ಅವಳ ಕಾಲ್ಗುಣದಿಂದಲೇ...ಮನದರಸಿ ಮಹೀಕಾ ಬಗ್ಗೆ ಹಾರ್ದಿಕ್ ಪಾಂಡ್ಯ ಮನತುಂಬಿ ಹೇಳಿದ್ದೇನು? Hardik Pandya

 ಹಾರ್ದಿಕ್ ಪಾಂಡ್ಯ (ಚಿತ್ರ X)
ಹಾರ್ದಿಕ್ ಪಾಂಡ್ಯ (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಭಾನುವಾರ ನಡೆದ ಆ ಕ್ಷಣ ಕೇವಲ ಒಂದು ತಂಡದ ಗೆಲುವಾಗಿರಲಿಲ್ಲ
  • ಅದು ಒಬ್ಬ ಆಟಗಾರನ ಅದ್ಭುತ ಪುನರಾಗಮನಕ್ಕೆ ಸಿಕ್ಕ ಗೌರವವಾಗಿತ್ತು
  • ಹಾರ್ದಿಕ್ ಪಾಂಡ್ಯ ವಿಶ್ವದ ಅತ್ಯಂತ ಅಪರೂಪದ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಯಾದರು
  • ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವುದು ಹೆಮ್ಮೆಯ ವಿಷಯ. ಆದರೆ ನನ್ನಲ್ಲಿ ಇನ್ನೂ ಹಲವು ವರ್ಷಗಳ ಕ್ರಿಕೆಟ್ ಉಳಿದಿದೆ
Hardik Pandya: ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಭಾನುವಾರ ನಡೆದ ಆ ಕ್ಷಣ ಕೇವಲ ಒಂದು ತಂಡದ ಗೆಲುವಾಗಿರಲಿಲ್ಲ. ಅದು ಒಬ್ಬ ಆಟಗಾರನ ಅದ್ಭುತ ಪುನರಾಗಮನಕ್ಕೆ ಸಿಕ್ಕ ಗೌರವವಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಫೈನಲ್ ಹಣಾಹಣಿಯಲ್ಲಿ ಭಾರತ ಜಯಭೇರಿ ಬಾರಿಸುತ್ತಿದ್ದಂತೆ, ಹಾರ್ದಿಕ್ ಪಾಂಡ್ಯ ವಿಶ್ವದ ಅತ್ಯಂತ ಅಪರೂಪದ ಕ್ರಿಕೆಟಿಗರ ಪಟ್ಟಿಗೆ ಸೇರ್ಪಡೆಯಾದರು. ಆದಾಗ್ಯೂ, ಎರಡು ಬಾರಿ ಟಿ20 ವಿಶ್ವಕಪ್​ ಗೆದ್ದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಪ್ರಶಸ್ತಿ ಗೆಲುವಿನ ನಂತರ ಮಾತನಾಡಿದ ಪಾಂಡ್ಯ,  ಎರಡು ಬಾರಿ ವಿಶ್ವ ಚಾಂಪಿಯನ್ ಆಗಿರುವುದು ಹೆಮ್ಮೆಯ ವಿಷಯ. ಆದರೆ ನನ್ನಲ್ಲಿ ಇನ್ನೂ ಹಲವು ವರ್ಷಗಳ ಕ್ರಿಕೆಟ್ ಉಳಿದಿದೆ. ಭಾರತವು ಜಾಗತಿಕ ಪಂದ್ಯಾವಳಿಗಳಲ್ಲಿ ಮೇಲುಗೈ ಸಾಧಿಸಲು ಸಹಾಯ ಮಾಡುವ ಮೂಲಕ ಆ ಅವಧಿಯನ್ನು ಸದುಪಯೋಗಪಡಿಸಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದರು.

"ಮಹೀಕಾ ಬಂದ ಮೇಲೆ ಬರೀ ಗೆಲುವೇ...": ಹಾರ್ದಿಕ್ ಪಾಂಡ್ಯ ಭಾವುಕ ಒಪ್ಪಿಗೆ!

