ಮುಂಬೈ ತಂಡಕ್ಕೆ ತಲೆನೋವಾದ 'ದಕ್ಷಿಣ ಆಫ್ರಿಕಾ' ಕಂಟಕ: ಭಜ್ಜಿ ಪ್ರಕಾರ ಈ ಆಟಗಾರನಿಗೆ ಬೆಂಚ್ ಗ್ಯಾರಂಟಿ! IPL 2026

ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್  IPL 2026 (ಚಿತ್ರ X)
ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ IPL 2026 (ಚಿತ್ರ X)
Published on
IPL 2026: ಐಪಿಲ್​ 2026 ನೇ 19 ನೇ ಆವೃತ್ತಿಯು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ತಂಡಗಳು ಆರಂಭಿಕ ಪಂದ್ಯಗಳಿಗಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ನಡುವೆ, ಕ್ರಿಕೆಟ್ ಪಂಡಿತರು ಮತ್ತು ಮಾಜಿ ಆಟಗಾರರು ಪ್ರತಿಯೊಂದು ತಂಡಗಳ ಬಲಾಬಲಗಳನ್ನು ವಿಶ್ಲೇಷಿಸುವಲ್ಲಿ ನಿರತರಾಗಿದ್ದಾರೆ.
ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಇಂಡಿಯನ್ಸ್ (MI) ತಂಡದ ಬಗ್ಗೆ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಮಾತನಾಡುತ್ತಾ, ಆಟಗಾರರಾದ ಕ್ವಿಂಟನ್ ಡಿ ಕಾಕ್ ಮತ್ತು ರಯಾನ್ ರಿಕಲ್ಟನ್ ಅವರನ್ನು ಒಂದೇ ಪಂದ್ಯದಲ್ಲಿ ಕಣಕ್ಕಿಳಿಸುವುದು ತಂಡಕ್ಕೆ ಕಷ್ಟವಾಗಬಹುದು ಎಂದು ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.
ಗಮನಾರ್ಹವಾಗಿ, ಕಳೆದ ಸೀಸನ್​ನಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ರಿಕಲ್ಟನ್ ಇನ್ನಿಂಗ್ಸ್ ಆರಂಭಿಸಿದರು. 14 ಇನ್ನಿಂಗ್ಸ್​ನಲ್ಲಿ 150.97 ಸ್ಟ್ರೈಕ್ ರೇಟ್‌ನಲ್ಲಿ 388 ರನ್ ಗಳಿಸಿದರು. ಇವರಿಗೆ ಇದು ಮೊದಲ ಐಪಿಎಲ್​ ಪಂದ್ಯವಾದರೂ ಅವರು ತೋರುತ್ತಿರುವ ಸ್ಥಿರತೆ ಗಮನಾರ್ಹವಾಗಿದೆ. ಆದರೆ, ಡಿ ಕಾಕ್​ ಕೊನೆಯ ಎಂಟು ಪಂದ್ಯಗಳಲ್ಲಿ ಕೇವಲ 152 ರನ್ ಮತ್ತು 129.91 ರ ಸ್ಟ್ರೈಕ್ ರೇಟ್ ಗಳಿಸುವ ಮೂಲಕ ಕಳಪೆ ಪ್ರದರ್ಶನ ತೋರಿಸುತ್ತಿದ್ದಾರೆ ಎಂದು ಅಭಿಪ್ರಾಯ ಸೂಚಿಸಿದರು.
ಆದಾಗ್ಯೂ, 2019 ರಿಂದ 2021 ರವರೆಗಿನ ಡಿ ಕಾಕ್​ ಮೂರು ವರ್ಷಗಳ ಅವಧಿಯಲ್ಲಿ ಮುಂಬೈ ಪರ ಆಡಿ 529 ಮತ್ತು 503 ಮತ್ತು 297 ರನ್‌ಗಳನ್ನು ಗಳಿಸಿದರು. ಈ ಪ್ರದರ್ಶನವು ಆ ಸೀಸನ್​ನಲ್ಲಿ ರಿಕಲ್ಟನ್‌ಗಿಂತ ಮೊದಲು ಡಿಕಾಕ್​ ಅವರನ್ನು ಆಯ್ಕೆ ಮಾಡಿಕೊಳ್ಳಲು ಸಹಾಯ ಮಾಡಿತು. ಆದರೆ ಈ ಇಬ್ಬರೂ ಆಟಗಾರರು ಆರಂಭಿಕ ಆಟಗಾರರಾಗಿರುವುದರಿಂದ ಈ ಪೈಪೋಟಿಯಲ್ಲಿ ರೋಹಿತ್​ ಶರ್ಮಾ ಕೂಡಾ ಇರುವುದರಿಂದ ದಕ್ಷಿಣ ಆಫ್ರಿಕನ್ನರಲ್ಲಿ ಒಬ್ಬರು ಮಾತ್ರ ತಂಡವನ್ನು ಆರಂಭಿಸುತ್ತಾರೆ ಎಂದು ಹರ್ಭಜನ್​ ಅಭಿಪ್ರಾಯ ಸೂಚಿಸಿದ್ದಾರೆ.
ಮುಂಬೈ ತಂಡವು ಕ್ವಿಂಟನ್ ಡಿ ಕಾಕ್ ಮತ್ತು ರಯಾನ್ ರಿಕಲ್ಟನ್ ಇಬ್ಬರನ್ನೂ ಒಟ್ಟಿಗೆ ಆಡುವ ಹನ್ನೊಂದರಲ್ಲಿ ಸೇರಿಸುತ್ತದೆ ಎಂದು ನಾನು ಭಾವಿಸುವುದಿಲ್ಲ. ಈ ಇಬ್ಬರಲ್ಲಿ ಒಬ್ಬರು ಮಾತ್ರ ಆರಂಭಿಕ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಏಕೆಂದರೆ, ತಂಡದಲ್ಲಿ ರೋಹಿತ್​ ಶರ್ಮಾ ಕೂಡಾ ಅಗ್ರ ಸ್ಥಾನದಲ್ಲಿದ್ದಾರೆ.
ರೋಹಿತ್​​ ಮುಖ್ಯ ಆರಂಭಿಕ ಆಟಗಾರರಾಗಿದ್ದರೆ, ಇನ್ನೊಂದು ಬದಿಯಲ್ಲಿ ರಯಾನ್ ರಿಕಲ್ಟನ್ ಅಥವಾ ಕ್ವಿಂಟನ್ ಡಿ ಕಾಕ್ ಅವರಿಗೆ ಸಾಥ್ ನೀಡುತ್ತಾರೆ. ನಂತರ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಆಡುತ್ತಾರೆ. ಹಾಗಾಗಿ ಡಿಕಾಕ್​ ಮತ್ತು ರಯಾನ್​ ರಿಕಲ್ಟನ್ ಒಂದೇ ಸಮಯದಲ್ಲಿ ಒಟ್ಟಿಗೆ ಆಡುವುದನ್ನು ನಾವು ನೋಡುವುದಿಲ್ಲ ಎಂದು ಭಾವಿಸುತ್ತೇನೆ ಎಂದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net