ಆತನೂ ಮನುಷ್ಯನೇ ಅಲ್ವಾ? ಟಿ20 ವಿಶ್ವಕಪ್​ ಫೈನಲ್​ಗೂ ಮುನ್ನವೇ ಬುಮ್ರಾಗೆ ವಾರ್ನಿಂಗ್! ಕಿವೀಸ್​ ಆಟಗಾರ ಹೇಳಿದ್ದಿಷ್ಟು... | IND vs NZ Final

ಜಸ್ಪ್ರಿತ್ ಬುಮ್ರಾ(ಎಡ), ಗ್ಲೆನ್​ ಫಿಲಿಪ್ಸ್​ (ಬಲ)
ಜಸ್ಪ್ರಿತ್ ಬುಮ್ರಾ(ಎಡ), ಗ್ಲೆನ್​ ಫಿಲಿಪ್ಸ್​ (ಬಲ)
Published on

ಪ್ರಮುಖ ಮುಖ್ಯಾಂಶಗಳು

  • ಟೀಮ್ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ
  • ಭಾನುವಾರ (ಮಾ.08) ಅಹಮದಾಬಾದ್​ ಸ್ಟೇಡಿಯಂನಲ್ಲಿ ಫೈನಲ್​ ಪಂದ್ಯ
  • ಭಾರತ ವಿರುದ್ಧದ ಫೈನಲ್​ಗೂ ಮುನ್ನವೇ ಗ್ಲೆನ್​ ಫಿಲಿಪ್ಸ್ ಅಚ್ಚರಿ ಹೇಳಿಕೆ
  • ಟೀಮ್ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾಗೆ ವಾರ್ನಿಂಗ್
IND vs NZ Final: ಇದೇ ಭಾನುವಾರ (ಮಾ.06) ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ಫೈನಲ್​ ಪಂದ್ಯಕ್ಕೆ ಭಾರತ ಮತ್ತು ನ್ಯೂಜಿಲೆಂಡ್​ ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಈ ಪಂದ್ಯಕ್ಕಾಗಿ ಬಹಳ ಕಾತರದಿಂದ ಕಾಯುತ್ತಿರುವ ಕ್ರಿಕೆಟ್​ ಪ್ರೇಮಿಗಳು ಪಿಚ್​ ರಿಪೋರ್ಟ್​, ಎರಡೂ ತಂಡದ ನಾಯಕರ ಹೇಳಿಕೆಗಳು, ತಂಡದಲ್ಲಿನ ಬದಲಾವಣೆಗಳ ಬಗ್ಗೆ ತಿಳಿಯಲು ಸಾಕಷ್ಟು ಕುತೂಹಲವಿರುತ್ತದೆ. ಅಂತೆಯೇ, ಕಿವೀಸ್​ ಆಟಗಾರ ಗ್ಲೇನ್​ ಫಿಲಿಪ್ಸ್​ ಆಡಿರುವ ಮಾತುಗಳು ಸದ್ಯ ನೆಟ್ಟಿಗರ ಹುಬ್ಬೇರಿಸಿದೆ.
ಅಭ್ಯಾಸದ​ ವೇಳೆ ಮಾತನಾಡಿ, ಭಾರತದ ಜನಸಂಖ್ಯೆ ಈಗ 1.4 ಬಿಲಿಯನ್ ಮೀರಿದೆ. ಇದು ಆತಿಥೇಯ ತಂಡಕ್ಕೆ ಒಳ್ಳೆಯ ಪ್ರತಿಭೆಗಳ ಆಯ್ಕೆಗೆ ದಾರಿ ಮಾಡಿಕೊಟ್ಟಿದೆ ಎಂಬುದನ್ನು ಫಿಲಿಪ್ಸ್ ಗಮನಿಸಿದರು. ಟಿ20 ವಿಶ್ವಕಪ್‌ನಲ್ಲಿ ಮೂರು ಉತ್ತಮ ತಂಡಗಳನ್ನು ಅವರು ಸುಲಭವಾಗಿ ಆಡಿಸಬಹುದು. ಅದೇ ನ್ಯೂಜಿಲೆಂಡ್​ ಒಂದು ಚಿಕ್ಕ ದೇಶವಾದ ಕಾರಣ, ನಮಗೆ ಆ ಮಟ್ಟಿಗಿನ ಅವಕಾಶಗಳಿಲ್ಲ ಎಂದರು.
"ನಮ್ಮ ದೇಶದಲ್ಲಿ ಭಾರತದಂತೆ ಆಯ್ಕೆ ಮಾಡಲು ಹೆಚ್ಚಿನ ಆಟಗಾರರು ಇಲ್ಲ ಎಂಬುದು ಸ್ಪಷ್ಟ ಎಂದರು. ಇದೇ ವೇಳೆ, ಟೀಮ್ ಇಂಡಿಯಾದ ಬೌಲಿಂಗ್​ ಸ್ಪೆಷಲಿಸ್ಟ್​ ಜಸ್ಪ್ರಿತ್​ ಬುಮ್ರಾ ಕುರಿತು ಮಾತನಾಡಿದ ಫಿಲಿಪ್ಸ್​, ದ್ವಿಪಕ್ಷೀಯ ಸರಣಿಯಲ್ಲಿ ಅವರನ್ನು ಒಂದಷ್ಟು ಪಂದ್ಯಗಳಲ್ಲಿ ಎದುರಿಸಿದ್ದೇವೆ. ಒಬ್ಬ ಕ್ಲಾಸ್​ ಬೌಲರ್​ ಆತ. ಸಾಕಷ್ಟು ಏರಿಳಿತಗಳನ್ನು ಹೊಂದಿರುವ ಅತ್ಯುತ್ತಮ ವೇಗಿ. ಡೆತ್​ನಲ್ಲಿ ಬೌಲಿಂಗ್​ ಆಳಗಳು ಮೆಚ್ಚುವಂತದ್ದು. ಬುಮ್ರಾ ಬೌಲಿಂಗ್​ಗೆ ಇಂಗ್ಲೆಂಡ್​ ಬ್ಯಾಟರ್​ಗಳು ಕೂಡ ಉತ್ತಮ ಪ್ರದರ್ಶನವನ್ನೇ ನೀಡಿದರು ಎಂದರು.
ಆದರೆ, ಬುಮ್ರಾನೂ ಮನುಷ್ಯನೇ ಅಲ್ವಾ? ಆತನಿಗೆ ಬ್ಯಾಡ್​ ಡೇ ಅಂತ ಇರಲಿದೆ. ಅದರಲ್ಲೂ, ನಾವಿದ್ದೇವೆ ಅಂದಮೇಲೆ ಖಂಡಿತ ಇರುತ್ತದೆ. ಜಸ್ಪ್ರಿತ್​ಗೆ ಕೆಟ್ಟ ದಿನವನ್ನಾಗಿ ಮಾಡುವ ಮೂಲಕ ನಮ್ಮ ತಂಡ ಗುಡ್​ ಡೇ ನೋಡುತ್ತೇವೆ. ಅಕಸ್ಮಾತ್​, ಅವರೇನಾದರೂ ಉತ್ತಮ ಬೌಲಿಂಗ್ ದಾಳಿ ಮಾಡಿದ್ದೇ ಆದರೆ, ಕೆಲವು ಟ್ಯಾಕ್ಟಿಕ್ಸ್​ಗಳನ್ನು​ ಪ್ರಯೋಗಿಸಬೇಕಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net