2026 ರ ಟಿ20 ವಿಶ್ವಕಪ್ ಗೆಲುವಿನ ಬೆನ್ನಲ್ಲೇ ಹಾರ್ದಿಕ್​ ವೈಯಕ್ತಿಕ ಜೀವನದ ಸಿಹಿ ಸುದ್ಧಿಯೊಂದು ಅಭಿಮಾನಿಗಳ ಮನಸ್ಸನ್ನು ಗೆದ್ದಿದೆ. ಆದಾಗ್ಯೂ, ಪಂದ್ಯದ ಉದ್ದಕ್ಕೂ ಹಾರ್ದಿಕ್​ ನೆರಳಿನಂತೆ ಇದ್ದ ಗೆಳತಿ ಮಹೀಕಾ ಶರ್ಮಾ ತಮ್ಮ ಈ ಗೆಲುವಿನ ಹಿಂದಿನ ಶಕ್ತಿ ಎಂದು ಹಾರ್ದಿಕ್ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

ಪ್ರಶಸ್ತಿ ಬಗ್ಗೆ ಪಾಂಡ್ಯ ಹೇಳಿದ್ದೇನು?

ನನ್ನಲ್ಲಿ ಇನ್ನೂ 10 ವರ್ಷಗಳ ಕ್ರಿಕೆಟ್ ಉಳಿದಿವೆ. ಹಾಗೆಯೇ ನಾನು 10 ಐಸಿಸಿ ಪ್ರಶಸ್ತಿಗಳನ್ನು ಗೆಲ್ಲಲು ಬಯಸುತ್ತೇನೆ. ಅದೇ ನನ್ನ ಗುರಿ. ಈ ಗೆಲವು ಸಾಕಷ್ಟು ಭಾವನಾತ್ಮಕವಾಗಿದೆ. ಆದಾಗ್ಯೂ, ಭಾರತದಲ್ಲಿ ವಿಶ್ವ ಕಪ್​ ಗೆದ್ದ ನಂತರ ಜನರ ಉತ್ಸಾಹ ಅದ್ಭುತವಾಗಿದೆ. ನಿನ್ನೆಯಿಂದ ನಾವು ಮಾಡಿದ ಪ್ರಯತ್ನವನ್ನು ನೋಡಿದಾಗ ಚಾಂಪಿಯನ್​ಗಳು ನಾವೇ ಎಂದು ತಿಳಿದಿತ್ತು ಎಂದರು.
ಆ ಓವರ್ ಎಸೆಯುವಾಗ ನನ್ನ ಕಣ್ಣಮುಂದೆ 2024 ರ ಟಿ20  ವಿಶ್ವಕಪ್‌ ಫೈನಲ್‌ನ ಕ್ಷಣಗಳು ಸುಳಿದವು. ಅಂದು ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಓವರ್‌ನಲ್ಲಿ ಎಷ್ಟು ಒತ್ತಡವಿತ್ತೋ, ಇಂದೂ ಅಷ್ಟೇ ಇತ್ತು. ಆ ನೆನಪುಗಳು ನನಗೆ ಶಾಂತವಾಗಿರಲು ಮತ್ತು ಸರಿಯಾದ ಜಾಗಕ್ಕೆ ಬೌಲಿಂಗ್​ ಮಾಡಲು ಸಹಾಯ ಮಾಡಿದವು ಎಂದು ಹೇಳಿದರು.
ನಾನು ದೇವರಿಗೆ ಕೃತಜ್ಞನಾಗಿದ್ದೇನೆ. ನಾನು ಇಂಗ್ಲೆಂಡ್ ವಿರುದ್ಧ 19 ನೇ ಓವರ್ ಬೌಲಿಂಗ್ ಮಾಡುವಾಗ, 2024 ರ ವಿಶ್ವಕಪ್ ಫೈನಲ್ ಬಗ್ಗೆ ಯೋಚಿಸುತ್ತಿದ್ದೆ. ಬ್ಯಾಟಿಂಗ್​ ಮಾಡಲು ಹೋದಾಗ  ನಾನು ಕಿಶನ್ ಮತ್ತು ಅಭಿಷೇಕ್ ಹತ್ತಿರ ಈ ವಿಚಾರದ ಬಗ್ಗೆ ಮಾತನಾಡಿದೆ ಎಂದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net