ಟೈಟನ್ಸ್​ ಲೆಕ್ಕಾಚಾರ ತಲೆಕೆಳಗಾಗಿಸಿದ ಕೊನೆಯ ಓವರ್​​! ರೋಚಕ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್​ | GT vs RR

GT vs RR
GT vs RR
Published on
GT vs RR​: ಇಂದು (ಏ.04) ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟನ್ಸ್ ನಡುವಿನ ಐಪಿಎಲ್ 19ನೇ ಆವೃತ್ತಿಯ ಪಂದ್ಯದಲ್ಲಿ ಆರ್​ಆರ್​ ರೋಚಕ ಜಯ ಸಾಧಿಸಿತು.
ಟಾಸ್​ ಗೆದ್ದ ರಾಜಸ್ಥಾನ ರಾಯಲ್ಸ್, ಜಿಟಿಗೆ ಬೌಲಿಂಗ್ ಮಾಡುವಂತೆ ತಿಳಿಸಿತು. ಅಂತೆಯೇ, ಮೊದಲು ಬ್ಯಾಟ್​ ಮಾಡಿದ ಆರ್​ಆರ್​ಗೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿಯಿಂದ ಉತ್ತಮ ಓಪನಿಂಗ್ ಸಿಕ್ಕಿತು. ಸ್ಫೋಟಕ ಆರಂಭ ನೀಡಿದ್ದೇ ಆದರೂ ವೈಭವ್ ಕೇವಲ 31 ರನ್​ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.
ಕ್ರೀಸ್​ನಲ್ಲಿ ಗಟ್ಟಿಯಾಗಿ ನಿಂತ ಜೈಸ್ವಾಲ್​, ಆಕರ್ಷಕ ಅರ್ಧಶತಕ (55 ರನ್​, 36 ಎಸೆತ) ಬಾರಿಸಿದರು. ಅವರ ಬಳಿಕ ಬಂದ ಧ್ರುವ್​ ಜ್ಯುರೆಲ್​ (75) ಅವರ ಸ್ಫೋಟಕ ಇನ್ನಿಂಗ್ಸ್​ ತಂಡದ ಒಟ್ಟು ಮೊತ್ತವನ್ನು 200ರ ಗಡಿದಾಟಿಸುವಲ್ಲಿ ದೊಡ್ಡ ಕೊಡುಗೆ ನೀಡಿತು. ಅಂತಿಮವಾಗಿ, 20 ಓವರ್​ಗೆ 6 ವಿಕೆಟ್​ ನಷ್ಟಕ್ಕೆ ಆರ್​ಆರ್ 210 ರನ್​ ಗಳಿಸಿತು. ಈ ಬೃಹತ್​ ಗುರಿಯನ್ನು ಬೆನ್ನತ್ತಿದ ಜಿಟಿಗೆ ಸಖತ್​ ಸ್ಟಾರ್ಟ್​ ಸಿಕ್ಕಿತು.
ಸಾಯಿ ಸುದರ್ಶನ್​ ಅವರಿಂದ 73 ರನ್​ಗಳ ಸ್ಫೋಟಕ ಇನ್ನಿಂಗ್ಸ್​ ಬಂದಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟರ್​ಗಳು ಕೂಡ ತಂಡದ ಗೆಲುವಿಗೆ ಶ್ರಮಿಸಲಿಲ್ಲ. ​ಕೊನೆಯ ಓವರ್​ವರೆಗೂ ಹೋದ ಪಂದ್ಯದಲ್ಲಿ ಗೆಲುವಿಗೆ ಇನ್ನೂ ಅವಕಾಶವಿತ್ತು. ಆದರೆ, ರಶೀದ್​ ಖಾನ್​ ಅವರ ಸಿಕ್ಸ್​ ಬಾರಿಸುವ ಪ್ರಯತ್ನ ವ್ಯರ್ಥವಾಯಿತು. ರಾಜಸ್ಥಾನ ಪರ ಅದ್ಭುತ ಕೊನೆಯ ಓವರ್​ ಮಾಡಿದ ತುಶಾರ್ ದೇಶಪಾಂಡೆ, ತಂಡದ ಗೆಲುವಿಗೆ ಪ್ರಮುಖ ಕಾರಣರಾದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net