ಟೆಸ್ಟ್​ ಕ್ರಿಕೆಟ್​ನಲ್ಲಿ 300 ವಿಕೆಟ್​ ಪೂರೈಸಿದ ಆರ್​ಸಿಬಿ ವೇಗಿ!

ಟೆಸ್ಟ್​ ಕ್ರಿಕೆಟ್​ನಲ್ಲಿ 300 ವಿಕೆಟ್​ ಪೂರೈಸಿದ ಆರ್​ಸಿಬಿ ವೇಗಿ!
ಟೆಸ್ಟ್​ ಕ್ರಿಕೆಟ್​ನಲ್ಲಿ 300 ವಿಕೆಟ್​ ಪೂರೈಸಿದ ಆರ್​ಸಿಬಿ ವೇಗಿ!
Published on

ವೇಗಿ (

Josh Hazlewood

) ಜೋಶ್​ ಹ್ಯಾಸಲ್​ವುಡ್​ (301) ಆಸ್ಟ್ರೆಲಿಯಾ ಪರ ಟೆಸ್ಟ್​ ಕ್ರಿಕೆಟ್​ನಲ್ಲಿ 300 ವಿಕೆಟ್​ ಕಬಳಿಸಿದ 9ನೇ ಬೌಲರ್​ ಎನಿಸಿದ್ದಾರೆ.


ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ 89 ರನ್​ಗಳಿಗೆ 6 ವಿಕೆಟ್​ ಕಬಳಿಸುವ ಮೂಲಕ ಅವರು ಈ ಸಾಧನೆ ಮಾಡಿದರು. ಇದು ಅವರ 14ನೇ 5 ವಿಕೆಟ್​ ಗೊಂಚಲು ಆಗಿದೆ.

ಶೇನ್​ ವಾರ್ನ್​ (708), ನಾಥನ್​ ಲ್ಯಾನ್​ (568), ಗ್ಲೆನ್​ ಮೆಕ್​ಗ್ರಾಥ್​ (563), ಮಿಚೆಲ್​ ಸ್ಟಾರ್ಕ್​ (435), ಡೆನ್ನಿಸ್​ ಲಿಲ್ಲಿ (355), ಪ್ಯಾಟ್​ ಕಮ್ಮಿನ್ಸ್​ (316), ಮಿಚೆಲ್​ ಜಾನ್ಸನ್​ (313), ಬ್ರೆಟ್​ ಲೀ (310) ಆಸೀಸ್​ನ ಹಿಂದಿನ 300 ವಿಕೆಟ್​ ಸಾಧಕರು. 35 ವರ್ಷದ ಹ್ಯಾಸಲ್​ವುಡ್​ ತಾನಾಡಿದ 77ನೇ ಟೆಸ್ಟ್​ನಲ್ಲಿ ಈ ಮೈಲಿಗಲ್ಲು ನೆಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net