ಟೀಮ್ ಇಂಡಿಯಾದ ಪವರ್ ಹಿಟ್ಟರ್, ಅತ್ಯುತ್ತಮ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಎಂಬ ವಿಷಯ ಕ್ರಿಕೆಟ್ ಪ್ರೇಮಿಗಳಿಗೆ ಗೊತ್ತೇ ಇದೆ. ಅಭಿಮಾನಿಗಳ ಆ ಭರವಸೆ, ನಿರೀಕ್ಷೆಗಳನ್ನು ನಿನ್ನೆಯ ಪಂದ್ಯದಲ್ಲಿ ಪಾಂಡ್ಯ ಸಾಬೀತುಪಡಿಸಿದರು. 25 ಎಸೆತದಲ್ಲಿ ಅಜೇಯ 63 ರನ್ ಸಿಡಿಸಿದ ಹಾರ್ದಿಕ್, ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸುವಲ್ಲಿ ಭರ್ಜರಿ ಕೊಡುಗೆ ನೀಡಿದರು. ಇದಕ್ಕೂ ಮೊದಲು ಕೇವಲ 16 ಎಸೆತಕ್ಕೆ 50 ರನ್ ಬಾರಿಸಿದ ಅವರು, ಸ್ಟೇಡಿಯಂನಲ್ಲಿ ಕುಳಿತಿದ್ದ ಅವರ ಪ್ರೇಯಸಿ ಎಂದೇ ಕರೆಯಲ್ಪಡುವ ಗೆಳತಿ ಮಹಿಕಾ ಶರ್ಮಾ ಫ್ಲೈಯಿಂಗ್ ಕಿಸ್ ಕೊಟ್ಟರು. ಇದು ಪಾಂಡ್ಯ ಅವರ ಅರ್ಧಶತಕದ ಸಂಭ್ರಮದ ಸಮಯದಲ್ಲಿ ಸೆರೆಯಾದ ದೃಶ್ಯ ಎಂಬುದು ಗಮನಾರ್ಹ.