ಅವಳಿ ಏಕದಿನ ವಿಶ್ವಕಪ್ ವಿಜೇತ ಹೇಡನ್ 273 ಅಂತಾರಾಷ್ಟ್ರೀಯ ಪಂದ್ಯಗಳ ಅನುಭವ ಹೊಂದಿದ್ದು, 15 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಸಿಎಸ್ಕೆ ಪರ 32 ಪಂದ್ಯ ಆಡಿದ್ದ ಹೇಡನ್ಗೆ ಐಪಿಎಲ್ನಲ್ಲಿ ಇದು ಮೊದಲ ಕೋಚಿಂಗ್ ಹುದ್ದೆಯಾಗಿದೆ.
54 ವರ್ಷದ ಅವರು, ಶುಭಮಾನ್ ಗಿಲ್ ಸಾರಥ್ಯದ ಗುಜರಾತ್ ತಂಡದಲ್ಲಿ ಮುಖ್ಯ ಕೋಚ್ ಆಶಿಶ್ ನೆಹ್ರಾಗೆ ನೆರವಾಗಲಿದ್ದಾರೆ. ಹೇಡನ್ ಈ ಹಿಂದೆ ಪಾಕಿಸ್ತಾನ ತಂಡಕ್ಕೂ ಬ್ಯಾಟಿಂಗ್ ಸಲಹೆಗಾರರಾಗಿದ್ದರು.