ರಿಟೈನ್ ಹಾಗೂ ರಿಲೀಸ್ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಐಪಿಎಲ್ 2026ರ ಹರಾಜು ಪ್ರಕ್ರಿಯೆಗೆ ವೇದಿಕೆ ಸಿದ್ಧವಾಗುತ್ತಿದೆ. ಆಟಗಾರರನ್ನು ಉಳಿಸಿಕೊಳ್ಳುವ ಗಡುವು ಶನಿವಾರ ಅಂತ್ಯಗೊಂಡಿದ್ದು, ಇದರೊಂದಿಗೆ, ಫ್ರಾಂಚೈಸಿಗಳು ಅನೇಕ ಆಟಗಾರರನ್ನು ಬಿಡುಗಡೆಗೊಳಿಸಿ ಮತ್ತು ಕೆಲವರನ್ನು ಟ್ರೇಡ್ ಮೂಲಕ ಮತ್ತೊಂದು ತಂಡಕ್ಕೆ ಕಳಿಸಿಕೊಟ್ಟಿರುವುದು ಸದ್ಯ ಕ್ರಿಕೆಟ್ ಪ್ರಿಯರ ಅಚ್ಚರಿಗೆ ಕಾರಣವಾಯಿತು.