ಟಿ20 ವಿಶ್ವಕಪ್: ಭಾರತ-ಪಾಕ್​ ಪಂದ್ಯಕ್ಕೆ ಮಳೆ ಭೀತಿ!

ಟಿ20 ವಿಶ್ವಕಪ್: ಭಾರತ-ಪಾಕ್​ ಪಂದ್ಯಕ್ಕೆ ಮಳೆ ಭೀತಿ!
ಟಿ20 ವಿಶ್ವಕಪ್: ಭಾರತ-ಪಾಕ್​ ಪಂದ್ಯಕ್ಕೆ ಮಳೆ ಭೀತಿ!
Published on
ಕೊಲಂಬೊ: ಭಾರಿ ವಿವಾದದ ಬಳಿಕ ಕೊಲಂಬೊದಲ್ಲಿ ಭಾರತ-ಪಾಕ್ (India vs Pakistan)​ ನಡುವಿನ ಟಿ20 ವಿಶ್ವಕಪ್​ (t20 world cup) ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದರೂ, ಭಾನುವಾರ ನಿಗದಿಯಂತೆ ಆಟ ನಡೆಯಲು ಮಳೆರಾಯ ಅವಕಾಶ ನೀಡುವನೇ ಎಂಬ ಪ್ರಶ್ನೆ ಈಗ ಎದ್ದಿದೆ. ಶ್ರೀಲಂಕಾ ಹವಾಮಾನ ಇಲಾಖೆಯ ವರದಿಯ ಪ್ರಕಾರ, ಭಾನುವಾರ-ಸೋಮವಾರ ಕೊಲಂಬೊದಲ್ಲಿ ಭಾರಿ ಮಳೆ ಸುರಿಯುವ ಸಾಧ್ಯತೆಗಳಿವೆ.

ಭಾನುವಾರ ಕೊಲಂಬೊದಲ್ಲಿ ಸುಮಾರು 4 ಗಂಟೆಗಳ ಕಾಲ ಗುಡುಗು ಸಹಿತ ಮಳೆ ಸುರಿಯುವ ಮುನ್ಸೂಚನೆ ನೀಡಲಾಗಿದೆ. ಸಂಜೆ 4ರಿಂದ 6 ಗಂಟೆ ನಡುವೆ ಭಾರಿ ಮಳೆ ಮತ್ತು ನಂತರದಲ್ಲಿ ತುಂತುರು ಮಳೆ ಸುರಿಯು ನಿರೀಕ್ಷೆ ಇದೆ. ಇದರಿಂದ ಪಂದ್ಯ ನಿಗದಿಯಂತೆ ರಾತ್ರಿ 7 ಗಂಟೆಗೆ ಆರಂಭಗೊಳ್ಳುವುದು ಕಠಿಣವೆನಿಸಲಿದೆ.

ಕನಿಷ್ಠ ತಲಾ 5 ಓವರ್​ಗಳ ಆಟವೂ ನಡೆಯದೆ ಪಂದ್ಯ ರದ್ದುಗೊಂಡರೆ ಉಭಯ ತಂಡಗಳು ತಲಾ ಒಂದು ಅಂಕ ಹಂಚಿಕೊಳ್ಳಲಿವೆ. ಇದರಿಂದ ಭಾರತದ ಸೂಪರ್​-8 ಪ್ರವೇಶ ಖಚಿತವಾಗಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net