ಇದೇ ವೇಳೆ ಗಂಭೀರ್ ಅವರ ಪಕ್ಕದಲ್ಲೇ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರವೀಂದ್ರ ಜಡೇಜಾ ಮತ್ತು ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಕೂಡ ಇದ್ದರು. ಅಭಿಮಾನಿಗಳು ಕೂಗುವುದನ್ನು ಕೇಳಿ ಎಲ್ಲರು ಆಶ್ಚರ್ಯ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಗಂಭೀರ್ ಅವರನ್ನು ಟೀಕಿಸುವಾಗ ಕೊಹ್ಲಿ ಅವರು ಕ್ರೀಡಾಂಗಣದತ್ತ ನೋಡಿ, ಅಭಿಮಾನಿಗಳನ್ನು ಸುಮ್ಮನಿರುವಂತೆ ಕೈ ಸನ್ನೆ ಮಾಡುತ್ತಾರೆ. ಇದನ್ನು ನೋಡಿದ ಕೊಹ್ಲಿ ಅಭಿಮಾನಿಗಳು, ನಮ್ಮ ಬಳಿ ಇರೋದು ಒಂದೇ ಹೃದಯ ಅದನ್ನು ಎಷ್ಟು ಸಾರಿ ಅಂತ ಗೆಲ್ತೀರಾ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.