ದಕ್ಷಿಣ ಆಫ್ರಿಕಾದ ಈ ಮೂವರು ತಾರೆಯರು ಒಂದು ಒಕ್ಕೂಟವನ್ನು ರಚಿಸಿಕೊಂಡು ತಂಡದ ಮಾಲೀಕತ್ವ ವಹಿಸಿಕೊಂಡಿದ್ದು, ಮಧುಕರ್ ಶ್ರೀ ಅವರು ಮ್ಯಾನೇಜಿಂಗ್ ಪಾರ್ಟ್ ನರ್ ಆಗಿ ಈ ತಂಡವನ್ನು ಸೇರಿಕೊಂಡಿದ್ದಾರೆ. ಐಸಿಸಿ ಮಾನ್ಯತೆ ಪಡೆದ ಯುರೋಪಿನ ಮೊದಲ ಅಧಿಕೃತ ಟಿ20 ಲೀಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಟಿಪಿಎಲ್, ಈ ಹಿರಿಯ ಆಟಗಾರರ ಪ್ರವೇಶದೊಂದಿಗೆ ಭಾರಿ ಕುತೂಹಲ ಮೂಡಿಸಿದೆ. ಯುರೋಪಿಯನ್ ಟಿ20 ಲೀಗ್ ನ ಚೊಚ್ಛಲ ಸೀಸನ್ ಆಗಸ್ಟ್ 26 ರಿಂದ ಸೆಪ್ಟೆಂಬರ್ 20, 2026 ರವರೆಗೆ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ ರೊಟರ್ ಡ್ಯಾಮ್ ತಂಡವೂ ಸೇರಿದಂತೆ ಗ್ಲ್ಯಾಸ್ಗೋ, ಆಮ್ ಸ್ಟರ್ ಡ್ಯಾಮ್, ಎಡಿನ್ ಬರ್ಗ್, ಡಬ್ಲಿನ್ ಮತ್ತು ಬೆಲ್ ಫಾಸ್ಟ್ ಎಂಬ ಆರು ನಗರಗಳ ತಂಡಗಳು ಕಣಕ್ಕಿಳಿಯಲಿವೆ. ಇದು ಯುರೋಪಿನ ಕ್ರೀಡಾ ಇತಿಹಾಸದಲ್ಲಿ ಒಂದು ಮಹತ್ವದ ತಿರುವು ಎಂದು ಪರಿಗಣಿಸಲಾಗಿದೆ.