ಚೆನ್ನೈ: ಸಾಮಾಜಿಕ ಜಾಲತಾಣ ಎಂಬುದು ಒಂದೇ ರಾತ್ರಿಯಲ್ಲಿ ಯಾರನ್ನು ಎಲ್ಲಿಗೆ ಬೇಕಾದರೂ ತಲುಪಿಸಬಲ್ಲದು ಎಂಬುದಕ್ಕೆ ಈ ಸುದ್ದಿ ಸಾಕ್ಷಿ. ಕಳೆದ ಕೆಲವು ದಿನಗಳಿಂದ ದಕ್ಷಿಣ ಭಾರತದಾದ್ಯಂತ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರ ಭದ್ರತಾ ಸಿಬ್ಬಂದಿ (ಬಾಡಿಗಾರ್ಡ್), ಕೊನೆಗೂ ತಮ್ಮಂತೆಯೇ ಕಾಣುವ ಅಸಲಿ ಕ್ರಿಕೆಟಿಗ, ಚೈನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಆಟಗಾರ ಅಂಶುಲ್ ಕಾಂಬೋಜ್ ಅವರನ್ನು ಭೇಟಿಯಾಗಿದ್ದಾರೆ.