Hardik Pandya: ನಿನ್ನೆ (ಮೇ.11) ರಾಯ್‌ಪುರದಲ್ಲಿ ನಡೆದ 19ನೇ ಆವೃತ್ತಿಯ ಐಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ರೋಚಕ ಜಯ ಸಾಧಿಸಿತು. ಈ ಹಿನ್ನೆಲೆಯಲ್ಲಿ, ಮುಂಬೈ ಇಂಡಿಯನ್ಸ್ 2026ರ ಸೀಸನ್ನ ಪ್ಲೇಆಫ್ ರೇಸ್‌ನಿಂದ ಎಕ್ಸಿಟ್ ಆಗಿದೆ. ಇದರಿಂದಾಗಿ, ಎಂಐ ಫ್ರಾಂಚೈಸಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆಗಳನ್ನು ಎದುರಿಸುತ್ತಿದೆ. ಮತ್ತೊಂದೆಡೆ, ತಮ್ಮದೇ ತಂಡವನ್ನು ಹಾರ್ದಿಕ್ ಅನ್‌ಫಾಲೋ, ಫಾಲೋ ಮಾಡಿದ್ದಾರೆ ಎನ್ನಲಾಗಿದೆ.