ಇಷ್ಟೆಲ್ಲ ಮಾಡಿದರೂ ಸಿಗಲಿಲ್ಲ ಗೆಲುವು! ಈ ಕಾರಣಕ್ಕೆ ಡೆಲ್ಲಿ ವಿರುದ್ಧದ ಪಂದ್ಯದಿಂದ ಹೊರಗುಳಿದ ಕ್ಯಾಪ್ಟನ್​ ಹಾರ್ದಿಕ್​

ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ​
ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ​
Published on

ಪ್ರಮುಖ ಮುಖ್ಯಾಂಶಗಳು

  • ಡೆಲ್ಲಿ ಕ್ಯಾಪಿಟಲ್ಸ್​ಗೆ 6 ವಿಕೆಟ್​ಗಳ ಗೆಲುವು
  • ಸೋತ ಮುಂಬೈ ಇಂಡಿಯನ್ಸ್​ಗೆ ಕಾಡಿತು ಹಾರ್ದಿಕ್​ ಅನುಪಸ್ಥಿತಿ
  • ಹಾರ್ದಿಕ್​ ಪಾಂಡ್ಯ ಅನುಪಸ್ಥಿತಿಯ ಅಸಲಿ ಕಾರಣ ಹೀಗಿದೆ
ನವದೆಹಲಿ: ಇಲ್ಲಿನ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್​ 19ನೇ ಪಂದ್ಯದಲ್ಲಿ ಅಕ್ಷರ್ ಪಟೇಲ್​ ಪಡೆಗೆ ರೋಚಕ ಗೆಲುವು ಒಲಿಯಿತು. 
ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್, 20 ಓವರ್​ಗೆ 6 ವಿಕೆಟ್​ ಕಳೆದುಕೊಂಡು 162 ರನ್ ಕಲೆಹಾಕಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್​ ಪರ ಸಮೀರ್​ ರಿಜ್ವಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 51 ಎಸೆತಕ್ಕೆ 91 ರನ್​ ಸಿಡಿಸಿದರು. ಇನ್ನು ಅವರಿಗೆ ಸಾಥ್​ ನೀಡಿದ ಪತ್ತುಮ್​ ನಿಸ್ಸಂಕಾ, 44 ರನ್​ ಬಾರಿಸಿದರು. 18.1 ಓವರ್​ಗೆ ಪಂದ್ಯವನ್ನು ಮುಗಿಸಿದ ಡೆಲ್ಲಿ ಪಡೆ 6 ವಿಕೆಟ್​ಗಳಿಂದ ಗೆದ್ದು ಬೀಗಿತು.  

ಮೈದಾನಕ್ಕಿಳಿಯಲಿಲ್ಲ ಕ್ಯಾಪ್ಟನ್​ ಪಾಂಡ್ಯ

ಈ ಪಂದ್ಯದ ಟಾಸ್​ಗೆ ಬರಬೇಕಿದ್ದ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ,  ತಮ್ಮ ಬದಲಿಗೆ ಸೂರ್ಯಕುಮಾರ್​ ಯಾದವ್​ರನ್ನು ಕಳುಹಿಸಿದರು. ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳಿಗೆ ಒಂದು ನಿಮಿಷ ಭಾರೀ ಗೊಂದಲಕ್ಕೆ ದೂಡಿತು.  ಹಾರ್ದಿಕ್ ಅನುಪಸ್ಥಿತಿಯಲ್ಲಿ, ತಂಡದಲ್ಲಿ ಒಂದಷ್ಟು ಬದಲಾವಣೆಗಳನ್ನು ತಂದ ಎಂಐ, ಪಾಂಡ್ಯ ಬದಲಿಗೆ ದೀಪಕ್ ಚಹಾರ್ ಅವರನ್ನು ಆಡಿಸಿತು. ಮತ್ತು ಟ್ರೆಂಟ್ ಬೌಲ್ಟ್ ಮತ್ತು ಅಲ್ಲಾ ಗಜನ್‌ಫರ್ ಬದಲಿಗೆ ಕಾರ್ಬಿನ್ ಬಾಷ್ ಮತ್ತು ಮಿಚೆಲ್ ಸ್ಯಾಂಟ್ನರ್​ಗೆ ಅವಕಾಶ ನೀಡಿತು. ಇಷ್ಟಾದರೂ ಮಾತ್ರ ಗೆಲುವು ಸಿಗಲಿಲ್ಲ. 

ಈ ಕಾರಣಕ್ಕೆ ಬರಲಿಲ್ಲ

ಡಿಸಿ ವಿರುದ್ಧದ ಪಂದ್ಯಕ್ಕೂ ಮೊದಲು ಪ್ರಕಟವಾದ ಪ್ಲೇಯಿಂಗ್ ಇಲೆವೆನ್​ನಲ್ಲಿ ಹಾರ್ದಿಕ್​ ಪಾಂಡ್ಯ ಹೆಸರು ಇರಲಿಲ್ಲ. ಇಲ್ಲೇ ಅನೇಕ ಅಭಿಮಾನಿಗಳಿಗೆ ಮಿಸ್​ ಹೊಡೆಯಲಾರಂಭಿಸಿತು. ಬಳಿಕ ಈ ಬಗ್ಗೆ ಮೈದಾನದಲ್ಲಿ ಸ್ಪಷ್ಟನೆ ನೀಡಿದ ಸೂರ್ಯಕುಮಾರ್ ಯಾದವ್​, ಪಾಂಡ್ಯಗೆ ಹುಷಾರಿಲ್ಲ. ಇಂದಿನ ಪಂದ್ಯಕ್ಕೆ ಆತ ಫಿಟ್​ ಆಗಿಲ್ಲ. ಹೀಗಾಗಿ, ಅವರ ಶೂ ಅನ್ನು ನಾನು ಧರಿಸಿರುವೆ ಎಂದು ಹೇಳಿದರು,(ಏಜೆನ್ಸೀಸ್).  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net