ಮೇ 2ರಂದು ಸಿಎಸ್ಕೆ ವಿರುದ್ಧ ಮುಂಬೈ ಪರ ಕೊನೆಯದಾಗಿ ಆಡಿರುವ ಹಾರ್ದಿಕ್ ಪಾಂಡ್ಯ, ಬೆನ್ನುನೋವಿನ ಸಮಸ್ಯೆಯಿಂದಾಗಿ ಕಳೆದ 3 ಪಂದ್ಯಗಳನ್ನು ತಪ್ಪಿಸಿಕೊಂಡಿದ್ದಾರೆ. ಮುಂಬೈ ಮೇ 20ಕ್ಕೆ ಕೆಕೆಆರ್ ವಿರುದ್ಧ ತನ್ನ ಮುಂದಿನ ಪಂದ್ಯವನ್ನು ಆಡಲಿದ್ದು, ಬಳಿಕ ಮೇ 24ರಂದು ರಾಜಸ್ಥಾನ ಎದುರು ತನ್ನ ಕೊನೇ ಲೀಗ್ ಪಂದ್ಯವನ್ನು ಆಡಲಿದೆ. ಈಗಾಗಲೆ ಪ್ಲೇಆಫ್ ರೇಸ್ನಿಂದ ಹೊರಬಿದ್ದಿರುವ ಮುಂಬೈಗೆ ಇದು ಟೂರ್ನಿಯ ಕೊನೆಯ ಪಂದ್ಯವಾಗಿರಲಿದೆ.