ಹಾಕಿ ವಿಶ್ವಕಪ್: ಭಾರತ ಮಹಿಳೆಯರಿಗೆ 5ನೇ ಸ್ಥಾನ

ಹಾಕಿ ವಿಶ್ವಕಪ್: ಭಾರತ ಮಹಿಳೆಯರಿಗೆ 5ನೇ ಸ್ಥಾನ
ಹಾಕಿ ವಿಶ್ವಕಪ್: ಭಾರತ ಮಹಿಳೆಯರಿಗೆ 5ನೇ ಸ್ಥಾನ
Published on

ಆಮ್‌ಸ್ಟೆಲ್ವಿನ್ (ನೆದರ್ಲ್ಯಾಂಡ್ಸ್): ಭಾರತ ಮಹಿಳಾ ತಂಡ ಎಫ್​ಐಎಚ್​ ಹಾಕಿ ವಿಶ್ವಕಪ್‌ನಲ್ಲಿ ತನ್ನ ಎರಡನೇ ಅತ್ಯುತ್ತಮ ಸಾಧನೆ ಮಾಡಿದೆ. ನವನೀತ್ ಕೌರ್ (44, 47ನೇ ನಿಮಿಷ) ಸಿಡಿಸಿದ ಅವಳಿ ಗೋಲುಗಳ ನೆರವಿನಿಂದ ಸಲೀಮಾ ಟೆಟೆ ಪಡೆ ಐದನೇ ಸ್ಥಾನದ ಪ್ಲೇಆ್ ಪಂದ್ಯದಲ್ಲಿ ಬಲಿಷ್ಠ ಜರ್ಮನಿ ಎದುರು 3-1 ಅಂತರದಿಂದ ಗೆದ್ದು ಬೀಗಿತು. ಇದರೊಂದಿಗೆ ವಿಶ್ವಕಪ್ ಕಳೆದ 52 ವರ್ಷಗಳಲ್ಲಿ ಅತ್ಯುತ್ತಮ ಸ್ಥಾನ ಪಡೆಯಿತು. ಇದಕ್ಕೆ ಮುನ್ನ 1974ರ ಚೊಚ್ಚಲ ವಿಶ್ವಕಪ್‌ನಲ್ಲಿ ಭಾರತ ತಂಡ 4ನೇ ಸ್ಥಾನ ಪಡೆದಿತ್ತು.


ಗುರುವಾರ ನಡೆದ ಪಂದ್ಯದ ಮೊದಲಾರ್ಧದ ಗೋಲು ರಹಿತವಾಗಿ ಉಳಿಯಿತು. ಮೊದಲ 43 ನಿಮಿಷ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿ ಗೋಲುಗಳಿಸಲು ವಿಫಲವಾದವು.

ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕಿಳಿದ ಭಾರತ ಕೊನೇ 17 ನಿಮಿಷದಲ್ಲಿ ಮಾಜಿ ವಿಶ್ವ ಚಾಂಪಿಯನ್ ಜರ್ಮನಿ ತಿರುಗೇಟು ನೀಡಲು ಅವಕಾಶವೇ ನೀಡಲಿಲ್ಲ.

ಇಶಿಕಾ (43) ಮೊದಲ ಗೋಲು ದಾಖಲಿಸಿದರು. ನಂತರ ನವನೀತ್ ಕೌರ್ ಎರಡು ಅದ್ಭುತ ಗೋಲುಗಳ ನೆರವಿನಿಂದ ಗೋಲಿನ ಅಂತರ ಹಿಗ್ಗಿಸಿದರು. ಜರ್ಮನಿ ಪರ ಲಿನ್ ಕ್ರಿಂಗ್ಸ್ 59ನೇ ನಿಮಿಷದಲ್ಲಿ ಏಕೈಕ ಗೋಲುಗಳಿಸಿದರು. ಜರ್ಮನಿಯ ಆರು ಪೆನಾಲ್ಟಿ ಕಾರ್ನರ್‌ಗಳನ್ನು ತಡೆದ ಭಾರತದ ಗೋಲು ಕೀಪರ್ ಬಿಚೂ ದೇವಿ ಗೆಲುವಿನ ರೂವಾರಿ ಎನಿಸಿದರು. ಈ ಗೆಲುವಿನೊಂದುಗೆ ವಿಶ್ವ ನಂ.9 ಭಾರತ

ತಂಡ ಮುಂಬರುವ ಏಷ್ಯನ್‌ಗೇಮ್ಸ್‌ಗೆ ಆತ್ಮವಿಶ್ವಾಸ ವೃದ್ಧಿಸಿಕೊಂಡಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆಯಲು ನೆರವಾಗಿದ್ದ ಕೋಚ್ ಜೋರ್ಡ್ ಮರೀನೆ ಮಾರ್ಗದರ್ಶನದಲ್ಲಿ ಭಾರತ ಈ ಸಾಧನೆ ಮಾಡಿರುವುದು ಗಮನಾರ್ಹ ಎನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net