ಇಲ್ಲಿಯವರೆಗೆ ಆಡಿರುವ ಎಂಟು ಪಂದ್ಯಗಳಲ್ಲಿ 6ರಲ್ಲಿ ಎಂಐ ಸೋತಿದೆ. ಈ ಹಿಂದೆ, ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲುವಿನ ಕಿರೀಟ ತೊಡಿಸಿದ್ದ ಪಾಂಡ್ಯ, ಮುಂಬೈ ಇಂಡಿಯನ್ಸ್‌ಗೆ ಮರಳಿದ ಬೆನ್ನಲ್ಲೇ ನಾಯಕನ ಸ್ಥಾನ ಪಡೆದರು. ಆದರೆ, ಅಲ್ಲಿ ಮಾಡಿದ ಮ್ಯಾಜಿಕ್, ಇಲ್ಲಿ ಮಾಡಲು ಸಾಧ್ಯವಾಗಿಲ್ಲ. ರೋಹಿತ್ ಶರ್ಮಾ ಅವರಿಂದ ನಾಯಕತ್ವ ಕಸಿದುಕೊಂಡ ಎಂಬ ಅಭಿಮಾನಿಗಳ ಟೀಕೆಗಳನ್ನು ಇಂದಿಗೂ ಎದುರಿಸುತ್ತಿರುವ ಹಾರ್ದಿಕ್, ತಮ್ಮ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವುದು ಬಹುತೇಕ ಅನುಮಾನ ಎಂಬ ಮಾತುಗಳು ಕೇಳಿಬರುತ್ತಿವೆ.