ಒಬ್ಬರಲ್ಲ, ಇಬ್ಬರಲ್ಲ... ಐಪಿಎಲ್​ ತಂಡಗಳಿಗೆ ಕೈಕೊಟ್ಟ ನಾಲ್ವರು ಆಸೀಸ್​ ಬೌಲರ್​ಗಳು! ಫ್ರಾಂಚೈಸಿ ಲೆಕ್ಕಾಚಾರ ತಲೆಕೆಳಗು

ಆಸೀಸ್​ ಆಟಗಾರರು
ಆಸೀಸ್​ ಆಟಗಾರರು
Published on

ಪ್ರಮುಖ ಮುಖ್ಯಾಂಶಗಳು

  • ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭ
  • ಆರ್​ಸಿಬಿ ಮತ್ತು ಎಸ್​ಆರ್​ಎಚ್​ ನಡುವೆ ಮೊದಲ ಪಂದ್ಯ
  • ಐಪಿಎಲ್​ ಶುರುವಿಗೂ ಮುನ್ನವೇ ನಾಲ್ವರು ಆಸೀಸ್​ ಆಟಗಾರರು ಅಲಭ್ಯ
IPL 2026: ಐಪಿಎಲ್​ 19ನೇ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಉದ್ಘಾಟನಾ ಪಂದ್ಯವು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಈ ಮಧ್ಯೆ, ಸ್ಟಾರ್​ ಆಟಗಾರರ ಅಲಭ್ಯತೆ ಕಾಡುತ್ತಿದ್ದು, ನಾಲ್ವರು ಆಸ್ಟ್ರೇಲಿಯಾ ಕ್ರಿಕೆಟಿಗರು ತಮ್ಮ ತಮ್ಮ ತಂಡಗಳಿಗೆ ಕೈಕೊಟ್ಟಿರುವುದು ಸದ್ಯ ಫ್ರಾಂಚೈಸಿಗಳ ಲೆಕ್ಕಾಚಾರಗಳನ್ನೇ ತಲೆಕೆಳಗಾಗಿಸಿದೆ.
ಈ ಮೊದಲು ಆಸ್ಟ್ರೇಲಿಯಾ ತಂಡದ ಕ್ಯಾಪ್ಟನ್​ ಪ್ಯಾಟ್​ ಕಮ್ಮಿನ್ಸ್​​ ಮತ್ತು ವೇಗಿ ಜೋಶ್​ ಹೇಜಲ್​ವುಡ್​ ತಾವು ಐಪಿಎಲ್​ಗೆ ಇರೋದಿಲ್ಲ ಎಂದು ಸ್ಪಷ್ಟಪಡಿಸಿದರು. ಇದರಲ್ಲಿ, ಸನ್​ರೈಸರ್ಸ್​ ಹೈದರಾಬಾದ್​ ನಾಯಕನಾಗಿರುವ ಕಮ್ಮಿನ್ಸ್​, ತಂಡ ಸೇರುವುದಿಲ್ಲ ಎಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ, ಅವರ ಬದಲಿಗೆ ನಾಯಕನ ಸ್ಥಾನದಲ್ಲಿ ಇಶಾನ್ ಕಿಶನ್ ತಂಡವನ್ನು ಮುನ್ನಡೆಸಲಿದ್ದಾರೆ. ಸದ್ಯದ ಮಟ್ಟಿಗೆ ಆರ್​ಸಿಬಿಯ ಮೊದಲೆರೆಡು ಪಂದ್ಯಗಳಿಂದ ದೂರ ಉಳಿದಿರುವ ಜೋಶ್​, ತದನಂತರ ತಂಡವನ್ನು ಸೇರುವ ಮುನ್ಸೂಚನೆ ನೀಡಿದ್ದಾರೆ. ಆದರೆ, ಇಂಜುರಿಯಿಂದ ಸಂಪೂರ್ಣವಾಗಿ ಗುಣಮುಖರಾದರೆ ಮಾತ್ರ ಅವರು ತಂಡ ಸೇರಲಿದ್ದಾರೆ ಎಂಬ ಸಂಗತಿ ಇಲ್ಲಿ ಗಮನಾರ್ಹ.

ಕೆಲವು ಪಂದ್ಯಗಳಿಂದ ದೂರ

ಇವರ ಹಾದಿಯನ್ನೇ ಅನುಸರಿಸಿರುವ ಕೆಕೆಆರ್​ ವೇಗಿ ಮಿಚೆಲ್ ಸ್ಟಾರ್ಕ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್​ ಬೌಲರ್​ ನಾಥನ್ ಎಲ್ಲಿಸ್, ತಮ್ಮ ತಂಡಗಳ ಬೌಲಿಂಗ್​ ಯೂನಿಟ್​ಗೆ ದೊಡ್ಡ ಹೊಡೆತ ನೀಡಿದ್ದಾರೆ. ಇವರ ಬದಲಿಗೆ ಯಾರನ್ನು ಆಯಾ ಫ್ರಾಂಚೈಸಿಗಳು ಆಡಿಸಲಿದೆ? ಈ ರೀತಿ ಕಡೆಯಲ್ಲಿ ಕೈಕೊಡುವ ಆಟಗಾರರ ನಡೆಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು? ಎಂಬ ಪ್ರಶ್ನೆಗಳು ಸದ್ಯ ಕ್ರಿಕೆಟ್​ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿವೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net