GT vs DC: ನಿನ್ನೆ (ಏ.08) ದೆಹಲಿಯ ಅರುಣ್ ಜೆಟ್ಲಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ರೋಚಕ ಪಂದ್ಯದಲ್ಲಿ ಜಿಟಿ 1 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತು. ಕಡೆಯ ಓವರ್ವರೆಗೂ ತಲುಪಿದ ಈ ಪಂದ್ಯದಲ್ಲಿ, ಅಂತಿಮವಾಗಿ ಗಿಲ್ ಪಡೆ ಗೆದ್ದು ಬೀಗಿತು. ಒಂದೆಡೆ ಗೆಲುವಿನ ಸಂಭ್ರಮವಿದ್ದರೂ, ದಂಡದ ಹೊರೆ ತಮ್ಮ ನಾಯಕ ಶುಭಮನ್ ಗಿಲ್ ಮೇಲೆ ಬಿದ್ದಿದ್ದು, ಇಡೀ ತಂಡಕ್ಕೆ ಬಿಗ್ ಶಾಕ್ ನೀಡಿದೆ.