ಭಾರತ ಎದುರು ಗೆದ್ದರೂ ಪಾಕ್​ಗೆ ತಪ್ಪಲಿಲ್ಲ ಭಾರಿ ಮುಖಭಂಗ! ಮೂವರು ವೇಸ್ಟ್​ ಎಂದ ಟ್ರೋಲಿಗರು | IND vs PAK U-19

 IND vs PAK U-19
ಭಾರತ ಎದುರು ಗೆದ್ದರೂ ತಪ್ಪಲಿಲ್ಲ ಪಾಕ್​ಗೆ ಭಾರಿ ಮುಖಭಂಗ! ಮೂವರು ವೇಸ್ಟ್​ ಎಂದ ಟ್ರೋಲಿಗರು | IND vs PAK U-19
Published on: 

IND vs PAK U-19: ಇಂದು ಒಮಾನ್‌ನ ಅಲ್ ಅಮರಾತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ 'ಅಂಡರ್-19 ಏಷ್ಯಾಕಪ್ 2026'ರ ಪಂದ್ಯದಲ್ಲಿ ಪಾಕ್​ ಮೂರು ವಿಕೆಟ್‌ಗಳ ಜಯ ಸಾಧಿಸಿತು. ಆದರೆ, ಪಂದ್ಯದ ನಡುವೆ ಮಾಡಿದ ಅದೊಂದು ಮಿಸ್ಟೇಕ್​ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್​, ಟೀಕೆಗಳಿಗೆ ಗುರಿಯಾಗಿದೆ.

ಅಂಡರ್-19 ಏಷ್ಯಾಕಪ್ ಟೂರ್ನಿಯ ಭಾಗವಾಗಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿದ್ದು ಓಕೆ. ಆದರೆ, ಟೀಮ್ ಇಂಡಿಯಾ ಬ್ಯಾಟಿಂಗ್ ವೇಳೆ ಪಾಕಿಸ್ತಾನಿ ಆಟಗಾರರು ಮಾಡಿದ ಕ್ಯಾಚ್​ ಬಿಟ್ಟ ತಪ್ಪು ಈಗ ನೆಟ್ಟಿಗರ ನಗೆಗಡಲಿಗೆ ಕಾರಣವಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಲವು ಟ್ರೋಲ್‌, ಮೀಮ್​ಗಳು ಜೋರಾಗಿದ್ದು, ಬೌಲರ್​ ಸೇರಿದಂತೆ ಇಬ್ಬರೂ ಫೀಲ್ಡರ್​ಗಳಿಂದ ಒಂದು ಕ್ಯಾಚ್​ ಹಿಡಿಯಲು ಸಾಧ್ಯವಾಗಲಿಲ್ಲವಾ? ಎಂಬ ಟೀಕೆಗಳ ಸುರಿಮಳೆಗಳು ಹರಿದುಬಂದಿವೆ. ಕ್ಯಾಚ್​ ಬಿಟ್ಟ ದೃಶ್ಯವನ್ನು ನೋಡಿ ಡಗ್​ಔಟ್​ನಲ್ಲಿ ಇದ್ದ ಆಟಗಾರರು ಸಹ ನಕ್ಕಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

44ನೇ ಓವರ್​ನಲ್ಲಿ ಮೊಹಮ್ಮದ್ ಸಯ್ಯಾಮ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ, ಕ್ರೀಸ್​ನಲ್ಲಿದ್ದ ಕಾವ್ಯಾ ಪಟೇಲ್ ಜೋರಾಗಿ ಬೀಸಲು ಹೋದಾಗ ಬಾಲ್​ ತುಂಬಾ ಮೇಲೆ ಹೋಯಿತು. ತಕ್ಷಣವೇ ಕ್ಯಾಚ್​ ಹಿಡಿಯಲು ಸಯ್ಯಮ್, ಫೀಲ್ಡರ್ ಉಸ್ಮಾನ್ ಖಾನ್ ಮತ್ತು ವಿಕೆಟ್ ಕೀಪರ್ ಹಮ್ಜಾ ಜಹೂರ್ ಒಂದೇ ಪಾಯಿಂಟ್​ಗೆ ಓಡೋಡಿ ಬಂದರು. ಆದರೆ, ಸರಿಯಾದ ಮಾತಿಲ್ಲದೇ ಹಿಡಿಯುವುದ ಬಿಟ್ಟು ನಿಂತಲ್ಲೇ ನಿಂತರು.

ಮೂವರು ಸಹ ಗೊಂದಲದಲ್ಲಿ ಕ್ಯಾಚ್​ ಹಿಡಿಯದೆ ಕೈಚೆಲ್ಲಿದ ಘಟನೆ ಕೆಲ ನಿಮಿಷಗಳ ಕಾಲ ಟೀಮ್ ಇಂಡಿಯಾ ಅಭಿಮಾನಿಗಳು ಮತ್ತು ಕ್ರಿಕೆಟ್​ ಪ್ರೇಮಿಗಳನ್ನು ಭಾರಿ ನಗೆಗಡಲಿಗೆ ದೂಡಿತು. ಚೆಂಡು ನೆಲಕ್ಕೆ ಬಿದ್ದಿದ್ದನ್ನು ನೋಡಿ ಸಯ್ಯಮ್ ತನ್ನ ಸಹ ಆಟಗಾರರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ,(ಏಜೆನ್ಸೀಸ್).