ಕಳೆದ ಕೋಲ್ಕತ ಟೆಸ್ಟ್ನಲ್ಲಿ ಮೊದಲ 2 ದಿನ ಮೇಲುಗೈ ಸಾಧಿಸಿದ್ದರೂ, ಮೂರನೇ ದಿನ ಮಾಡಿದ ಎಡವಟ್ಟಿನಿಂದಾಗಿ ಭಾರತ ತಂಡ ಪರಾಭವಗೊಂಡಿತ್ತು. ಪ್ರಮುಖವಾಗಿ ದ. ಆಫ್ರಿಕಾದ ಸ್ಪಿನ್ ದಾಳಿಯನ್ನು ಭಾರತೀಯ ಬ್ಯಾಟರ್ಗಳು ದಿಟ್ಟವಾಗಿ ಎದುರಿಸಬೇಕಾಗಿದೆ. ಗಿಲ್ ಗೈರು ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಎಡಗೈ ಬ್ಯಾಟರ್ಗಳ ಸಂಖ್ಯೆ ಹೆಚ್ಚಾಗಿರುವುದನ್ನೂ ಭಾರತ ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಕಳೆದ ವರ್ಷ ನ್ಯೂಜಿಲೆಂಡ್ ಎದುರು ತವರಿನಲ್ಲೇ ಟೆಸ್ಟ್ ಸರಣಿ ಸೋತಿದ್ದ ಭಾರತ, ಮತ್ತೊಮ್ಮೆ ಮುಗ್ಗರಿಸಿದರೆ 4ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ ಫೈನಲ್ಗೇರುವ ರೇಸ್ನಲ್ಲೂ ದೊಡ್ಡ ಹಿನ್ನಡೆಯಾಗಲಿದೆ.