

ಡಾರ್ವಿನ್: ವೇಗಿ (
Hasan Mahmud
) ಹಸನ್ ಮಹಮೂದ್ (55ಕ್ಕೆ 6) ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೆಲಿಯಾ (
Australia
) ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಬಾಂಗ್ಲಾದೇಶ ತಂಡಕ್ಕೆ ಮೇಲುಗೈ ಬಿಟ್ಟುಕೊಟ್ಟಿದೆ. 23 ವರ್ಷಗಳ ಬಳಿಕ ಕಾಂಗರೂ ನಾಡಿನಲ್ಲಿ ಟೆಸ್ಟ್ ಸರಣಿ ಆಡುತ್ತಿರುವ ಬಾಂಗ್ಲಾ ಅಚ್ಚರಿಯ ರೀತಿಯಲ್ಲಿ ಮೊದಲ ದಿನದ ಗೌರವ ಸಂಪಾದಿಸಿತು.
ಮರಾರ ಸ್ಟೇಡಿಯಂನಲ್ಲಿ ಗುರುವಾರ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದ ಆಸೀಸ್ ನಿರ್ಧಾರ ಕೈಕೊಟ್ಟಿತು. ಬಾಂಗ್ಲಾ ವೇಗಿಗಳ ದಾಳಿಗೆ ಕುಸಿದ ಆಸೀಸ್ 200ರ ಗಡಿ ದಾಟಲು ವಿಫಲವಾಯಿತು. ಒಂದು ಹಂತದಲ್ಲಿ 74 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ತಿಣುಕಾಡಿದ ಆಸೀಸ್, ಸ್ಟೀವನ್ ಸ್ಮಿತ್ (71) ಏಕಾಂಗಿ ಹೋರಾಟದ ನಡುವೆ ಚಹಾ ವಿರಾಮದ ಬಳಿಕ 53 ಓವರ್ಗಳಲ್ಲಿ 198 ರನ್ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಬಾಂಗ್ಲಾ ದಿನದಂತ್ಯಕ್ಕೆ 24 ಓವರ್ಗಳಲ್ಲಿ 1 ವಿಕೆಟ್ಗೆ 96 ರನ್ ಗಳಿಸಿದ್ದು, ಸದ್ಯ 102 ರನ್ ಹಿನ್ನಡೆಯಲ್ಲಿದೆ.