ಇನ್ನೂ ಎಷ್ಟು ಹಾಳು ಮಾಡ್ತೀಯಾ? ಇಂಗ್ಲೆಂಡ್​ ಎದುರು ಸೋತ ಬೆನ್ನಲ್ಲೇ ಬಾಬರ್​ಗೆ ಪಾಕ್​ ಮಾಜಿ ಕ್ರಿಕೆಟಿಗ​ ಛೀಮಾರಿ | Babar Azam

ಪಾಕ್​ ಕ್ರಿಕೆಟಿಗ ಬಾಬರ್ ಅಜಮ್​
ಪಾಕ್​ ಕ್ರಿಕೆಟಿಗ ಬಾಬರ್ ಅಜಮ್​
Published on

ಪ್ರಮುಖ ಮುಖ್ಯಾಂಶಗಳು

  • ಇಂಗ್ಲೆಂಡ್​ ವಿರುದ್ಧ ಪಾಕ್​ಗೆ ಹೀನಾಯ ಸೋಲು
  • ಸೂಪರ್​-8 ಪಂದ್ಯ ಸೋತ ಬೆನ್ನಲ್ಲೇ ಪಾಕ್​ಗೆ ಭಾರೀ ಮುಖಭಂಗ
  • ಫ್ಲಾಪ್​ ಶೋ ನೀಡಿದ ಬಾಬರ್​ ಅಜಮ್​ಗೆ ಮಾಜಿ ಕ್ರಿಕೆಟಿಗ ಹಿಗ್ಗಾಮುಗ್ಗಾ ಕ್ಲಾಸ್​
Babar Azam: ನಿನ್ನೆ (ಫೆ.24) ಶ್ರೀಲಂಕಾದಲ್ಲಿ ನಡೆದ ಸೂಪರ್​-8 ಪಂದ್ಯದಲ್ಲಿ ಇಂಗ್ಲೆಂಡ್​ ಎದುರು ಪಾಕಿಸ್ತಾನ ಮಂಡಿಯೂರಿತು. ಕೊನೆಯವರೆಗೂ ಸಾಗಿದ ಪಂದ್ಯದಲ್ಲಿ ಕಡೆಗೂ ಆಂಗ್ಲರ ಪಡೆ ರೋಚಕ ಜಯ ಸಾಧಿಸಿತು. ಇದು ಪಾಕ್​ಗೆ ಭಾರೀ ಮುಖಭಂಗ ಉಂಟುಮಾಡಿತು. ಒಂದೆಡೆ, ಇಡೀ ತಂಡಕ್ಕೆ ಟೀಕೆ, ವ್ಯಂಗ್ಯಗಳು ಹರಿದುಬರುತ್ತಿದ್ದರೆ, ಪಾಕ್​ನ ಸ್ಟಾರ್​ ಬ್ಯಾಟರ್​ ಬಾಬರ್​ ಆಜಮ್​ಗೆ ಛೀಮಾರಿಗಳು ವ್ಯಕ್ತವಾಗುತ್ತಿವೆ. ಅದೂ ತಮ್ಮದೇ ತಂಡದ ಮಾಜಿ ಆಟಗಾರರಿಂದ ಎಂಬುದು ಇಲ್ಲಿ ಗಮನಾರ್ಹ.
ಮೊದಲು ಬ್ಯಾಟ್​ ಮಾಡಿದ ಪಾಕಿಸ್ತಾನ, 20 ಓವರ್​ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು 164 ರನ್​ ಗಳಿಸಿತು. ಈ ಸಾಧಾರಣ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್​ಗೆ ಆರಂಭಿಕ ಬ್ಯಾಟರ್​ಗಳೇ ಕೈಕೊಟ್ಟರು. ಇದು ತಂಡಕ್ಕೆ ದೊಡ್ಡ ಶಾಕ್​ ನೀಡಿದ್ದೇ ಆದರೂ ಕ್ಯಾಪ್ಟನ್​ ಹ್ಯಾರಿ ಬ್ರೂಕ್​ ಅವರಿಂದ ಬಂದ ಇನ್ನಿಂಗ್ಸ್​ ಪಾಕಿಸ್ತಾನ ಹಾಕಿಕೊಂಡ ಲೆಕ್ಕಾಚಾರವನ್ನೇ ಬದಲಿಸಿ, ರೋಚಕವಾಗಿ ಗೆದ್ದು ಬೀಗಿತು. ಇಲ್ಲಿಂದ ಭಾರೀ ಮುಖಭಂಗ ಅನುಭವಿಸಿದ ಪಾಕ್​ಗೆ ತಂಡದ ಬ್ಯಾಟರ್​ ಬಾಬರ್​ ಅಜಮ್​ ಉಪಸ್ಥಿತಿ ಸದ್ಯ ದೊಡ್ಡ ಸಂಕಷ್ಟಕ್ಕೆ ಸಿಲುಕಿಸಿದೆ. 
