ಬಲಿಷ್ಟ ತಂಡಗಳಲ್ಲಿ ಒಂದಾದ ಮುಂಬೈ ಇಂಡಿಯನ್ಸ್ 2020 ರಲ್ಲಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಐಪಿಲ್ ಗೆದ್ದ ನಂತರ ಇಲ್ಲಿಯವರೆಗೂ ಟ್ರೋಫಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. 2024 ರಲ್ಲಿ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ, ಗುಜರಾತ್ ಟೈಟಾನ್ಸ್‌ನಿಂದ ಹಾರ್ದಿಕ್ ಪಾಂಡ್ಯ ಅವರನ್ನು ಕರೆತಂದು ನಾಯಕ ಪಟ್ಟ ನೀಡಿದರು. ಆದಾಗ್ಯೂ, 2025 ರಲ್ಲಿ ಪ್ಲೇಆಫ್‌ನಿಂದ ನಿರ್ಗಮಿಸಿದ ನಂತರ, 2026 ರ ಸೀಸನ್ನ ಮುಂಚಿತವಾಗಿ ನಾಯಕತ್ವ ಬದಲಾವಣೆಗಳು ತೀವ್ರಗೊಂಡಿವೆ.