ ಹಾಗೂ ನಿರಂತರ ವಿವಾದಗಳು ಪೃಥ್ವಿ ಶಾ ಅವರ ಜೀವನದ ಮುಖ್ಯ ಭಾಗವಾಗಿ ಮಾರ್ಪಟ್ಟಿದ್ದು, ಒಂದು ಅತ್ಯುತ್ತಮ ಕ್ರಿಕೆಟ್ ಭವಿಷ್ಯಕ್ಕೆ ದೊಡ್ಡ ಹಿನ್ನಡೆಯನ್ನು ಉಂಟುಮಾಡಿದೆ.
ಇತ್ತೀಚಿನ ಐಪಿಎಲ್ ಹರಾಜಿನಲ್ಲಿ ಕೊನೆಯ ಕ್ಷಣದವರೆಗೂ ಯಾವುದೇ ತಂಡಕ್ಕೆ ಹರಾಜಾಗದೆ ಉಳಿದಿದ್ದ ಪೃಥ್ವಿ ಶಾ ಅವರನ್ನು ಅಂತಿಮವಾಗಿ ಡೆಲ್ಲಿ ತಂಡವು ಖರೀದಿಸಿತಾದರೂ, ಟೂರ್ನಿಯಲ್ಲಿ ಒಂದೇ ಒಂದು ಪಂದ್ಯದಲ್ಲೂ ಆಡಲು ಅವರಿಗೆ ಅವಕಾಶ ಸಿಗಲಿಲ್ಲ. ಇಂತಹ ಕಠಿಣ ಪರಿಸ್ಥಿತಿಯ ನಡುವೆಯೇ, ಭಾವಿ ಪತ್ನಿ ಆಕೃತಿ ಅವರ ಈ ಇನ್‌ಸ್ಟಾಗ್ರಾಂ ಸ್ಟೋರಿ ಇವರಿಬ್ಬರ ಸಂಬಂಧದ ನಡುವಿನ ಬಿರುಕಿನ ವದಂತಿಗಳಿಗೆ ಮತ್ತಷ್ಟು ತುಪ್ಪ ಸುರಿದಂತಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net