ಒಂದಲ್ಲ, ಎರಡಲ್ಲ, ಮೂರಲ್ಲ... ಅರ್ಷ್​ದೀಪ್​ ಸಿಂಗ್ ಮಾಡಿದ ತಪ್ಪಿಗೆ ಸಿಡಿದೆದ್ದ ಗೌತಿ! ಇದು ಒಪ್ಪುವಂತದಲ್ಲ ಎಂದ ಗವಾಸ್ಕರ್​

ಗೌತಮ್​ ಗಂಭೀರ್​, ಅರ್ಷ್​ದೀಪ್​ ಸಿಂಗ್
ಗೌತಮ್​ ಗಂಭೀರ್​, ಅರ್ಷ್​ದೀಪ್​ ಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • 20 ಓವರ್ ಅಂತ್ಯಕ್ಕೆ 213 ರನ್​ ಬಾರಿಸಿದ ಸೌತ್ ಆಫ್ರಿಕಾ
  • ಬೌಲಿಂಗ್​ ವೇಳೆ ಎಡವಟ್ಟು ಮಾಡಿದ ಅರ್ಷ್​ದೀಪ್ ಸಿಂಗ್
  • ಒಂದಲ್ಲ, ಎರಡಲ್ಲ ಒಟ್ಟು 7 ವೈಡ್​ ಹಾಕಿದ ಬೌಲರ್​
ನವದೆಹಲಿ: ಇಂದು (ಡಿ.11) ಮುಲ್ಲನ್‌ಪುರದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ. 20 ಓವರ್​ ಅಂತ್ಯಕ್ಕೆ 213 ರನ್ ಕಲೆಹಾಕಿದ ಹರಿಣರ ಪಡೆ, ಟೀಮ್ ಇಂಡಿಯಾಗೆ ಬೃಹತ್ ರನ್​ಗಳ ಗುರಿಯನ್ನೇ ನೀಡಿದೆ. ಈ ಮಧ್ಯೆ, ಬೌಲಿಂಗ್​ನಲ್ಲಿ ತಂಡಕ್ಕೆ ಆಸರೆಯಾಗಬೇಕಿದ್ದ ಅರ್ಷ್​ದೀಪ್ ಸಿಂಗ್ ಮಾಡಿದ ತಪ್ಪಿಗೆ ಮೈದಾನದಲ್ಲೇ ಹೆಡ್​ ಕೋಚ್​ ಗೌತಮ್​ ಗಂಭೀರ್​ ಕೆಂಡಾಮಂಡಲಗೊಂಡಿದ್ದಾರೆ. 
ತಂಡದ ಪರ ಕ್ವಿಂಟನ್​ ಡಿ ಕಾಕ್ ಸ್ಫೋಟಕ ಪ್ರದರ್ಶನ ( 46 ಎಸೆತ​, 93 ರನ್​) ತಂಡದ ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. ಈ ಬೃಹತ್​ ರನ್​ಗೆ ಮತ್ತೊಂದು ಕೊಡುಗೆ ನೀಡಿದ್ದು ಟೀಮ್ ಇಂಡಿಯಾ ವೇಗಿ ಅರ್ಷ್​ದೀಪ್​ ಸಿಂಗ್ ಬೌಲಿಂಗ್​. ಹೌದು, 11ನೇ ಓವರ್​ನಲ್ಲಿ ಪದೇ ಪದೇ ವೈಡ್​ಗಳನ್ನು ಎಸೆದ ಅರ್ಷ್​ದೀಪ್​, ಒಂದಲ್ಲ, ಎರಡಲ್ಲ ಒಟ್ಟು 7 ವೈಡ್​ ಹಾಕಿದರು. ಇದು ಮೈದಾನದಲ್ಲಿ ಕುಳಿತಿದ್ದ ಕೋಚ್ ಗೌತಮ್ ಗಂಭೀರ್​ ತಾಳ್ಮೆಯನ್ನು ಕಳೆದುಕೊಳ್ಳುವಂತೆ ಮಾಡಿತು.  
ಅರ್ಷ್​ದೀಪ್​ ಸಿಂಗ್ ಮಾಡಿದ ವೈಡ್​ಗಳನ್ನು ನೋಡುತ್ತಿದ್ದಂತೆ ಸಿಡಿದೆದ್ದ ಗೌತಿ, ತಂಡಕ್ಕೆ ಚೇಸಿಂಗ್​ನಲ್ಲಿ ತೊಂದರೆ ಆಗುವಂತೆ ಮಾಡಿದ್ದಕ್ಕೆ ಕೋಪಗೊಂಡರು. ಈ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸರೆಯಾಗಿದೆ. ಮತ್ತೊಂದೆಡೆ, ಕಮೆಂಟೇಟರ್​ ಆಗಿ ಪಂದ್ಯ ವೀಕ್ಷಿಸುತ್ತಾ ಕುಳಿತಿದ್ದ ಸುನಿಲ್ ಗವಾಸ್ಕರ್ ಕೂಡ ಕಿಡಿಕಾರಿದರು. ಒಂದೇ ಲೈನ್​ನಲ್ಲಿ ನೀವು ಬೌಲಿಂಗ್​ ಮಾಡುವುದು ಸರಿಯಲ್ಲ. ಇದು ನಿಜಕ್ಕೂ ಒಪ್ಪುವಂತದ್ದಲ್ಲ ಎಂದು ತಮ್ಮ ಅಸಮಾಧಾನ ಹೊರಹಾಕಿದರು,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net