ಭಾರತ-ಅಫ್ಘಾನಿಸ್ತಾನ​ ಮೊದಲ ಟಿ20 ದಿನಾಂಕ ಬದಲು ಸಾಧ್ಯತೆ; ಗಣೇಶ ಚತುರ್ಥಿ ಹಬ್ಬ ಕಾರಣ!

ಭಾರತ-ಅಫ್ಘಾನಿಸ್ತಾನ​ ಮೊದಲ ಟಿ20 ದಿನಾಂಕ ಬದಲು ಸಾಧ್ಯತೆ; ಗಣೇಶ ಚತುರ್ಥಿ ಹಬ್ಬ ಕಾರಣ!
ಭಾರತ-ಅಫ್ಘಾನಿಸ್ತಾನ​ ಮೊದಲ ಟಿ20 ದಿನಾಂಕ ಬದಲು ಸಾಧ್ಯತೆ; ಗಣೇಶ ಚತುರ್ಥಿ ಹಬ್ಬ ಕಾರಣ!
Published on

ನವದೆಹಲಿ: ಭಾರತ ತಂಡ ಅಫ್ಘಾನಿಸ್ತಾನದ ಆತಿಥ್ಯದಲ್ಲಿ ನವದೆಹಲಿಯಲ್ಲಿ ಸೆಪ್ಟೆಂಬರ್​ 13, 15, 17ರಂದು ಆಡಲಿರುವ 3 ಪಂದ್ಯಗಳ ಟಿ20 ಸರಣಿಯ ವೇಳಪಟ್ಟಿಯಲ್ಲಿ (

India Vs Afghanistan T20I Series

) ಸಣ್ಣ ತಿದ್ದುಪಡಿ ಸಾಧ್ಯತೆ ಇದೆ.


ಸರಣಿಯ ಮೊದಲ ಪಂದ್ಯ ಸೆ.13ಕ್ಕೆ ಬದಲಾಗಿ ಗಣೇಶ ಚತುರ್ಥಿ ಹಬ್ಬದ ದಿನವಾದ ಸೆ. 14ಕ್ಕೆ ನಡೆಯುವ ನಿರೀಕ್ಷೆ ಇದೆ. ಹಬ್ಬದ ರಜಾದಿನ ಭಾರತದ ಕ್ರಿಕೆಟ್​ ಪ್ರೇಮಿಗಳಿಗೆ ಪಂದ್ಯ ವೀಸುವ ಅವಕಾಶ ಕಲ್ಪಿಸಲು ಆತಿಥೇಯ ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿ ಬಯಸಿದ್ದು, ಈ ಸಂಬಂಧ ಬಿಸಿಸಿಐಗೆ ಮನವಿಯನ್ನೂ ಸಲ್ಲಿಸಿದೆ ಎನ್ನಲಾಗಿದೆ. ಈ ಸರಣಿಯು ಉಭಯ ತಂಡಗಳಿಗೆ ಏಷ್ಯನ್​ ಗೇಮ್ಸ್​ ಸಿದ್ಧತೆಗೂ ನೆರವಾಗಲಿದೆ.

ಈ ಸರಣಿಯ ಟಿವಿ ಪ್ರಸಾರ ಹಕ್ಕನ್ನು ಈಗಾಗಲೆ ಸೋನಿ ಸ್ಪೋರ್ಟ್ಸ್​ ನೆಟ್​ವರ್ಕ್​ ಪಡೆದುಕೊಂಡಿದೆ. ಒಟಿಟಿ ಪ್ರಸಾರ ಹಕ್ಕು 'ಫ್ಯಾನ್​ಕೋಡ್'​ ಪಾಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಪಂದ್ಯಕ್ಕೆ ಹೆಚ್ಚಿನ ಜಾಹೀರಾತುಗಳು ಬರುವ ನಿರೀಕ್ಷೆಯೂ ಅಫ್ಘಾನಿಸ್ತಾನ ಕ್ರಿಕೆಟ್​ ಮಂಡಳಿಯದ್ದಾಗಿದೆ. ಈ ಮೂಲಕ ಸರಣಿಯಿಂದ ಭಾರಿ ಆದಾಯ ಗಳಿಸುವುದು ಅಫ್ಘಾನಿಸ್ತಾನದ ಗುರಿಯಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net