ಸೆಟ್​ ಆಯ್ತು ಸೂಪರ್​ 8 ಸ್ಟೇಜ್​: ಯಾರ ನಡುವೆ? ಯಾವ ದಿನ? ಎಲ್ಲಿ ನಡೆಯಲಿವೆ ಪಂದ್ಯಗಳು? ಇಲ್ಲಿದೆ ಡೀಟೇಲ್ಸ್​...T20 World Cup 2026

ಸೂಪರ್​ 8 ಸ್ಟೇಜ್ ವೇಳಾಪಟ್ಟಿ ( T20 World Cup 2026 )​
ಸೂಪರ್​ 8 ಸ್ಟೇಜ್ ವೇಳಾಪಟ್ಟಿ ( T20 World Cup 2026 )​
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್-2026ರ ಮೆಗಾ ಟೂರ್ನಿಯ ಲೀಗ್ ಹಂತವು ಅಂತಿಮ ಹಂತವನ್ನು ತಲುಪಿದೆ
  • ಆಸ್ಟ್ರೇಲಿಯಾವನ್ನು ಹೊರತುಪಡಿಸಿ ಎಲ್ಲಾ ಅಗ್ರ ತಂಡಗಳು ಸೂಪರ್-8 ಹಂತವನ್ನು ತಲುಪಿವೆ
  • ಗ್ರೂಪ್​ ಹಂತ ಮುಗಿಯುತ್ತಿರುವ ಬೆನ್ನಲ್ಲೇ ಸೂಪರ್​ 8ರ ವೇಳಾಪಟ್ಟಿ ಕೂ ಪ್ರಕಟವಾಗಿದೆ
T20 World Cup 2026 : ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜನೆ ಮಾಡಿರುವ ಟಿ20 ವಿಶ್ವಕಪ್-2026ರ ಮೆಗಾ ಟೂರ್ನಿಯ ಲೀಗ್ ಹಂತವು ಅಂತಿಮ ಹಂತವನ್ನು ತಲುಪಿದೆ. ಬರೋಬ್ಬರಿ ಇಪ್ಪತ್ತು ತಂಡಗಳೊಂದಿಗೆ ಆರಂಭವಾದ ಈ ಐಸಿಸಿ ಈವೆಂಟ್‌ನಲ್ಲಿ, ಬಲಿಷ್ಠ ಆಸ್ಟ್ರೇಲಿಯಾವನ್ನು ಹೊರತುಪಡಿಸಿ ಎಲ್ಲಾ ಅಗ್ರ ತಂಡಗಳು ಸೂಪರ್-8 ಹಂತವನ್ನು ತಲುಪಿವೆ.

ಸೂಪರ್-8 ತಲುಪಿದ ತಂಡಗಳು

ಎ ಗುಂಪಿನಿಂದ ಭಾರತ ಮತ್ತು ಪಾಕಿಸ್ತಾನ, ಬಿ ಗುಂಪಿನಿಂದ ಶ್ರೀಲಂಕಾ ಮತ್ತು ಜಿಂಬಾಬ್ವೆ, ಸಿ ಗುಂಪಿನಿಂದ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್, ಡಿ ಗುಂಪಿನಿಂದ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ಸೂಪರ್ 8 ಸ್ಥಾನಗಳನ್ನು ಪಡೆದುಕೊಂಡಿವೆ. 

ಲೀಗ್​ ಹಂತಕ್ಕೆ ಇಂದು ತೆರೆ

ಟಿ20 ವಿಶ್ವಕಪ್​ನ ಲೀಗ್​ ಹಂತ ಇಂದು ಕೊನೆಯಾಗಲಿದೆ. ಇದಕ್ಕೂ ಮುಂಚೆ ಬುಧವಾರ, ನಮೀಬಿಯಾ ವಿರುದ್ಧ ಪಾಕಿಸ್ತಾನ ಭರ್ಜರಿ ಗೆಲುವು ದಾಖಲಿಸುವ ಮೂಲಕ ಸೂಪರ್-8 ಸ್ಥಾನವನ್ನು ಖಚಿತಪಡಿಸಿಕೊಂಡಿತು.  ಇಂದು ಗ್ರೂಪ್​ ಹಂತದ ಕೊನೆಯ ದಿನ ವೆಸ್ಟ್ ಇಂಡೀಸ್ vs ಇಟಲಿ, ಶ್ರೀಲಂಕಾ vs ಜಿಂಬಾಬ್ವೆ ಮತ್ತು ಅಫ್ಘಾನಿಸ್ತಾನ vs ಕೆನಡಾ ನಡುವೆ ಇಂದು ನಾಮಮಾತ್ರ ಪಂದ್ಯಗಳು ನಡೆಯಲಿವೆ.

ಸೂಪರ್​ 8ರ ಗ್ರೂಪ್​ ವಿವರ

* ಗ್ರೂಪ್​-1: ಭಾರತ, ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ.
* ಗ್ರೂಪ್​​-2: ಇಂಗ್ಲೆಂಡ್, ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾ.

