ಗೆಳತಿ ಮಹಿಕಾಗೆ ಐಷಾರಾಮಿ ಕಾರು ಗಿಫ್ಟ್​ ನೀಡಿದ ಹಾರ್ದಿಕ್​ ಪಾಂಡ್ಯ!

ಗೆಳತಿ ಮಹಿಕಾಗೆ ಐಷಾರಾಮಿ ಕಾರು ಗಿಫ್ಟ್​ ನೀಡಿದ ಹಾರ್ದಿಕ್​ ಪಾಂಡ್ಯ!
ಗೆಳತಿ ಮಹಿಕಾಗೆ ಐಷಾರಾಮಿ ಕಾರು ಗಿಫ್ಟ್​ ನೀಡಿದ ಹಾರ್ದಿಕ್​ ಪಾಂಡ್ಯ!
Published on
ಮುಂಬೈ: ಟೀಮ್​ ಇಂಡಿಯಾ (Team India) ಆಲ್ರೌಂಡರ್​ ಮತ್ತು ಮುಂಬೈ ಇಂಡಿಯನ್ಸ್​ ನಾಯಕ ಹಾರ್ದಿಕ್​ ಪಾಂಡ್ಯ (Hardik Pandya) ತನ್ನ ಗೆಳತಿ ಮಹಿಕಾ ಶರ್ಮಗೆ 1.7 ಕೋಟಿ ರೂ. ಮೌಲ್ಯದ ಮರ್ಸಿಡೀಸ್​ ಬೆಂಜ್​ ವಿ-ಕ್ಲಾಸ್​ (Mercedes-Benz V-Class) ಕಾರು ಉಡುಗೊರೆ ನೀಡಿದ್ದಾರೆ. ಅವರು ಕೆಲ ದಿನಗಳ ಹಿಂದೆಯಷ್ಟೇ ಮಾಜಿ ಪತ್ನಿ ಮತ್ತು ಪುತ್ರನಿಗೆ 4 ಕೋಟಿ ರೂ. ಮೌಲ್ಯದ ಲ್ಯಾಂಡ್​ ರೋವರ್​ ಕಾರು ಉಡುಗೊರೆ ನೀಡಿದ್ದರು. ಅಲ್ಲದೆ ಇತ್ತೀಚೆಗಷ್ಟೇ 12 ಕೋಟಿ ರೂ. ಮೌಲ್ಯದ ಫೆರಾರಿ ಕಾರನ್ನೂ ಖರೀದಿಸಿದ್ದರು.
ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್​ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್​ ಪಾಂಡ್ಯ ಇತ್ತೀಚೆಗೆ ವಾಂಖೆಡೆ ಕ್ರೀಡಾಂಗಣದ ಗ್ರೌಂಡ್ಸ್​ಮನ್​ಗೆ 10 ಲಕ್ಷ ರೂ. ಮೊತ್ತದ ಚೆಕ್​ ಉಡುಗೊರೆ ನೀಡಿ ಕೂಡ ಸುದ್ದಿಯಾಗಿದ್ದರು. ಕಳೆದ ಟಿ20 ವಿಶ್ವಕಪ್​ ವೇಳೆ ಈ ಸಿಬ್ಬಂದಿ ಹಾರ್ದಿಕ್​ಗೆ ರಾತ್ರಿಯ ವೇಳೆಯೂ ಹೆಚ್ಚುವರಿ ಅವಧಿಯ ಅಭ್ಯಾಸಕ್ಕೆ ನೆರವಾಗಿದ್ದರಿಂದ ಈ ಸಹಾಯ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net