ಲಕ್ಷದಿಂದ ಕೋಟಿಗೆ! ಮಹಿಳಾ ಕ್ರಿಕೆಟಿಗರ ಬ್ರ್ಯಾಂಡ್​ ಮೌಲ್ಯ ಹೆಚ್ಚಳ

ಲಕ್ಷದಿಂದ ಕೋಟಿಗೆ! ಮಹಿಳಾ ಕ್ರಿಕೆಟಿಗರ ಬ್ರ್ಯಾಂಡ್​ ಮೌಲ್ಯ ಹೆಚ್ಚಳ
ಲಕ್ಷದಿಂದ ಕೋಟಿಗೆ! ಮಹಿಳಾ ಕ್ರಿಕೆಟಿಗರ ಬ್ರ್ಯಾಂಡ್​ ಮೌಲ್ಯ ಹೆಚ್ಚಳ
Published on

ನವದೆಹಲಿ: ಚೊಚ್ಚಲ ಏಕದಿನ ವಿಶ್ವಕಪ್​ ಗೆಲುವಿನೊಂದಿಗೆ ಭಾರತದ ಮಹಿಳಾ ಕ್ರಿಕೆಟಿಗರ ಬ್ರ್ಯಾಂಡ್​​ ಮೌಲ್ಯ (Brand Value) ಹೊಸ ಎತ್ತರಕ್ಕೆ ಏರಿಕೆಯಾಗಿದೆ. ಪ್ರಚಾರ ರಾಯಭಾರಿಯಾಗಿ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಲಕ್ಷ ರೂ. ಲೆಕ್ಕಾಚಾರದಲ್ಲಿ ಹಣ ಪಡೆಯುತ್ತಿದ್ದ ಆಟಗಾರ್ತಿಯರು ಇನ್ನು ಕೋಟಿ ರೂ. ಮೊತ್ತದ ಹಣ ಪಡೆದುಕೊಳ್ಳಲಿದ್ದಾರೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ವಿಶ್ವಕಪ್​ನಲ್ಲಿ ಮಿಂಚಿದ ಸ್ಮೃತಿ ಮಂದನಾ (Smrithi Mandhana), ಶೆಫಾಲಿ ವರ್ಮ ಮತ್ತು ಜೆಮೀಮಾ ರೋಡ್ರಿಗಸ್​ರಂಥ ಪ್ರಮುಖ ಆಟಗಾರ್ತಿಯರ ಬ್ರ್ಯಾಂಡ್​ ಮೌಲ್ಯ ಶೇ. 50ಕ್ಕೂ ಅಧಿಕ ಏರಿಕೆಯಾಗಿದೆ. ಆಟೋಮೊಬೈಲ್​, ಬ್ಯಾಂಕ್​, ದಿನನಿತ್ಯದ ಬಳಕೆಯ, ಜೀವನಶೈಲಿ ಉತ್ಪನ್ನಗಳು, ಸೌಂದರ್ಯ ಆರೈಕೆ ಮತ್ತು ಶಿಕ್ಷಣ ಸಂಸ್ಥೆಗಳು ಮುಂತಾದ ಬ್ರ್ಯಾಂಡ್​​ಗಳ ಪ್ರಚಾರ ಅವಕಾಶ ಒಲಿದುಬರುವ ನಿರೀಕ್ಷೆ ಇದೆ. ಹಿಂದೆ ಪ್ರತಿ ಬ್ರ್ಯಾಂಡ್​ ಪ್ರಚಾರಕ್ಕೆ 60 ಲಕ್ಷ ರೂ. ಪಡೆಯುತ್ತಿದ್ದ ಜೆಮೀಮಾ ಇನ್ನು 1.5 ಕೋಟಿ ರೂ. ಪಡೆಯಬಹುದು. 40 ಲಕ್ಷ ರೂ. ಪಡೆಯುತ್ತಿದ್ದ ಶೆಫಾಲಿ ಒಂದು ಕೋಟಿ ರೂ.ಗೂ ಅಧಿಕ ಮೊತ್ತ ಗಳಿಸಬಹುದು ಎಂದು ವಿಶ್ಲೇಷಿಸಿದ್ದಾರೆ. ತಂಡದ ಇತರ ಆಟಗಾರ್ತಿಯರ ಬ್ರ್ಯಾಂಡ್​ ಮೌಲ್ಯ ಕೂಡ ಶೇ. 25ಕ್ಕಿಂತ ಅಧಿಕ ಏರಿಕೆಯಾಗಿದೆ.

ಹಿಂಬಾಲಕರ ಸಂಖ್ಯೆ ಏರಿಕೆ: ವಿಶ್ವಕಪ್​ ಗೆಲುವಿನಿಂದ ಸಾಮಾಜಿಕ ಜಾಲತಾಣದಲ್ಲಿ ಮಹಿಳಾ ಕ್ರಿಕೆಟಿಗರ ಹಿಂಬಾಲಕರ (Followers) ಸಂಖ್ಯೆಯೂ ಏರಿಕೆಯಾಗಿದೆ. ಜೆಮೀಮಾ ಹಿಂಬಾಲಕರ ಸಂಖ್ಯೆ 3.3 ದಶಲಕ್ಷ ಅಂದರೆ ದ್ವಿಗುಣಗೊಂಡಿದ್ದರೆ, ಶೆಫಾಲಿ ಹಿಂಬಾಲಕರ ಸಂಖ್ಯೆಯೂ ಶೇ. 50 ಏರಿಕೆಯಾಗಿದೆ. ಇದು ಕೂಡ ಅವರ ಬ್ರ್ಯಾಂಡ್​​ ಮೌಲ್ಯ ಏರಿಕೆಗೆ ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net