ಸೂಪರ್-8 ಹಂತದ ವೇಳಾಪಟ್ಟಿ

* ಫೆಬ್ರವರಿ 21, ಶನಿವಾರ: ನ್ಯೂಜಿಲೆಂಡ್ vs ಪಾಕಿಸ್ತಾನ, ರಾತ್ರಿ 7 ಗಂಟೆ, ಆರ್​. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ (ಶ್ರೀಲಂಕಾ)
* ಫೆಬ್ರವರಿ 22, ಭಾನುವಾರ: ಶ್ರೀಲಂಕಾ vs ಇಂಗ್ಲೆಂಡ್, ಮಧ್ಯಾಹ್ನ 3 ಗಂಟೆ, ಪಲ್ಲೆಕೇಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ, ಕ್ಯಾಂಡಿ (ಶ್ರೀಲಂಕಾ)
* ಫೆಬ್ರವರಿ 22, ಭಾನುವಾರ: ಭಾರತ vs ದಕ್ಷಿಣ ಆಫ್ರಿಕಾ, ರಾತ್ರಿ 7 ಗಂಟೆ, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ (ಭಾರತ)
* ಫೆಬ್ರವರಿ 23, ಸೋಮವಾರ: ವೆಸ್ಟ್ ಇಂಡೀಸ್ vs ಜಿಂಬಾಬ್ವೆ, ರಾತ್ರಿ 7 ಗಂಟೆ, ವಾಂಖೆಡೆ ಸ್ಟೇಡಿಯಂ, ಮುಂಬೈ (ಭಾರತ)
* ಫೆಬ್ರವರಿ 24, ಮಂಗಳವಾರ: ಇಂಗ್ಲೆಂಡ್ vs ಪಾಕಿಸ್ತಾನ, ರಾತ್ರಿ 7 ಗಂಟೆ, ಪಲ್ಲೆಕೇಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ, ಕ್ಯಾಂಡಿ (ಶ್ರೀಲಂಕಾ)
* ಫೆಬ್ರವರಿ 25, ಬುಧವಾರ: ಶ್ರೀಲಂಕಾ vs ನ್ಯೂಜಿಲೆಂಡ್, ರಾತ್ರಿ 7 ಗಂಟೆ, ಆರ್​. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ (ಶ್ರೀಲಂಕಾ)
* ಫೆಬ್ರವರಿ 26, ಗುರುವಾರ: ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್, ಮಧ್ಯಾಹ್ನ 3 ಗಂಟೆ, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ (ಭಾರತ)
* ಫೆಬ್ರವರಿ 26, ಗುರುವಾರ: ಭಾರತ vs ಜಿಂಬಾಬ್ವೆ, ರಾತ್ರಿ 7 ಗಂಟೆ, ಚಿದಂಬರಂ ಸ್ಟೇಡಿಯಂ, ಚೆನ್ನೈ (ಭಾರತ)
* ಫೆಬ್ರವರಿ 27, ಶುಕ್ರವಾರ: ಇಂಗ್ಲೆಂಡ್​ vs ನ್ಯೂಜಿಲೆಂಡ್​, ರಾತ್ರಿ 7 ಗಂಟೆ, ಆರ್​. ಪ್ರೇಮದಾಸ ಸ್ಟೇಡಿಯಂ, ಕೊಲಂಬೊ (ಶ್ರೀಲಂಕಾ) 
* ಫೆಬ್ರವರಿ 28, ಶನಿವಾರ: ಶ್ರೀಲಂಕಾ vs ಪಾಕಿಸ್ತಾನ, ರಾತ್ರಿ 7 ಗಂಟೆ, ಪಲ್ಲೆಕೇಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂ, ಕ್ಯಾಂಡಿ (ಶ್ರೀಲಂಕಾ)
* ಮಾರ್ಚ್ 1, ಭಾನುವಾರ: ದಕ್ಷಿಣ ಆಫ್ರಿಕಾ vs ಜಿಂಬಾಬ್ವೆ ಮಧ್ಯಾಹ್ನ 3 ಗಂಟೆ, ಅರುಣ್​ ಜೆಟ್ಲಿ ಸ್ಟೇಡಿಯಂ, ದೆಹಲಿ (ಭಾರತ) 
* ಮಾರ್ಚ್​ 1, ಭಾನುವಾರ: ಭಾರತ vs ವೆಸ್ಟ್ ಇಂಡೀಸ್, ರಾತ್ರಿ 7 ಗಂಟೆ, ಈಡನ್​ ಗಾರ್ಡನ್​ ಸ್ಟೇಡಿಯಂ, ಕೋಲ್ಕತ (ಭಾರತ)
* ಮಾರ್ಚ್​ 4, ಬುಧವಾರ: ಮೊದಲ ಸೆಮಿಫೈನಲ್, ರಾತ್ರಿ 7 ಗಂಟೆ, ಕೋಲ್ಕತ್ತಾ ಅಥವಾ ಕೊಲಂಬೊ
* ಮಾರ್ಚ್​ 5, ಗುರುವಾರ: ಎರಡನೇ ಸೆಮಿಫೈನಲ್​, ರಾತ್ರಿ 7 ಗಂಟೆ, ವಾಂಖೆಡೆ ಸ್ಟೇಡಿಯಂ, ಮುಂಬೈ (ಭಾರತ)
* ಮಾರ್ಚ್​ 8, ಭಾನುವಾರ: ಫೈನಲ್​ ಪಂದ್ಯ, ರಾತ್ರಿ 7 ಗಂಟೆ, ಅಹಮದಾಬಾದ್​ ಅಥವಾ ಕೊಲಂಬೊ 
ಗಮನಿಸಿ: ಪಾಕಿಸ್ತಾನ ಸೆಮಿಫೈನಲ್ ಮತ್ತು ಫೈನಲ್ ತಲುಪಿದರೆ, ಪಂದ್ಯಗಳು ಶ್ರೀಲಂಕಾದ ಕೊಲಂಬೊದಲ್ಲಿ ನಡೆಯುತ್ತವೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net