ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ತಾನು ಫಿಟ್ ಇಲ್ಲ ಎಂಬ ಟೀಕೆಗಳನ್ನು ಹತ್ತಿಕ್ಕಲು ಸರ್ಫರಾಜ್, ಕಳೆದ ಒಂದೂವರೆ ವರ್ಷದಲ್ಲಿ 17 ಕೆಜಿ ತೂಕ ಇಳಿಸಿಕೊಂಡಿರುವುದು ಗಮನಾರ್ಹ. ಅಧಿಕ ತೂಕ ಎಂಬ ಲೇವಡಿಗಳ ಮಧ್ಯೆ, ಟೀಮ್ ಇಂಡಿಯಾದ ದಿಗ್ಗಜ, ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಖಾನ್ ಬೆನ್ನಿಗೆ ನಿಂತಿದ್ದರು. ದೇಹದ ತೂಕಕ್ಕಿಂತ ಆಟಗಾರನ ಪ್ರದರ್ಶನ ಮತ್ತು ಕ್ರಿಕೆಟ್ ಫಿಟ್ನೆಸ್ ತುಂಬಾ ಮುಖ್ಯ ಎಂದು ಬ್ಯಾಟ್ ಬೀಸಿದ್ದರು. ರಣಜಿ ಟ್ರೋಫಿಯಲ್ಲಿ ಮೂರು ಸೆಂಚುರಿ ಬಾರಿಸಿದ್ದರೂ ತೂಕದ ಸಮಸ್ಯೆಯಿಂದ ದೂರ ಸರಿದಿದ್ದ ಈ ಆಟಗಾರ, ಈಗ ಸಖತ್ ಸ್ಟೈಲಿಶ್ ಆಗಿ ಕಮ್ಬ್ಯಾಕ್ ಮಾಡಿರುವುದು ಮ್ಯಾನೇಜ್ಮೆಂಟ್ನವರ ಗಮನ ಸೆಳೆದಿದೆ,(ಏಜೆನ್ಸೀಸ್).