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿಯೂ ಎಂದಿನಂತೆ ಕಳಪೆ ಪ್ರದರ್ಶನ ಮುಂದುವರಿಸಿದ ಬಾಬರ್, ಆಡಿದ 25 ಎಸೆತಗಳಲ್ಲಿ ಕೇವಲ 24 ರನ್ ಸಿಡಿಸಿ ಔಟ್ ಆದರು. ಇದನ್ನು ತೀವ್ರವಾಗಿ ಖಂಡಿಸಿದ ಪಾಕಿಸ್ತಾನ ಕ್ರಿಕೆಟಿಗ ಇಮಾದ್ ವಾಸಿಮ್, ಈತನೊಬ್ಬ ಕ್ರಿಮಿನಲ್​ ಎಂದು ಕರೆಯುವ ಮೂಲಕ ತೀವ್ರ ಕಿಡಿಕಾರಿದ್ದಾರೆ. ಸತತವಾಗಿ ಫ್ಲಾಪ್​ ಶೋ ನೀಡುತ್ತಿರುವ ಬಾಬರ್​ಗೆ ತಂಡದಿಂದ ಗೇಟ್​ಪಾಸ್ ಕೊಡುವುದೇ ಉತ್ತಮ ಎಂದಿದ್ದಾರೆ. ​ 
ಈ ಕುರಿತಂತೆ ಜಿಯೋ ನ್ಯೂಸ್‌ನಲ್ಲಿ ಮಾತನಾಡಿದ ಇಮಾದ್, ತಂಡದ ಮೇಲಿನ ಜವಾಬ್ದಾರಿಯನ್ನು ಹೊರಬೇಕಾದ ಆಟಗಾರನೇ ಇಂತಹ ಕಳಪೆ ಪ್ರದರ್ಶನ ನೀಡಿದರೆ ಹೇಗೆ? ಟಿ20 ವಿಶ್ವಕಪ್​ನಂತೆ ಟೂರ್ನಿಯಲ್ಲಿ ಯಾವ ರೀತಿ ಆಡಬೇಕಿತ್ತು? ಇದರ ಬದಲಿಗೆ ಬ್ಯಾಕ್​ ಟು ಬ್ಯಾಕ್​ ಫ್ಲಾಪ್​ ಶೋ ಕೊಡುತ್ತಿರುವುದು ಒಪ್ಪಲು ಆಗೋದಿಲ್ಲ. ಇನ್ನೂ ಎಷ್ಟು ಪಂದ್ಯ ಹೀಗೆ ಹಾಳು ಮಾಡ್ತೀಯಾ? ಎಂದು ಅಸಮಾಧಾನ ಹೊರಹಾಕಿದ್ದಾರೆ. 
ಇದು ನಿಜಕ್ಕೂ ಅಪರಾಧವೇ! ಒಬ್ಬ ಹಿರಿಯ ಆಟಗಾರನಾಗಿ, ತಂಡದ ಮಾಜಿ ನಾಯಕನಾಗಿ ಹೀಗೆ ಮಾಡೋದು ಎಷ್ಟು ಸರಿ? ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿಯೂ ಇದೇ ರೀತಿ ಆಡಿದೆ. ಈಗ ಇಂಗ್ಲೆಂಡ್​ ಎದುರು ಸಹ ಹೀಗೆಯೇ. ನಮಗೆ ಬಾಬರ್ ಅಜಮ್​ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷ ಅಥವಾ ಅಸೂಯೆ ಇಲ್ಲ. ನನಗೆ ಇವರ ತಂಡದ ಮೀಟಿಂಗ್​ನಲ್ಲಿ ಏನೆಲ್ಲ ಆಗುತ್ತೆ ಅಂತ ಕುತೂಹಲ. ನನ್ನಿಂದ ತಪ್ಪಾಗಿದೆ ಅಂತ ಈತ ಕೈಎತ್ತಿ ಒಪ್ಪಿಕೊಳ್ಳುತ್ತಾನಾ? ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net